Makara sankranti 2023-Pongal: ಇಂದು ನಾಡಿನಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನು ಈ ದಿನದಂದು ಅಪರೂಪದ ಯೋಗವೊಂದು ರೂಪುಗೊಂಡಿದ್ದು, ಶನಿ ಸೂರ್ಯ ಗ್ರಹದಿಂದ ಜನರ ಜೀವನವು ಬೆಳಗಲಿದೆ. ಸಂಕ್ರಾಂತಿ ಹಬ್ಬವೆಂದರೆ ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಈ ದಿನ ಸೂರ್ಯನು ಮಕರ ಸಂಕ್ರಾಂತಿ ಎಂದು ಕರೆಯಲ್ಪಡುವ ಶನಿಯ ಚಿಹ್ನೆಯಲ್ಲಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ ಸಂಕ್ರಮಣದ ಈ ಹಬ್ಬವು ಸೂರ್ಯ ಮತ್ತು ಶನಿಯ ಆಶೀರ್ವಾದವನ್ನು ಪಡೆಯಲು ಬಹಳ ಮಂಗಳಕರವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Sankranti 2023: ಸಂಕ್ರಾಂತಿಯಂದು ರೂಪುಗೊಂಡ ಅಪರೂಪದ ಯೋಗ! ಶನಿ-ಸೂರ್ಯನಿಂದ ಬೆಳಗಲಿದೆ ಈ ರಾಶಿಯವರ ಅದೃಷ್ಟ


ಮಕರ ಸಂಕ್ರಾಂತಿಯಂದು ಮಾಡುವ ಪೊಂಗಲ್ ಮತ್ತು ಗ್ರಹಗಳಿಗೂ ಇದೆ ಸಂಬಂಧ: 


ಮಕರ ಸಂಕ್ರಾಂತಿ ಎಂದರೆ ದಕ್ಷಿಣ ಭಾರತದಲ್ಲಿ ತಯಾರಿಸುವ ಪೊಂಗಲ್ ಮೊದಲು ನೆನೆಪಿಗೆ ಬರುತ್ತದೆ. ಸಿಹಿ ಪೊಂಗಲ್ ಈ ಸಂದರ್ಭದಲ್ಲಿ ಮಾಡುವ ವಿಶಿಷ್ಟ ಖಾದ್ಯ. ಈ ಸಿಹಿತಿನಿಸಿಗೆ, ಮಕರ ಸಂಕ್ರಾಂತಿಗೆ ಮತ್ತು ಗ್ರಹಗಳಿಗೆ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಾಗಲಾರದು. ಮಕರ ಸಂಕ್ರಾಂತಿಯ ದಿನದಂದು ಪೊಂಗಲ್ ತಯಾರಿಸಲು ಬಳಸುವ ಪದಾರ್ಥಗಳು ಗ್ರಹವನ್ನು ಪ್ರತಿನಿಧಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಉದಾಹರಣೆಗೆ ಅಕ್ಕಿ ಚಂದ್ರ, ಬೇಳೆ ಶನಿ, ಅರಿಶಿನ ಗುರು, ತುಪ್ಪವು ಸೂರ್ಯನ ಪ್ರತೀಕ ಎಂದು ನಂಬಲಾಗಿದೆ. ಈ ರೀತಿಯಾಗಿ, ಮಕರ ಸಂಕ್ರಾಂತಿಯ ದಿನದಂದು ಪೊಂಗಲ್ ಗಳನ್ನು ತಯಾರಿಸಿ ತಿಂದರೆ ಎಲ್ಲಾ ಗ್ರಹಗಳ ಶುಭ ಫಲಗಳು ನಮ್ಮ ಮೇಲಿರುತ್ತದೆ ಎಂದು ನಂಬಲಾಗಿದೆ.


ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪೊಂಗಲ್ ತಯಾರಿಸಲು ಬಳಸುವ ವಸ್ತುಗಳನ್ನು ದಾನ ಮಾಡಿದರೆ ಗ್ರಹಗಳ ಶುಭ ಆಶೀರ್ವಾದಕ್ಕೆ ಪಾತ್ರರಾಗುತ್ತೇವೆ ಎಂದು ಶಾಸ್ತ್ರಗಳು ಹೇಳುತ್ತವೆ.  


ಈ ವರ್ಷ ಮಕರ ರಾಶಿಯಲ್ಲಿ ಶನಿ-ಸೂರ್ಯನ ಸಂಯೋಗವಾಗಿದೆ. ಈ ಸಂದರ್ಭದಲ್ಲಿ ಪೊಂಗಲ್ ತಯಾರಿಸಿ, ಸೇವಿಸಿದರೆ ಪ್ರಚಂಡ ಅನುಗ್ರಹ ಲಭಿಸುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಮನೆಯಲ್ಲಿ ಸಮೃದ್ಧಿಯೂ ನೆಲೆಗೊಳ್ಳುತ್ತದೆ.  


ಮಕರ ಸಂಕ್ರಾಂತಿಯ ಪೊಂಗಲ್ ಹಿನ್ನೆಲೆ ಏನು ಗೊತ್ತಾ?


ಕೆಲವೊಂದು ಉಲ್ಲೇಖಗಳ ಪ್ರಕಾರ, “ಅಲಾವುದ್ದೀನ್ ಖಿಲ್ಜಿಯೊಂದಿಗಿನ ಯುದ್ಧದ ಸಮಯದಲ್ಲಿ ರಾಜಸ್ಥಾನದ ನಾಥ ಗಳುಯೋಗಿ ದುರ್ಬಲಗೊಂಡು ಹಸಿವಿನಿಂದ ಒದ್ದಾಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಅಲ್ಲಿನ ಗೋರಖನಾಥರು ಬೇಳೆ, ಅಕ್ಕಿಯನ್ನು ಬೇಯಿಸಿ ಎಲ್ಲರಿಗೂ ಆಹಾರವನ್ನು ವಿತರಿಸುತ್ತಾರೆ. ಇದನ್ನು ಸೇವಿಸಿದ ತಕ್ಷಣ ಆರೋಗ್ಯ ಸುಧಾರಣೆ ಜೊತೆಗೆ ತ್ವರಿತ ಶಕ್ತಿಯಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಮಕರ ಸಂಕ್ರಾಂತಿಯಂದು ಪೊಂಗಲ್ ಮಾಡಿ ಅದನ್ನು ಎಲ್ಲರಿಗೂ ದಾನ ಮಾಡುವ ಸಂಪ್ರದಾಯ ಇಂದಿಗೂ ಮುಂದುವರೆದುಕೊಂಡು ಬಂದಿದೆ.


ಇದನ್ನೂ ಓದಿ: Makar Sankranti 2023: ಮಕರ ಸಂಕ್ರಾಂತಿಯು ಈ ರಾಶಿಯ ಜನರಿಗೆ ಭರ್ಜರಿ ಲಾಭವನ್ನು ನೀಡುತ್ತದೆ!


(ಗಮನಿಸಿ: ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.