Mahashivratri 2023: ಇಂದು ಸಂಪೂರ್ಣ ದೇಶಾದ್ಯಂತ ಮಹಾಶಿವರಾತ್ರಿಯ ಮಹಾಪರ್ವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಾಧಿದೇವ ಮಹಾದೇವನಿಗೆ ಸಮರ್ಪಿತವಾದ ಈ ಪರ್ವಕ್ಕೂ ಮುನ್ನ ಗ್ರಹಗಳ ಭಾರಿ ನಡೆಬದಲಾವಣೆಗಳು ನಡೆದು ಹೋಗಿವೆ. ಫೆಬ್ರವರಿ 13 ರಂದು ಗ್ರಹಗಳ ರಾಜ ಸೂರ್ಯದೇವ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನೊಂದೆಡೆ ಧನಸಂಪತ್ತು ಮತ್ತು ವೈಭವ ಕಾರಕ ಗ್ರಹವಾಗಿರುವ ಶುಕ್ರ ಮೀನ ರಾಶಿಯನ್ನು ಪ್ರವೇಶಿಸಿದೆ. ಮಹಾಶಿವರಾತ್ರಿಗೂ ಮುನ್ನ ನಡೆದ ಈ ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ ಅತ್ಯಂತ ಮಹತ್ವಪೂರ್ಣ ಎಂದು ಭಾವಿಸಲಾಗುತ್ತಿದೆ. ಜೋತಿಷ್ಯ ಪಂಡಿತರ ಪ್ರಕಾರ ಮಹಾಶಿವರಾತ್ರಿಗೂ ಮುನ್ನ ನಡೆದ ಈ ಗ್ರಹಗಳ ರಾಶಿ ಪರಿವರ್ತನೆ ಒಟ್ಟು ಐದು ರಾಶಿಗಳ ಜನರಿಗೆ ಭಾರಿ ಲಾಭ ನೀಡಲಿದ್ದು, ಈ ರಾಶಿಗಳ ಜನರ ಮೇಲೆ ಶಿವನ ಅಪಾರ ಕೃಪಾವೃಷ್ಠಿ ಇರಲಿದೆ ಎನ್ನಲಾಗಿದೆ. ಆ ಐದು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮಿಥುನ ರಾಶಿ: ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಮಿಥುನ ರಾಶಿಯವರಿಗೆ ಮಹಾಶಿವರಾತ್ರಿಯಂದು ಅತ್ಯಂತ ಶುಭ ಫಲಿತಾಂಶಗಳನ್ನು ನೀಡಲಿದೆ. ಇವರಿಗೆ ಆರ್ಥಿಕ ಲಾಭ ದೊರೆಯಲಿದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಶಕ್ತಿ ಮತ್ತು ಸಾಹಸ ಹೆಚ್ಚಾಗುತ್ತದೆ. ಘನತೆ ಗೌರವ ಕೂಡ ಹೆಚ್ಚಾಗಲಿದೆ ಹೆಚ್ಚಾಗಲಿದೆ. ಸಂಬಂಧದ ಕುರಿತು ಹೇಳುವುದಾದರೆ, ದಾಂಪತ್ಯ ಜೀವನದಲ್ಲಿ ಸಂತೋಷ ತುಂಬಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.


ಸಿಂಹ ರಾಶಿ: ಸಿಂಹ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದುವ ಸಾಧ್ಯತೆಯಿದೆ. ಯೋಜನೆಗಳು ಮತ್ತು ಉಪಾಯಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ. ಉದ್ಯೋಗದ ಚಿಂತೆಯಲ್ಲಿದ್ದವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ನೀವು ಇನ್ಕ್ರಿಮೆಂಟ್ ಮತ್ತು ಬಡ್ತಿ ಪಡೆಯಬಹುದು. ಶಿಕ್ಷಣ ಕ್ಷೇತ್ರದಲ್ಲೂ ಎಲ್ಲವೂ ಒಳ್ಳೆಯದೇ ಆಗಲಿದೆ. ಸರ್ಕಾರಿ ಉದ್ಯೋಗಗಳ ತಯಾರಿಯಲ್ಲಿ ತೊಡಗಿರುವ ಜನರು ಒಳ್ಳೆಯ ಸುದ್ದಿ ಸಿಗಬಹುದು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.


