ಮಕರ ಸಂಕ್ರಾಂತಿ ಮುಹೂರ್ತ, ದಿನಾಂಕ ಮತ್ತು ಸಮಯ: ಮಕರ ಸಂಕ್ರಾಂತಿ ಹಬ್ಬವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಿದ್ದು, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದ್ದಾರೆ. ಮಕರ ಸಂಕ್ರಾಂತಿಯಂದು ಸ್ನಾನ ಮಾಡುವುದು ಮತ್ತು ಎಳ್ಳು-ಬೆಲ್ಲ, ಖಿಚಡಿ ತಿನ್ನುವುದು ಬಹಳ ಮುಖ್ಯ. ಈ ವರ್ಷ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಗ್ರಹಗಳ ರಾಜ ಸೂರ್ಯ ನಿನ್ನೆ ಅಂದರೆ ಜನವರಿ 14ರ ರಾತ್ರಿಯೇ ಮಕರ ರಾಶಿಯನ್ನು ಪ್ರವೇಶಿಸಿದ್ದ.
ಆದರೆ ಮಕರ ಸಂಕ್ರಾಂತಿಯ ಶುಭ ಸಮಯ ಇಂದು ಅಂದರೆ ಜನವರಿ 15ರ ಭಾನುವಾರ. ಇಂದು ಮಕರ ಸಂಕ್ರಾಂತಿಯ ಸೂರ್ಯೋದಯದಿಂದ ಸಂಜೆ 5.40ರವರೆಗೆ ಸ್ನಾನ ಮತ್ತು ದಾನ ಮಾಡುವ ಶುಭ ಮುಹೂರ್ತ. ಆದರೆ ಮಹಾ ಪುಣ್ಯಕಾಲವು ಬೆಳಗ್ಗೆ 7:15ರಿಂದ 9:06ರವರೆಗೆ ಇರುತ್ತದೆ. ಅಂದರೆ ಇದು ಸುಮಾರು 2 ಗಂಟೆಗಳು ಕಾಲ ಇರುತ್ತದೆ.
ಇದನ್ನೂ ಓದಿ: Garuda Purana: ವ್ಯಕ್ತಿಯ ಈ ಅಭ್ಯಾಸಗಳೇ ಬಡತನ ಮತ್ತು ಅಗೌರವಕ್ಕೆ ಕಾರಣವಾಗುತ್ತವೆ
ಮಕರ ಸಂಕ್ರಾಂತಿಯು ಈ ಜನರಿಗೆ ಬಹಳ ಮಂಗಳಕರ
ಮೇಷ ರಾಶಿ: ಈ ಮಕರ ಸಂಕ್ರಾಂತಿಯು ಮೇಷ ರಾಶಿಯವರಿಗೆ ಉತ್ತಮ ಸುದ್ದಿಯನ್ನು ನೀಡಬಹುದು. ಉದ್ಯೋಗದಲ್ಲಿ ಪ್ರಗತಿಯ ಪ್ರಬಲ ಅವಕಾಶಗಳಿವೆ. ಸರ್ಕಾರದಿಂದ-ಆಡಳಿತದಿಂದ ನಿಮಗೆ ಲಾಭವಾಗಲಿದೆ. ಯೋಚಿಸಿ ಮಾತನಾಡುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ನಿಮಗೆ ಲಾಭವನ್ನು ತರುತ್ತದೆ.
ಸಿಂಹ ರಾಶಿ: ಮಕರ ಸಂಕ್ರಾಂತಿಯು ಸಿಂಹ ರಾಶಿಯವರಿಗೆ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಜನರು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವಿರೋಧಿಗಳನ್ನು ನೀವು ಸೋಲಿಸುತ್ತೀರಿ. ಆಮದು-ರಫ್ತಿಗೆ ಸಂಬಂಧಿಸಿದ ಜನರು ದೊಡ್ಡ ಲಾಭವನ್ನು ಗಳಿಸುತ್ತಾರೆ. ಪ್ರಗತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.
ಕನ್ಯಾ ರಾಶಿ: ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣದ ಹಬ್ಬವು ಕನ್ಯಾ ರಾಶಿಯ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನೀವು ದೊಡ್ಡ ಯಶಸ್ಸನ್ನು ಸಾಧಿಸಬಹುದು. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ.
ವೃಶ್ಚಿಕ ರಾಶಿ: ಮಕರ ರಾಶಿಯಲ್ಲಿ ಸೂರ್ಯನ ಬದಲಾವಣೆಯು ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ನೀವು ಯಶಸ್ಸು ಕಾಣುವಿರಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಪ್ರಯಾಣದ ಸಾಧ್ಯತೆಗಳಿವೆ. ಸರ್ಕಾರಿ ನೌಕರರು-ಅಧಿಕಾರಿಗಳು ಒಳ್ಳೆಯ ಸುದ್ದಿ ಪಡೆಯಬಹುದು.
ಇದನ್ನೂ ಓದಿ: Astro Tips: ಕೈಗೆ ಕಟ್ಟುವ ರಕ್ಷಾ ದಾರದ ಪ್ರಯೋಜನ & ಧಾರ್ಮಿಕ ಮಹತ್ವ ತಿಳಿಯಿರಿ
ಮಕರ ರಾಶಿ: ಮಕರ ಸಂಕ್ರಾಂತಿಯು ಮಕರ ರಾಶಿಗೆ ಸೂರ್ಯನ ಪ್ರವೇಶವು ಈ ರಾಶಿಯ ಜನರಿಗೆ ಗರಿಷ್ಠ ಲಾಭವನ್ನು ನೀಡುತ್ತದೆ. ಈ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಸ್ಥಗಿತಗೊಂಡ ನಿಮ್ಮ ಕೆಲಸಗಳು ಚೆನ್ನಾಗಿ ನಡೆಯಲಿದೆ. ನಿಮಗೆ ಪ್ರಗತಿಯ ಹಾದಿಯು ಸಿಗಲಿದೆ. ಹಳೆಯ ಕಾಯಿಲೆಯಿಂದ ನೀವು ಮುಕ್ತಿ ಪಡೆಯಬಹುದು.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.