Sankranthi : ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಯಾಕೆ ಬೀರುತ್ತಾರೆ ಗೊತ್ತಾ..?

ಮಕರ ಸಂಕ್ರಾತಿಯನ್ನು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನ ಪದ್ದತಿಯಲ್ಲಿ  ಆಚರಿಸಲಾಗುತ್ತದೆ.

Written by - Zee Kannada News Desk | Last Updated : Jan 11, 2021, 08:10 PM IST
  • ವರ್ಷದ ಮೊದಲ ಹಬ್ಬ ಮಕರ ಸಂಕ್ರಾತಿ
  • ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಹೆಸರಿನಲ್ಲಿ ಆಚರಣೆ
  • ಎಳ್ಳು ಬೆಲ್ಲ ಹಂಚುವ ಹಿಂದಿದೆ ಕಾರಣ
Sankranthi : ಸಂಕ್ರಾಂತಿ  ಹಬ್ಬಕ್ಕೆ ಎಳ್ಳು ಬೆಲ್ಲ ಯಾಕೆ ಬೀರುತ್ತಾರೆ ಗೊತ್ತಾ..? title=
ವರ್ಷದ ಮೊದಲ ಹಬ್ಬ ಮಕರ ಸಂಕ್ರಾತಿ (file photo)

ಬೆಂಗಳೂರು : ವರ್ಷದ ಮೊದಲ ಹಬ್ಬ ಮಕರ ಸಂಕ್ರಾತಿ. ಸಂಕ್ರಾತಿ ಹಬ್ಬಕ್ಕೆ ದಕ್ಷಿಣದಲ್ಲಿ ಭಾರೀ ಮಹತ್ವವಿದೆ. ಮಕರ ಸಂಕ್ರಾತಿಯನ್ನು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನ ಪದ್ದತಿಯಲ್ಲಿ  ಆಚರಿಸಲಾಗುತ್ತದೆ.

ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು  ಬದಲಾಯಿಸುತ್ತಾನೆ. ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಯತ್ತ ಸೂರ್ಯನ ಪಥ ಬದಲಾಗುತ್ತದೆ. ಸೂರ್ಯನ ಪಥ ಬದಲಾವಣೆ ರಾಶಿ ಫಲಗಳ (Rashiphala) ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ಜನವರಿ 14ರಂದು ಸಂಕ್ರಾಂತಿ ಹಬ್ಬ..(Sankranti Festival)

ಬೇರೆ ಬೇರೆ ರಾಜ್ಯಗಳಲ್ಲಿ ಆಚರಣೆ ಹೇಗೆ? :

ಕೇರಳದಲ್ಲಿ ಮಕರ ಸಂಕ್ರಮಣಕ್ಕೆ ವಿಶೇಷ ಮಹತ್ವವಿದೆ.  ಅಯ್ಯಪ್ಪ ಸ್ವಾಮಿ ಸನ್ನಿಧಾನ ಶಬರಿಮಲೆಯಲ್ಲಿ (Shabarimale) ಕಂಡುಬರುವ ಸಂಕ್ರಮಣ ಜ್ಯೋತಿಯೇ ಇಲ್ಲಿ ಮುಖ್ಯ. ತಮಿಳುನಾಡಿನಲ್ಲಿ ಹೊಸ ಫಸಲಿನಿಂದ  ಸಿಹಿ, ಖಾರಾ ಪೊಂಗಲ್ (Pongal) ತಯಾರಿಸುವ ಪದ್ದತಿ ಚಾಲ್ತಿಯಲ್ಲಿದೆ. ಆಂಧ್ರಪ್ರದೇಶದಲ್ಲಿ(Andhra Pradesh) ರಂಗೋಲಿ, ಗಾಳಿಪಟ (Kite) ಹಾರಾಟ ಈ ಹಬ್ಬದೊಂದಿಗೆ ಸೇರಿಕೊಂಡಿದೆ. ಇನ್ನು ಕರ್ನಾಟಕಕ್ಕೆ ಬಂದರೆ, ಸಂಕ್ರಾಂತಿ ದಿನ ಎಳ್ಳು ಬೆಲ್ಲ ಬೀರುವುದು ವಿಶೇಷ..

ಇದನ್ನೂ ಓದಿ  : Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

ಕರ್ನಾಟಕದಲ್ಲಿ ಹೀಗೆ ಆಚರಣೆ :

ಸಂಕ್ರಾಂತಿ ದಿನ ಮನೆಯ ಹೆಣ್ಣುಮಕ್ಕಳು ಹೊಸ ಬಟ್ಟೆ ಧರಿಸಿಕೊಂಡು ನೆರೆಹೊರೆಯಲ್ಲಿ ಎಳ್ಳುಬೀರುವ ಸಂಪ್ರದಾಯ ಹಿಂದಿನಿಂದ  ನಡೆದುಕೊಂಡು ಬಂದಿದೆ.
ಎಳ್ಳು ಬೆಲ್ಲದ ಜೊತೆ ಕಬ್ಬು, ಕೊಬ್ಬರಿ, ಕಡಲೆಬೀಜ, ಹುರಿಗಡಲೆ, ಧಾನ್ಯಗಳನ್ನು ಹಂಚುವ ಪದ್ದತಿಯೂ ಇದೆ. ಈ ಎಳ್ಳು ಬೆಲ್ಲ ಬೀರುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾದರೂ ಈ ನಂಬಿಕೆ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ.

ಎಳ್ಳು ಬೆಲ್ಲದ ಹಿಂದಿದೆ ವೈಜ್ಞಾನಿಕ ಕಾರಣ : 

ಹೌದು ಸಂಕ್ರಾಂತಿ ವೇಳೆ ಮೈಕೊರೆಯುವ ಚಳಿ (Winter) ಇರುತ್ತದೆ. ಈ ಹವೆಯಲ್ಲಿ ದೇಹವನ್ನು ಬೆಚ್ಚಗಿರಿಸಲು ಎಳ್ಳು ಸಹಕಾರಿಯಾಗುತ್ತದೆ. ಅಲ್ಲದೆ, ಎಳ್ಳು ಮತ್ತು ಬೆಲ್ಲ ದೇಹಕ್ಕೆಅಗತ್ಯವಿರುವ ಪೌಷ್ಠಕಾಂಶವನ್ನು ಒದಗಿಸುತ್ತದೆ. ಇನ್ನು ಕೊಬ್ಬರಿ, ಹುರಿಗಡಲೆ ಚರ್ಮದ ಆರೋಗ್ಯ ಕಾಪಾಡಲು ಸಹಕರಿಸುತ್ತದೆ. 

ಇನ್ನೇನು ಸಂಕ್ರಾತಿಗೆ ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಎಲ್ಲೆಡೆ ಎಳ್ಳು ಬೆಲ್ಲ ಬೀರಲು ಎಲ್ಲಾ ಸಿದ್ದತೆ ನಡೆಯುತ್ತಿರುತ್ತದೆ. ಮಾರುಕಟ್ಟೆಯಲ್ಲೂ ಈಗಾಗಲೇಎಳ್ಳು,ಬೆಲ್ಲ ಕಡಲೆಬೀಜ, ಹುರಿಗಡಲೆ,ಸಕ್ಕರೆ ಅಚ್ಚು ಲಗ್ಗೆ ಇಟ್ಟಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News