ಭಾಷೆಯನ್ನು ಹೊಸದುಗೊಳಿಸುವ ʼನಾಗರ ನುಂಗಿದ ನವಿಲುʼ ಪುಸ್ತಕದ ಬಗ್ಗೆ ನಿಮಗೆಷ್ಟು ಗೊತ್ತು.?

Nagara Nungida Navilu : ವೀರಣ್ಣ ಮಡಿವಾಳರ ಪ್ರಕಾರ ಬರವಣಿಗೆ ಎಂಬುದು ಬದುಕಲು ಬೇಕಾದ ಒಂದು ಉತ್ಕೃಷ್ಟ ಬದ್ಧತೆ. ಇವರು ಹೆಚ್ಚು ತೀವ್ರವಾಗಿ ಬರೆಯುತ್ತಿರುವ ಕವಿ. ಹಾಗಾಗಿ ಅವರ ಅಕ್ಷರಗಳಲ್ಲಿ ಎಲ್ಲಿಯೂ ಲೋಪದೋಷಗಳು ಕಂಡುಬರುವುದಿಲ್ಲ.   

Written by - Zee Kannada News Desk | Last Updated : Jun 2, 2023, 09:10 AM IST
  • ಬರವಣಿಗೆ ನನ್ನ ಉಸಿರು, ಬರವಣಿಗೆ ಮತ್ತು ಕೃತಿ ನನ್ನ ಜೀವಂತಿಕೆ.
  • ನನ್ನೊಳಗಿರುವುದು ಆತ್ಮಪೂರ್ವಕ ಶ್ರದ್ಧೆ, ಶುದ್ಧ ಪ್ರಾಮಾಣಿಕತೆ.
  • ಶಿಸ್ತು ಕ್ರಮ ಜರುಗಿಸುವುದಾರದರೇ ಜರುಗಿಸಲಿ.
ಭಾಷೆಯನ್ನು ಹೊಸದುಗೊಳಿಸುವ ʼನಾಗರ ನುಂಗಿದ ನವಿಲುʼ ಪುಸ್ತಕದ ಬಗ್ಗೆ ನಿಮಗೆಷ್ಟು ಗೊತ್ತು.?  title=

Veeranna Madivalar : ಕೆಲವು ತಿಂಗಳುಗಳ ಹಿಂದೆ ವೀರಣ್ಣ ಮಡಿವಾಳರ ಅವರು ಸರ್ಕಾರಿ ಶಾಲೆಗಳ ವಿಲೀನ ಕ್ರಮ ವಿರೋದಿಸಿ ದಿಟ್ಟವಾಗಿ ವಾಸ್ತವದ ಬಗ್ಗೆ ಬರೆದಿದ್ದರು. ಎಲ್ಲ ಸಾಮಾಜಿಕ ಜಾಲತಾನದಲ್ಲಿ ಪೋಸ್ಟ್‌ ಹಂಚಿಕೊಂಡ ವೀರಣ್ಣ ಸರ್ಕಾರಿ ಶಾಲೆ ಮುಚ್ಚಿದರೆ ಯಾರಿಗಾದರೂ ಸಂತೋಷವಾಗುತ್ತದೆಯೇ? ಎಂದು ಕೇಳಿದರು. ಸರ್ಕಾರಿ ಶಾಲೆಯ ಶಿಸ್ತು ಸೌಂದರ್ಯ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು ನಾವು. ಈಗ ನನ್ನ ಮೇಲೆಯೇ ಶಿಸ್ತು ಕ್ರಮ ಜರುಗಿಸುವುದಾದರೇ ಅದು ಕೂಡ ನಡೆಯಲಿ.

ಬರವಣಿಗೆ ನನ್ನ ಉಸಿರು, ಬರವಣಿಗೆ ಮತ್ತು ಕೃತಿ ನನ್ನ ಜೀವಂತಿಕೆ. ನನ್ನೊಳಗಿರುವುದು ಆತ್ಮಪೂರ್ವಕ ಶ್ರದ್ಧೆ, ಶುದ್ಧ ಪ್ರಾಮಾಣಿಕತೆ. ಶಿಸ್ತು ಕ್ರಮ ಜರುಗಿಸುವುದಾರದರೇ ಜರುಗಿಸಲಿ. ಉತ್ತರ ಕರ್ನಟಕದಲ್ಲಿ ತಮ್ಮ ಬರಹಗಳ ಮೂಲಕ ಮನೆಮಾತಾಗಿದ್ದ ಇವರಿಗೆ ಕವಿತೆಯ ಭಾಷೆಯ ಅರಿವಿದೆ. ಅವರ ಕವಿತೆಯ ಕೆಲವು ಸಾಲುಗಳಿಲ್ಲಿವೆ ನೋಡಿ ..

