ತಿರುಪತಿ : ರಜೆಯ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ತಿರುಪತಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಟೋಕನ್ ತೆಗೆದುಕೊಳ್ಳದೆ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಅಂದರೆ ಶ್ರೀವಾರಿ ದರ್ಶನ ಪಡೆಯುವ ಭಕ್ತರು ಸುಮಾರು 30ರಿಂದ 40 ಗಂಟೆಗಳವರೆಗೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾಯಬೇಕಾಗುತ್ತದೆ. ಸಾಮಾನ್ಯ ಭಕ್ತರ ಸಮಸ್ಯೆಯನ್ನು ಪರಿಹರಿಸಲು, ಟಿಟಿಡಿ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ವಿಐಪಿ ಬ್ರೇಕ್ ದರ್ಶನ  ಮತ್ತು ಆರ್ಜಿತ ಸೇವೆ ಕುರಿತು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)  ನಿಯಮವನ್ನು ಬದಲಾಯಿಸಿದೆ. ಇದರ ಪ್ರಕಾರ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸುಪ್ರಭಾತ ಸೇವೆಗಾಗಿ ನೀಡಲಾದ ಕೋಟಾವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಇದರ ಮೂಲಕ ದರ್ಶನಕ್ಕಾಗಿ ಕಾಯುವ  20 ನಿಮಿಷಗಳನ್ನು ಉಳಿತಾಯ ಮಾಡಿದಂತಾಗುತ್ತದೆ. 


COMMERCIAL BREAK
SCROLL TO CONTINUE READING

ಗುರುವಾರದಂದು ನಡೆಯುವ ಸಾಪ್ತಾಹಿಕ ತಿರುಪ್ಪವಾಡ ಸೇವೆಯನ್ನು ಭಕ್ತರಿಲ್ಲದೆ ನಡೆಸಲು ಟಿಟಿಡಿ ನಿರ್ಧರಿಸಿದೆ. ಈ ಮೂಲಕ ಕಾಯುವಿಕೆಯ 30 ನಿಮಿಷಗಳನ್ನು ಉಳಿಸಿದಂತಾಗುತ್ತದೆ. 


ಇದನ್ನೂ ಓದಿ : ಭಾಷೆಯನ್ನು ಹೊಸದುಗೊಳಿಸುವ ʼನಾಗರ ನುಂಗಿದ ನವಿಲುʼ ಪುಸ್ತಕದ ಬಗ್ಗೆ ನಿಮಗೆಷ್ಟು ಗೊತ್ತು.?


ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ದರ್ಶನಕ್ಕೆ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ. ಇದರಿಂದ ಮತ್ತೆ ಮೂರು ಗಂಟೆಗಳ ಕಾಲ ಉಳಿತಾಯವಾಗುತ್ತದೆ. ವಿಐಪಿ ಬ್ರೇಕ್ ದರ್ಶನವನ್ನು ಸ್ವತಃ ಬರುವ ವಿಐಪಿಗಳಿಗೆ ಮಾತ್ರ ನೀಡಲಾಗುವುದು. ಇದಕ್ಕಾಗಿ ಪ್ರತಿದಿನ ಮೂರು ಗಂಟೆಗಳ ಕಾಲ ನಿಗದಿಪಡಿಸಲಾಗಿದೆ. ಆದರೆ ವಿಐಪಿಗಳ ಶಿಫಾರಸ್ಸಿನ ಮೇರೆಗೆ ಯಾರಿಗೂ ವಿಐಪಿ ದರ್ಶನ ಇರುವುದಿಲ್ಲ. ಟಿಟಿಡಿ ಮಾಡಿರುವ ಈ ಬದಲಾವಣೆ ಜೂನ್ 30 ರವರೆಗೆ ಜಾರಿಯಲ್ಲಿರುತ್ತವೆ. 


ಸಾಮಾನ್ಯ ಯಾತ್ರಾರ್ಥಿಗಳು ದೇವರ ದರ್ಶನಕ್ಕೆ ಗಂಟೆ ಗಟ್ಟಲೆ ಕಾಯುವ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ನಿಯಮಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಟಿಟಿಡಿ ತೆಗೆದುಕೊಂಡಿರುವ ಹೊಸ ಬದಲಾವಣೆಗಳಿಗೆ ಸಹಕರಿಸುವಂತೆ ದೇವಾಲಯ ಮಂಡಳಿ ಭಕ್ತರು ಮತ್ತು ವಿಐಪಿಗಳಲ್ಲಿ ಮನವಿ ಮಾಡಿದೆ.


ಇದನ್ನೂ ಓದಿ : Astro Tips: ಈ ರಾಶಿಯವರಿಗೆ ದೇವರ ಕೃಪೆಯಿಂದ ಅದೃಷ್ಟದ ಜೊತೆಗೆ ಧನಲಾಭವಾಗಲಿದೆ!


ತಿಮ್ಮಪ್ಪನ ದರ್ಶನಕ್ಕೆ ನಿತ್ಯ 18ರಿಂದ 19 ಗಂಟೆ ಸಾಮಾನ್ಯ  ಭಕ್ತರಿಗೆ, 2ರಿಂದ 3 ಗಂಟೆ ವಿಐಪಿಗಳಿಗೆ ಮೀಸಲಿಡಲಾಗಿದೆ. 30 ಗಂಟೆಗೂ ಹೆಚ್ಚು ಕಾಲ ಕಾಯಬೇಕಾದ ಸಂದರ್ಭ ಬಂದಾಗ ಭಕ್ತರಿಗೆ ಅನ್ನಸಂತರ್ಪಣೆ ನೀಡಲಾಗುತ್ತದೆ. ಬೆಳಿಗ್ಗೆ 7 ಗಂಟೆಗೆ ಉಪಹಾರ ಮತ್ತು ಮಧ್ಯಾಹ್ನ 12 ಗಂಟೆಗೆ ಊಟ ನೀಡಲಾಗುತ್ತದೆ. ಇದಲ್ಲದೇ ಭಕ್ತರಿಗೆ ಮಧ್ಯೆ ಹಾಲು, ಸಂಜೆ ತಿಂಡಿ ವ್ಯವಸ್ಥೆ ಕೂಡಾ ಮಾಡಲಾಗಿದೆ. ಅಲ್ಲದೆ ಭಕ್ತರ ಮನರಂಜಿಸಲು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.