Makar Sankranti 2021: ಸ್ನಾನ ಹಾಗೂ ದಾನದ ಮಹಾಪರ್ವ ಎಂದೇ ಹೇಳಲಾಗುವ ಮಕರ ಸಂಕ್ರಾಂತಿ ಹಬ್ಭ ಈ ಬಾರಿ ಜನವರಿ 14 ರಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ದಿನ ಖಾರಮಾಸ ಮುಕ್ತಾಯವಾಗುತ್ತಿದೆ. ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದಂದು ವಿಶೇಷ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಬಾರಿಯ ಸಂಕ್ರಾಂತಿಯಂದು 5 ನಕ್ಷತ್ರಗಳು ಒಟ್ಟಿಗೆ ಬರಲಿವೆ. ಇದರಿಂದ ಈ ಮಹಾಪರ್ವದ ಮಹತ್ವ ಮತ್ತಷ್ಟು ಹೆಚ್ಚಾಗಲಿದೆ. ಈ ದಿನ ದಾನ ಮಾಡಿದರೆ, ಹಲವು ಪಟ್ಟು ಹೆಚ್ಚು ಫಲ ಸಿಗಲಿದೆ.


COMMERCIAL BREAK
SCROLL TO CONTINUE READING

ಮಕರ ಸಂಕ್ರಾಂತಿಗೂ ಒಂದು ದಿನ ಮೊದಲು ಲೋಹರಿ ಮಹಾಪರ್ವ ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಯ (Makar Sankranti 2021) ದಿನ ಗುಜರಾತ್ ಜನರು ಗಾಳಿಪಟ ಕೂಡ ಹಾರಿಸುತ್ತಾರೆ. ಈ ದಿನ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಖಿಚಡಿ ಪರ್ವ ಆಚರಿಸಲಾಗುತ್ತದೆ. ಈ ದಿನ ಖಿಚಡಿ ದಾನವಾಗಿ ನೀಡಲಾಗುತ್ತದೆ. ಹಲವೆಡೆ ಖಿಚಡಿ ಭೋಗ ಅರ್ಪಿಸಲಾಗುತ್ತದೆ. ಹೊಸ ಫಸಲು ಬರುವ ಹಿನ್ನೆಲೆ ಪೊಂಗಲ್ ಹಬ್ಬ ಆಚರಿಸಲಾಗುತ್ತದೆ. ಹಾಗಾದರೆ ಬನ್ನಿ ಮಕರ ಸಂಕ್ರಾಂತಿಯ ಶುಭ ದಿನದಂದು ಯಾವ ವಸ್ತುಗಳನ್ನು ದಾನವಾಗಿ ನೀಡಬೇಕು ತಿಳಿದುಕೊಳ್ಳೋಣ.


ಇದನ್ನು ಓದಿ- Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು


- ಮಕರ ಸಂಕ್ರಾಂತಿಯ ದಿನ ಖಿಚಡಿ ದಾನ ನೀಡಿದರೆ ಮನೆಗೆ ಸುಖ-ಶಾಂತಿಯ ಪ್ರವೇಶವಾಗುತ್ತದೆ ಎನ್ನಲಾಗುತ್ತದೆ.
- ಈ ದಿನ ಎಳ್ಳು-ಬೆಲ್ಲ ದಾನ ನೀಡಿದರೆ ಜಾತಕದಲ್ಲಿ ಸೂರ್ಯ ಹಾಗೂ ಶನಿಯ ಸ್ಥಿತಿ ಯಿಂದ ಶಾಂತಿ ಲಭಿಸುತ್ತದೆ.
- ಶನಿ ಸಾಡೆಸಾತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ತಾಮ್ರದ ಪಾತ್ರೆಯಲ್ಲಿ - ಕರಿಎಳ್ಳು ತುಂಬಿ ಬಡವರಿಗೆ ದಾನವಾಗಿ ನೀಡಬೇಕು.


ಇದನ್ನು ಓದಿ- Sankranthi : ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಯಾಕೆ ಬೀರುತ್ತಾರೆ ಗೊತ್ತಾ..

- ಈ ದಿನ ಉಪ್ಪಿನ ದಾನ ಕೂಡ ಶುಭ-ಲಾಭ ತರುತ್ತದೆ.
- ಮಾನ್ಯತೆಗಳ ಅನುಸಾರ ಈ ದಿನ ಹಸುವಿನ ತುಪ್ಪವನ್ನು ದಾನ ಮಾಡುವುದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. 
- ಈ ದಿನ ಧಾನ್ಯ ದಾನ ಮಾಡುವುದರಿಂದ ಅನ್ನಪೂರ್ಣೆ ಪ್ರಸನ್ನಳಾಗುತ್ತಾಳೆ .


ಇದನ್ನು ಓದಿ- Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.