`ಹಡೆದವಳು
ಮೋಡಗಳ ಮೆಟ್ಟಿಲು ಮಾಡಿ
ಇಳಿದು ಬಂದಳು ಮೆಲ್ಲಗೆ ಶುಭ್ರ ನೀಲ ಗಗನದಿಂದ
ಉಸಿರಾಟಕ್ಕೆ ಮಾತ್ರ ಸಾಕ್ಷಿಯಂತಿದ್ದ ಈ ಕೊರಡಿನೆಡೆಗೆ
ಮೇಘದ ಎದೆಯ ಮೇಲೆ ಹೆಜ್ಜೆಯೂರಿ ನಡೆದುಬರುತಿರಲು
ಸಂತಸದ ಮಳೆ ಸುರಿಯಿತು
ಹಾಗೆ ಬಿದ್ದ ಒಂದು ಹನಿ ನನಗೂ ತಾಗಿ ಜೀವ ಬಂತುʼ

ಈ ಪದಗಳಲ್ಲಿ ಮನಮುಟ್ಟುವ ಭಾವವಿದೆ. ಅದೇ ಮೋಡಗಳ ಮೆಟ್ಟಿಲು ಮಾಡಿ ಇಳಿದು ಬಂದವಳು. ಅವರ ಪದಗಳ ಜೀವಂತಿಕೆಗೆ ಈ ಸಾಲುಗಳ ನಿದರ್ಶನ ಸಾಕೆನಿಸುತ್ತದೆ.

ಇದನ್ನೂ ಓದಿ-ನಟಿ ದೀಪಿಕಾ ದಾಸ್ ಬರೀ ಫೋಟೋಶೂಟ್ನಲ್ಲಿ ಬ್ಯುಸಿ.. ಯಾಕೆ ಸಿನಿಮಾ, ಸೀರಿಯಲ್ ಮಾಡುತ್ತಿಲ್ಲ..?

`ಹೊರಗೆ
ಬಿಟ್ಟು ಬಿಡದೆ ಮೋಡಗಳು ಅಳುತ್ತಿವೆ
ಇಂಥ ತಂಪಾದ ಹೊತ್ತಿನಲಿ
ನೀನು ನಾನಷ್ಟೇ ಇದ್ದ ಕ್ಷಣಗಳಲ್ಲಿ ನನ್ನ ಕಿವಿಯ ಹಗೇವಿನಲ್ಲಿ
ನೀನು ಮೆಲ್ಲಗೆ ಸುರಿದ ಪಿಸುಮಾತಿನ ಸುಡುಸುಡು ಕೆಂಡಗಳು ನೆನಪಿಗೆ ಬಂದು
ಗದ್ದಲ ಎಬ್ಬಿಸುತಿವೆ ನನ್ನೆದೆಯ ಶಾಂತ ಸಂತೆಯಲ್ಲಿ ದಿವ್ಯ ಮಂತ್ರಗಳು ನಾಚುತಿವೆ ಏನು ಮಾಡಲಿ
ಬೆಲ್ಲ ಬೇಡುತಿವೆ ಈ ಜಗದ ಕೆನ್ನೆ
ಒಂದು ಕ್ಷಣ ಆ ಯಕ್ಷ ಲೋಕದಲ್ಲಿ ಹಾಡುತ್ತ ದೇವತೆಗಳ ರಂಜಿಸುತಿರುವ
ನಿನ್ನ ತುಟಿಗಳ ಕಳುಹಿಸಿಕೊಡಬಾರದೆ ಈ ಲೋಕ ತಾನಿರುವವರೆಗೂ ನಿನ್ನ ನೆನಪಿಟ್ಟುಕೊಳ್ಳಬಹುದು
ನೀನೊಂದು ಹೂಮರ
ಶಿವನ ಮೂರನೇ ಕಣ್ಣಿನಿಂದ ಜಾರಿದ
ಅಮೃತದ ಹನಿ ನೀನು
ನೀನು ಮಾತ್ರ ಈ ಹಾಲಾಹಲವ ಎದಿರುಗೊಳ್ಳಬಲ್ಲೆ
ಕಡುಕಗ್ಗತ್ತಲ ಕಾಡಿನ ನಡುವೆ ಸಿಕ್ಕ ಹನಿ ಬೆಳಕು ನೀನುʼ

ಸಿಟ್ಟನ್ನು ಶಾಂತತೆಯ ಮೂಲಕ ವ್ಯಕ್ತ ಪಡಿಸಿದ ಕವಿಯ ಭಾಷೆಗೆ ಶರಣಾಗದ ಮನಸ್ಸುಗಳೇ ಇಲ್ಲ. ಈ ಮೇಲಿನ ಪದಗಳು ನಿರೀಕ್ಷಿತ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. 

ಹೀಗೆ ನಾಗರ ನುಂಗಿದ ನವಿಲು ಸಂಕಲನ 54 ಕವಿತೆಗಳನ್ನು ಒಳಗೊಂಡು ಭಾಷೆಯನ್ನು ಹೊಸದುಗೊಳಿಸಿದೆ. ಸಮಕಾಲೀನ ಅನೇಕ ಬದುಕಿನ ಬಿಕ್ಕಟ್ಟಿಗೆ ಕವಿತೆಗಳು ಧ್ವನಿಯಾಗಿವೆ. ದಿಕ್ಕೆಟ್ಟು ಹೋಗುತ್ತಿರುವ ಜನರ ನೈತಿಕತೆಯನ್ನು ಹೆಚ್ಚಿಸಿ ಸಮಾಜದಲ್ಲಿ ಸ್ವಾಸ್ಥ್ಯೆವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ಹೆಚ್ಚಿಸಲು ಕವಿಗಳು ಇಂಥ ಕವನಗಳು ಬರೆಯಬೇಕು ಎನ್ನುವುದು ಓದುಗರ ಆಶಯ. 

ಇದನ್ನೂ ಓದಿ-ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಮತ್ತೊಂದು ಏಷ್ಯಾ ಬುಕ್ - ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News