Natural Black Hair Dye: ಬದಲಾದ ಜೀವನ ಶೈಲಿಯಲ್ಲಿ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ, ನಿಮ್ಮ ಮನೆಯಲ್ಲಿಯೇ ಇರುವ ಕೆಲವೇ ಕೆಲವು ಪದಾರ್ಥಗಳ ಸಹಾಯದಿಂದ ನೀವು ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. 


COMMERCIAL BREAK
SCROLL TO CONTINUE READING

ನೈಸರ್ಗಿಕ ಬ್ಲಾಕ್ ಹೇರ್ ಡೈ: 
ಹೌದು, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಮೂರ್ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಬಿಳಿ ಕೂದಲಿಗೆ ಶಾಶ್ವತವಾಗಿ ಗುಡ್ ಬೈ ಹೇಳಬಹುದು. 


ನೈಸರ್ಗಿಕ ಹೇರ್ ಡೈ ತಯಾರಿಕೆಗೆ ಬೇಕಾಗುವ ಪದಾರ್ಥಗಳು: 
* ತೆಂಗಿನ ಕಾಯಿಯ ಜುಂಗು 
* ಒಂದೆರಡು ಕರ್ಪೂರ 
* ಐದು ಬಾದಾಮಿ 
* ಎರಡು ಚಮಚ ಕೊಬ್ಬರಿ ಎಣ್ಣೆ 


ಇದನ್ನೂ ಓದಿ- ಸ್ಥೂಲಕಾಯತೆಯದ ನಿಯಂತ್ರಣಕ್ಕೆ ಇಲ್ಲಿದೆ ರಾಮಬಾಣ..! 


ನೈಸರ್ಗಿಕ ಹೇರ್ ಡೈ ತಯಾರಿಸುವ ವಿಧಾನ: 
ಮೊದಲಿಗೆ ತೆಂಗಿನ ಕಾಯಿಯ ಜುಂಗನ್ನು ತೆಗೆದುಕೊಂಡು ಅದರೊಂದಿಗೆ 5 ಬಾದಾಮಿ ಮತ್ತು ಕರ್ಪೂರವನ್ನು ಹಾಕಿ ಅದನ್ನು ಕಾಯಿಸಿ. ಇದು ಸಂಪೂರ್ಣವಾಗಿ ಸುಟ್ಟು ಕಪ್ಪಗಾದ ಬಳಿಕ ಇದರ ಪುಡಿಯನ್ನು ಒಂದು ಜಾಲರಿ ಸಹಾಯದಿಂದ ಜರಡಿ ಮಾಡಿಕೊಳ್ಳಿ. ನಂತರ ಈ ಪುಡಿಗೆ ಒಂದೆರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 


ಇದನ್ನೂ ಓದಿ- Winter Skin Care: ಚಳಿಗಾಲದಲ್ಲಿ ಕೋಮಲ ತ್ವಚೆಗಾಗಿ ತುಂಬಾ ಲಾಭದಾಯಕ ಈ 5 ಪದಾರ್ಥ


ಇದನ್ನು ಬಳಸುವ ವಿಧಾನ: 
ನೈಸರ್ಗಿಕ ಹೇರ್ ಡೈ ತಯಾರಾದ ಬಳಿಕ ಒಂದು ಸಣ್ಣ ಬ್ರಶ್ ಸಹಾಯದಿಂದ ನಿಮಗೆ ಎಲ್ಲೆಲ್ಲಿ ಬಿಳಿ ಕೂದಲಿದೆಯೋ ಆ ಜಾಗದಲ್ಲಿ ಈ ನ್ಯಾಚುರಲ್ ಹೇರ್ ಡೈ ಅನ್ನು ಚೆನ್ನಾಗಿ ಅಪ್ಪ್ಲೈ ಮಾಡಿ. ನಂತರ ಒಂದು ಗಂಟೆಗಳ ಕಾಲ ಇದನ್ನು ಒಣಗಳು ಬಿಡಿ. ಹೇರ್ ಡೈ ಡ್ರೈ ಆದ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಇದು ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಶಾಶ್ವತವಾಗಿ ಕಪ್ಪಾಗಿಸುತ್ತದೆ. ಮಾತ್ರವಲ್ಲ, ಇದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಉಂಟಾಗುವುದಿಲ್ಲ. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.