Pimple Care: ಮುಖದ ಮೇಲಿನ ಮೊಡವೆಗಳು ನಿಮಗೆ ಕಿರಿಕಿರಿ ಉಂಟುಮಾಡಬಹುದು. ಮೊಡವೆಗಳನ್ನು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ತೆಗೆದುಹಾಕುವುದು ಹೇಗೆ ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ಸ್ಪಷ್ಟ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ನಿಮಗೆ ಸಹಾಯ ಮಾಡಲು ನೈಸರ್ಗಿಕ ಪರಿಹಾರಗಳಿವೆ.
ಈ ಪರಿಹಾರಗಳು ಪರಿಣಾಮಕಾರಿ ಹಾಗಂತ ನೀವು ಅದನ್ನ ಬಳಸಿದ ತಕ್ಷಣ ಪಲಿತಾಂಶವನ್ನ ಕಾಣಲಾಗದಾದರು. ಸಮಯ ಕಳೆದಂತೆ ನೀವು ನಿಮ್ಮ ಚರ್ಮದಲ್ಲಿ ಬದಲಾವಣೆ ಕಾಣಬಹುದು.
ಜೇನುತುಪ್ಪವನ್ನು ಬಳಸಿ
ಜೇನುತುಪ್ಪವು ನಿಮ್ಮ ಚರ್ಮದ ಮೇಲೆ ಮೊಡವೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ. ನೀವು ಒಂದು ಚಮಚ ಮೊಸರಿಗೆ ಜೇನುತುಪ್ಪವನ್ನು ಸೇರಿಸಿ ಅದನ್ನು ಫೇಸ್ ಮಾಸ್ಕ್ ಆಗಿ ಬಳಸುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಇದನ್ನೂ ಓದಿ: Winter Skin Care: ಚಳಿಗಾಲದಲ್ಲಿ ಕೋಮಲ ತ್ವಚೆಗಾಗಿ ತುಂಬಾ ಲಾಭದಾಯಕ ಈ 5 ಪದಾರ್ಥ
ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ ಎಂಬ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿ ಆಕ್ಸಿಡೆಂಟ್‌ಗಳು ಆರೋಗ್ಯಕರ ಕೋಶಗಳಿಗೆ ಹಾನಿ ಮಾಡುವ ಹಾನಿಕಾರಕ ಪದಾರ್ಥಗಳು ಮತ್ತು ತ್ಯಾಜ್ಯ ಕಣಗಳ ವಿಭಜನೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ಪಲಿತಾಂಶಕ್ಕಾಗಿ ಬೆಳಿಗ್ಗೆ ಎದ್ದಾಗ ಯಾವುದೇ ಕಾಫಿ, ಟೀ ಅಲ್ಲದೆ ಗ್ರೀನ್ ಟೀ ಸೇವಿಸುವುದರಿಂದ ಚರ್ಮ ಆರೋಗ್ಯವಾಗುವುದು ಅಲ್ಲದೆ. ನಿಮ್ಮ ತ್ವಚೆಯನ್ನು ಮೊಡವೆಗಳಿಂದ ಕಾಪಾಡುತ್ತದೆ.
ಅಲೋವೆರಾ ಜೆಲ್
ಅಲೋವೆರಾ ಹಿತವಾದ ಗುಣಲಕ್ಷಣಗಳನ್ನು ಹೊಂದಿದ್ದು. ಮೊಡವೆಗಳಿಗೆ ಸಂಬಂಧಿಸಿದ ಕೆಂಪುತನ ಹಾಗೂ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆ ಇರುವ ಜಾಗಗಳಲ್ಲಿ ಸ್ವಲ್ಪ ಪ್ರಮಾಣದ ತಾಜಾ ಅಲೋವೆರಾ ಜೆಲ್ ಅನ್ನು ಬಳಸುವುದರಿಂದ ಇದು ಮೊಡವೆಯನ್ನ ಕಮ್ಮಿಯಾಗಿಸಲು ಸಹಾಯಮಾಡುತ್ತದೆ.
ಆರೋಗ್ಯಕರ ಆಹಾರ
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಸಕ್ಕರೆ ಮತ್ತು ಜಿಡ್ಡಿನ ಆಹಾರಗಳ ಅತಿಯಾದ ಸೇವನೆಯನ್ನು ತಪ್ಪಿಸಿ ಏಕೆಂದರೆ ಇದು ಮೊಡವೆಗಳ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.
ಇದನ್ನೂ ಓದಿ: Blackhead Home remedies : ಮನೆಯಲ್ಲಿಯೇ ತಯಾರಿಸುವ ಈ ಸ್ಕ್ರಬ್ ನೀಡುವುದು ಬ್ಲಾಕ್ ಹೆಡ್ ನಿಂದ ಶಾಶ್ವತ ಪರಿಹಾರ
ಐಸ್ ಕ್ಯೂಬ್‌ಗಳನ್ನು ಬಳಸಿ
ಐಸ್ ಕ್ಯೂಬ್‌ಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಮತ್ತು ಕೆಲವು ನಿಮಿಷಗಳ ಕಾಲ ಅದನ್ನು ನಿಮ್ಮ ಮೊಡವೆಗಳ ಮೇಲೆ ಸೋಕಿಸಿ. ಐಸ್ ಚರ್ಮದಲ್ಲಿ ಕಿರಿಕಿರಿ, ಊತ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಚರ್ಮದ ಮೇಲೆ ರಂಧ್ರಗಳನ್ನು ಕಡಿಮೆಮಾಡುವಲ್ಲಿ ಸಹಕಾರಿಯಾಗಿದೆ.
ಮುಖವನ್ನು ಸ್ವಚ್ಛತೆ
ಎಲ್ಲಾ ಕೊಳಕು, ಹೆಚ್ಚುವರಿ ಎಣ್ಣೆ ಮತ್ತು ಬ್ಯಾಕ್ಟೀರಿಯಾವನ್ನು ತೆರವುಗೊಳಿಸಲು ಮೃದುವಾದ ಕ್ಲೆನ್ಸರ್ ಬಳಸಿ ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ತೊಳೆಯಿರಿ. ತುಂಬಾ ಗಟ್ಟಿಯಾಗಿ ಸ್ಕ್ರಬ್ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗಬಹುದು ಮತ್ತು ಅದು ಮೊಡವೆಗಳನ್ನು ಉಲ್ಬಣಗೊಳಿಸಬಹುದು. ತ್ವಚೆಯನ್ನ ಹೂವಿನಂತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