Mahashivratri 2023 ದಿನ ವಿಶೇಷ ಕಾಕತಾಳೀಯ ನಿರ್ಮಾಣ, ಹೊಳೆಯಲಿದೆ ಈ ಜನರ ಭಾಗ್ಯ!

Mahashivratri 2023: ಈ ಬಾರಿಯ ಮಹಾಶಿವರಾತ್ರಿ ದಿನ ಅದ್ಭುತ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಏಕೆಂದರೆ 6 ಗ್ರಹಗಳು ಮೂರು ರಾಶಿಗಳಲ್ಲಿ ಇರಲಿವೆ. ಇದಲ್ಲದೆ, ಈ ದಿನ ಹಲವು ರಾಜಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿವೆ. ಹೀಗಿರುವಾಗ ಮಹಾಶಿವರಾತ್ರಿಯ ದಿನ ಯಾವೆಲ್ಲಾ ರಾಶಿಗಳಿಗೆ ಲಾಭ ಒಲಿದು ಬರಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Feb 16, 2023, 12:19 PM IST
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ.
  • ಮತೊಂದೆದೆ ಫೆಬ್ರವರಿ 13 ರಂದು ಸೂರ್ಯನೂ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ,
  • ನಾಳೆ ಫೆಬ್ರವರಿ 18 ರಂದು ಚಂದ್ರನು ಕೋಅ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
Mahashivratri 2023 ದಿನ ವಿಶೇಷ ಕಾಕತಾಳೀಯ ನಿರ್ಮಾಣ, ಹೊಳೆಯಲಿದೆ ಈ ಜನರ ಭಾಗ್ಯ! title=
ಮಹಾ ಶಿವರಾತ್ರಿ 2023 ಅಪರೂಪದ ಯೋಗ

Mahashivratri 2023 Special Yog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಪರಿವರ್ತನೆ ಹಾಗೂ ಗ್ರಹಗಳ ಮೈತ್ರಿಗಳು ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಶುಭ ಅಥವಾ ಅಶುಭ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಅಲ್ಲದೆ, ಫೆಬ್ರವರಿ ತಿಂಗಳಲ್ಲಿ, ಕುಂಭದಲ್ಲಿ ಮೂರು ಗ್ರಹಗಳ ಸಂಯೋಗವಿದೆ. ಇಂತಹ ಪರಿಸ್ಥಿತಿಯಲ್ಲಿ, ಇದು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಮತೊಂದೆದೆ ಫೆಬ್ರವರಿ 13 ರಂದು ಸೂರ್ಯನೂ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ, ನಾಳೆ ಫೆಬ್ರವರಿ 18 ರಂದು ಚಂದ್ರನು ಕೋಅ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇಂತಹ ಸಂದರ್ಭದಲ್ಲಿ ಮೂರು ಗ್ರಹಗಳ ಸಂಯೋಗದಿಂದ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳಲಿದೆ. ಈ ಶುಭ ಯೋಗದಿಂದಾಗಿ ಈ ಮೂರು ರಾಶಿಯವರಿಗೆ ವಿಶೇಷ ಲಾಭಗಳು ಸಿಗಲಿವೆ.

ಮಹಾಶಿವರಾತ್ರಿಯಂದು ಅಪರೂಪದ ಕಾಕತಾಳೀಯ
ಮಹಾಶಿವರಾತ್ರಿಯ ಸಂದರ್ಭದಲ್ಲಿ 6 ಗ್ರಹಗಳು 3 ರಾಶಿಗಳಲ್ಲಿ ಇರಲಿವೆ. ಇದರಲ್ಲಿ ಶುಕ್ರ ಮತ್ತು ಗುರು ಮೀನ ರಾಶಿಯಲ್ಲಿ ಒಟ್ಟಿಗೆ ಇರಲಿದ್ದಾರೆ. ತಂದೆ ಮತ್ತು ಮಗನಾದ ಬುಧ ಮತ್ತು ಚಂದ್ರರು ಮಕರ ರಾಶಿಯಲ್ಲಿ ಮತ್ತು ಸೂರ್ಯ, ಶನಿ ಕುಂಭದಲ್ಲಿ ಇರಲಿದ್ದಾರೆ. ಈ ರೀತಿಯಾಗಿ, ಮಕರ, ಕುಂಭ ಮತ್ತು ಮೀನ ಮೂರೂ ರಾಶಿಗಳಲ್ಲಿ 6 ಗ್ರಹಗಳ ಅಪರೂಪದ ಸಂಯೋಜನೆ ಇರುತ್ತದೆ. ಇದರಿಂದ ಅನೇಕ ರಾಜಯೋಗಗಳು ರೂಪುಗೊಳ್ಳುತ್ತವೆ. ಉದಾಹರಣೆಗೆ, ಮಾಳವ್ಯ ಯೋಗ, ಹಂಸ ಯೋಗ ಮತ್ತು ಶಶ ಯೋಗಗಳು ಇದರಿಂದ ರೂಪುಗೊಳ್ಳಲಿವೆ. ಇದಲ್ಲದೇ ಈ ದಿನ ಶನಿ ಪುಷ್ಯ ಯೋಗ ಕೂಡ ರೂಪುಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಮತ್ತು ಶನಿಯ ಸಂಯೋಜನೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಶುಕ್ರ, ಗುರು ಮತ್ತು ನೆಪ್ಚೂನ್ ಮೀನ ರಾಶಿಯಲ್ಲಿಯೇ ಉಳಿಯಲಿದ್ದಾರೆ.

