Mangal Grah Transit 2022: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕಾಲಕಾಲಕ್ಕೆ ಗ್ರಹಗಳ ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಒಂದು ರಾಶಿಯಿಂದ ಗ್ರಹಗಳು ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಗ್ರಹಗಳ ರಾಶಿ ಪರಿವರ್ತನೆ ಎಂದು ಕರೆಯುತ್ತಾರೆ. ಈ ಸಂಕ್ರಮಣದ ಶುಭ ಮತ್ತು ಅಶುಭ ಪರಿಣಾಮಗಳನ್ನು ಎಲ್ಲಾ  ದ್ವಾದಶ ರಾಶಿಗಳ ಮೇಲೆ ಕಾಣಬಹುದು. ಮಂಗಳ ಗ್ರಹವು ಜೂನ್ 27 ರಂದು ಮೇಷ ರಾಶಿಯನ್ನು ಪ್ರವೇಶಿಸಿದ್ದು, ಆಗಸ್ಟ್ 10ರವರೆಗೆ ಈ ರಾಶಿಯಲ್ಲಿಯೇ ಇರುತ್ತದೆ. ಮಂಗಳ ಗ್ರಹ ಸಂಚಾರದ ಪರಿಣಾಮವು ಮೂರು ರಾಶಿಗಳ ಮೇಲೆ ವಿಶೇಷವಾಗಿ ಗೋಚರಿಸುತ್ತದೆ. 


COMMERCIAL BREAK
SCROLL TO CONTINUE READING

ಮಿಥುನ : ಆದಾಯ ಮತ್ತು ಲಾಭದ ಮನೆ ಎಂದು ಪರಿಗಣಿಸಲಾದ 11 ನೇ ಮನೆಯಲ್ಲಿ ಮಂಗಳ ಸಾಗುತ್ತಿದೆ. ಈ ಅವಧಿಯಲ್ಲಿ ಆದಾಯದಲ್ಲಿ ಉತ್ತಮ ಏರಿಕೆಯಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಉತ್ತಮ ಲಾಭವೂ ಇರುತ್ತದೆ. ಮಂಗಳ ಗ್ರಹದ ಸಂಕ್ರಮಣದ ಸಮಯದಲ್ಲಿ, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ. ಮಿಥುನ ರಾಶಿಯ ಏಳನೇ ಮನೆಯ ಅಧಿಪತಿ ಮಂಗಳ.  ಈ ಸಂದರ್ಭದಲ್ಲಿ ಮಾಡಬೇಕು ಎಂದು ಅಂದುಕೊಳ್ಳುವ ಎಲ್ಲಾ ಕೆಲಸಗಳಲ್ಲಿಯೂ ಸಂಗಾತಿಯ ಸಹಾಯ ಸಿಗುತ್ತದೆ. 


ಇದನ್ನೂ ಓದಿ : Gemology: ಸಂತೋಷ, ಅದೃಷ್ಟಕ್ಕಾಗಿ ಈ 4 ರತ್ನಗಳನ್ನು ಧರಿಸಿ


ಕರ್ಕಾಟಕ : ಕರ್ಕ ರಾಶಿಯ ಜಾತಕದ ಹತ್ತನೇ ಮನೆಯಲ್ಲಿ ಮಂಗಳ ಸಂಚಾರ ನಡೆದಿದೆ. ಇದನ್ನು ಕೆಲಸದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.  ವ್ಯಾಪಾರವನ್ನು ವಿಸ್ತರಿಸಬೇಕು ಎಂದು ಕೊಂಡಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ಮಂಗಳ ಸಂಚಾರದಲ್ಲಿ  ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 


ಸಿಂಹ :  ಜಾತಕದ ಒಂಭತ್ತನೇ ಮನೆಯಲ್ಲಿ ಮಂಗಳ ಗ್ರಹದ ಸಂಕ್ರಮಣ ಇರುತ್ತದೆ.  ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ, ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಬೆಳೆಸುವ ಅವಕಾಶ ಸಿಗಬಹುದು. ಅದು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. 


ಇದನ್ನೂ ಓದಿ : Numerology: ಈ ದಿನದಂದು ಜನಿಸಿದವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ


 
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.