ತಿರುವನಂತಪುರಂ : ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಮಹತ್ವದ ಕ್ಷಣಕ್ಕೆ ಸಜ್ಜಾಗುತ್ತಿದೆ. ಮಕರ ಸಂಕ್ರಾಂತಿಯ (Makara sankranthi) ಪವಿತ್ರ ದಿನವಾದ ಇಂದು ಮಕರ ಜ್ಯೋತಿ ದರ್ಶನ (Makara jyothi)ನೆರವೇರಲಿದೆ. ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ, ಸಂಪ್ರದಾಯಗಳೂ ನೆರವೇರಲಿವೆ.  ಆದರೆ, ಈ ಸಲದ ಭಕ್ತಿ, ಸಡಗರಕ್ಕೆ ಕೊವಿಡ್ ಮಾರ್ಗಸೂಚಿ ಕಡಿವಾಣ ಹಾಕಿದೆ.  ಕೊವಿಡ್ ನೆಗೆಟಿವ್ ರಿಪೋರ್ಟ್ ಕೈಯಲ್ಲಿದ್ದರೆ ಮಾತ್ರ ಶಬರಿಮಲೆಗೆ  ಪ್ರವೇಶ ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಸಂಜೆ ಪವಿತ್ರ ಮಕರ ಜ್ಯೋತಿ ದರ್ಶನ :
ದೇಗುಲ ಆವರಣದಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷ ಮುಗಿಲು ಮುಟ್ಟಿದೆ. ದೇಗುಲದಲ್ಲಿ ಬಿಂಬಾಶುದ್ದಿ ಸೇರಿದಂತೆ ಹಲವು ಶುದ್ಧೀಕರಣ ಕಾರ್ಯಗಳು ನಡೆಯುತ್ತಿವೆ. ಸಂಜೆ ಹೊತ್ತಿಗೆ ದೇವರ ಆಭರಣಗಳನ್ನು ಉತ್ಸವ ಮೂಲಕ ದೇಗುಲಕ್ಕೆ ತರಲಾಗುತ್ತದೆ. ಸಂಜೆಯ ಹೊತ್ತಿಗೆ ಮಕರ ಜ್ಯೋತಿಯ (MakaraJyothi) ದರ್ಶನವಾಗಲಿದೆ. ಕರೋನಾ (COVID-19) ಹಿನ್ನೆಲೆಯಲ್ಲಿ ಕೇವಲ 5000 ಭಕ್ತರಿಗೆ ಮಾತ್ರ ಶಬರಿಮಲೆಯಲ್ಲಿ (Shabarimale) ಮಕರಜ್ಯೋತಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದ ಭಕ್ತರು ಇರುವಲ್ಲಿಯೇ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಬೇಕಾಗಿದೆ.ಅಯ್ಯಪ್ಪ ಸ್ವಾಮಿಯ (Ayyappa Swamy) ತುಪ್ಪದಅಭಿಷೇಕ ಸೋಮವಾರ ಮುಕ್ತಾಯವಾಗಲಿದೆ. 


ಇದನ್ನೂ ಓದಿ :  SANKRANTI SPECIAL : ಗಂಗಾಧರನ ನೆತ್ತಿಯ ಮೇಲೆ ಬಹುಹೊತ್ತು ಸೂರ್ಯನಿದ್ದರೆ ಅಪಶಕುನವೇ..?


ದೇವಾಲಯ ಸುತ್ತಮುತ್ತ 6 ವಿಭಾಗಗಳಲ್ಲಿ ಪೊಲೀಸ್ (Police) ತಂಡಗಳನ್ನುನಿಯೋಜಿಸಲಾಗಿದೆ.  ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ನೀಲಕಲ್ ನಿಂದ ಹಿಂದಿರುಗುವ ಭಕ್ತರು ಕನಮಲಾ – ಪಾಲಪ್ಪಳ್ಳಿ, ಪೆರುನಾಡ್ ವಡೆಸೆರಿಕ್ಕರ ಮಾರ್ಗದಲ್ಲಿ ಸಾಗಬೇಕು. ಏರುಮಲೆಯಿಂದ ನೀಲ್ ಕಲ್ ಗೆ ಹೋಗುವ ಭಕ್ತರು ಮಂದಿರಂಪಾಡಿ, ವಡಿಸೆರಿಕ್ಕರ ಮಾರ್ಗದಲ್ಲಿ ಸಾಗಬೇಕಾಗುತ್ತದೆ.


ಕರೋನಾ ಕಾರಣದಿಂದ ಆದಾಯ ಕುಸಿತ : 
ಕಳೆದ ವರ್ಷ ಸಂಕ್ರಾಂತಿ (Sankranti) ಹೊತ್ತಿಗೆ ದೇಗುಲದ ಆದಾಯ 60 ಕೋಟಿಗೆ ಮುಟ್ಟಿತ್ತು. ಈ ಸಲ ಕೇವಲ 16 ಕೋಟಿ ಆದಾಯ ಬಂದಿದೆ. ಹಾಗಾಗಿ, ಸರ್ಕಾರದಿಂದ 100 ಕೋಟಿ ರೂಪಾಯಿ ನೆರವು ಪಡೆಯಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.