ಮೇಷ ರಾಶಿ 
ಕುಂಭ ರಾಶಿಯ ಎಲ್ಲಾ ಮೂರು ಗ್ರಹಗಳ ಸಂಯೋಜನೆಯು ಮೇಷ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ. ಏಕೆಂದರೆ ಈ ರಾಶಿಯ ಏಕಾದಶ ಭಾವದಲ್ಲಿ ಎಲ್ಲಾ ಮೂರು ಗ್ರಹಗಳ ಸಂಯೋಜನೆ ಇರಲಿದೆ. ಇಂತಹ ಪರಿಸ್ಥಿತಿಯಲ್ಲಿ, ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಈ ರಾಶಿಗಳ ಜನರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭವಾಗಲಿದೆ.

ವೃಷಭ ರಾಶಿ
ತ್ರಿಗ್ರಹಿ ಯೋಗವು ಈ ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ. ಸೂರ್ಯ, ಚಂದ್ರ ಮತ್ತು ಶನಿಗಳ ಸಂಯೋಜನೆಯೊಂದಿಗೆ, ಈ ರಾಶಿಯ ಜನರು ಆರ್ಥಿಕ ಲಾಭವನ್ನು ಪಡೆಯುತ್ತಾರೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಇದರೊಂದಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ.

ಇದನ್ನೂ ಓದಿ-48 ಗಂಟೆಗಳ ಬಳಿಕ ಶುಕ್ರ ಗೋಚರ, ಹಂಸ-ಮಾಲವ್ಯ ರಾಜಯೋಗಗಳ ಸೃಷ್ಟಿ, ಈ ಜನರಿಗೆ ಅಪಾರ ಧನ ಪ್ರಾಪ್ತಿ !

ಮಕರ ರಾಶಿ
ಈ ರಾಶಿಯಲ್ಲಿ ಸೂರ್ಯ, ಚಂದ್ರ ಮತ್ತು ಶನಿಗಳ ಸಂಯೋಗ ದ್ವಿತೀಯ ಭಾವದಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. ಈ ಮನೆಯನ್ನು ಮಾತು ಮತ್ತು ಸಂಪತ್ತಿನ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕರ ರಾಶಿಯವರಿಗೆ ದಿಢೀರ್ ಹಣ ಸಿಗಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ನಿಮ್ಮ ಮಾತು ಅನೇಕ ಕೆಲಸಗಳಲ್ಲಿ ನಿಮಗೆ ಯಶಸ್ಸನ್ನು ನೀಡಲಿದೆ.

ಇದನ್ನೂ ಓದಿ-12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!

ಕುಂಭ ರಾಶಿ
ಈ ರಾಶಿಯ ಜನರ ಜಾತಕದ ಲಗ್ನ ಭಾವದಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ ಜನರ ಪ್ರತಿಯೊಂದು ಆಸೆಯೂ ಈಡೇರಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಹೊಸ ಉದ್ಯೋಗದ ಹುಡುಕಾಟಕ್ಕೆ ತೆರೆಬೀಳಲಿದೆ. ಇದರೊಂದಿಗೆ ನಿಮ್ಮ ಆರೋಗ್ಯದಲ್ಲಿಯೂ ಕೂಡ ವೃದ್ಧಿ ಕಾಣಿಸಿಕೊಳ್ಳಲಿದೆ. 

ಇದನ್ನೂ ಓದಿ-February 27 ರಿಂದ ಗ್ರಹಗಳ ರಾಜಕುಮಾರನ ವಿಶೇಷ ಕೃಪೆಯಿಂದ ಈ 3 ರಾಶಿಗಳ ಭಾಗ್ಯೋದಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸ್ಮಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News