ಕನ್ಯಾ ರಾಶಿ: ಈ ಮಹಾಶಿವರಾತ್ರಿಯನ್ನು ಕನ್ಯಾ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಲಾಭಗಳು ಇರಲಿವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಸುಖ ಮತ್ತು ಸಮೃದ್ಧಿ ಪ್ರಾಪ್ತಿಯಾಗಲಿದೆ.  ನೀವು ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದಕ್ಕೆ ಸಮಯ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಮಾಡಿದ ಹೂಡಿಕೆಗಳು ದೀರ್ಘಾವಧಿಯ ಲಾಭವನ್ನು ನೀಡುತ್ತವೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ.  ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಸುಮಧುರತೆಯನ್ನು ಅನುಭವಿಸುವಿರಿ.


ಇದನ್ನೂ ಓದಿ-Mahashivratri 2023 ದಿನ ವಿಶೇಷ ಕಾಕತಾಳೀಯ ನಿರ್ಮಾಣ, ಹೊಳೆಯಲಿದೆ ಈ ಜನರ ಭಾಗ್ಯ!


ಧನು ರಾಶಿ: ಮಹಾಶಿವರಾತ್ರಿಯಿಂದಲೇ ಧನು ರಾಶಿಯ ಶುಭ ದಿನಗಳೂ ಆರಂಭವಾಗಲಿವೆ. ಹಣದ ವ್ಯವಹಾರಗಳಿಗೆ ಸಮಯ ಅನುಕೂಲಕರವಾಗಿದೆ. ನೀವು ಸಾಲದ ರೂಪದಲ್ಲಿ ನೀಡಿದ ಹಣ ನಿಮ್ಮತ್ತ ಮರಳಲಿದೆ. ಹೂಡಿಕೆಗೆ ಸಮಯವೂ ಉತ್ತಮವಾಗಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ವ್ಯಾಪಾರ ಯೋಜನೆಗಳು ನಿಮಗೆ ಸಾಕಷ್ಟು ಲಾಭವನ್ನು ನೀಡುತ್ತವೆ. ಸಮಾಜದಲ್ಲಿ ಪ್ರತಿಷ್ಠೆ, ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎಚ್ಚರ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ.


ಇದನ್ನೂ ಓದಿ-Mahashivratri: ಶನಿಯ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿಪಡೆಯಲು ಈ ಉಪಾಯ ಮಾಡಿ!


ಕುಂಭ ರಾಶಿ: ಮಹಾಶಿವರಾತ್ರಿಯ ಹಬ್ಬವು ಕುಂಭ ರಾಶಿಯವರ ಭವಿಷ್ಯವನ್ನು ಉಜ್ವಲಗೊಳಿಸಲಿದೆ. ಮಹಾಶಿವರಾತ್ರಿಯಿಂದ ನೀವು ಎಲ್ಲದರಲ್ಲೂ ಯಶಸ್ಸನ್ನು ಪಡೆಯುವಿರಿ. ಕುಂಭ ರಾಶಿಯ ಜನರಿಗೆ ಹಠಾತ್ ಧನಲಾಭದ ಸಾಧ್ಯತೆಯಿದೆ. ಹಣ ಉಳಿತಾಯವಾಗಲಿದೆ. ಖರ್ಚಿನ ಮೇಲೆ ನಿಮ್ಮ ನಿಯಂತ್ರಣ ಹೆಚ್ಚಾಗಲಿದೆ. ನೀವು ಉತ್ತಮ ಉದ್ಯೋಗದ ಅವಕಾಶವನ್ನು ಸಹ ಪಡೆಯಬಹುದು. ಈ ಅವಧಿಯು ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಒಡಹುಟ್ಟಿದವರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಪೋಷಕರ ಸಂಪೂರ್ಣ ಬೆಂಬಲ ಕೂಡ ನಿಮಗೆ ಸಿಗಲಿದೆ.


ಇದನ್ನೂ ಓದಿ-Mahashivratri 2023: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಮಹಾಶಿವರಾತ್ರಿಯ ದಿನ ಈ ಉಪಾಯ ಮಾಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.