ಶ್ರಾವಣ ಮೊದಲ ಸೋಮವಾರ ಭೋಲೆನಾಥನನ್ನು ಮೆಚ್ಚಿಸಲು ಹೀಗೆ ಮಾಡಿ, ಶಿವನ ಕೃಪೆಗೆ ಪಾತ್ರರಾಗುವಿರಿ

Shravan Somwar Puja Vidhi: ಶ್ರಾವಣ ಮಾಸ ಹಿಂದೂ ಧರ್ಮದಲ್ಲಿ ಅತ್ಯಂತ ಶುಭಕರ ಮಾಸವಾಗಿದೆ. ಶ್ರಾವಣ ತಿಂಗಳ ಸೋಮವಾರ ಶಿವನನ್ನು ಈ ರೀತಿ ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರಿ.

Written by - Chetana Devarmani | Last Updated : Jul 17, 2022, 05:25 PM IST
  • ಶ್ರಾವಣ ಮಾಸ ಹಿಂದೂ ಧರ್ಮದಲ್ಲಿ ಅತ್ಯಂತ ಶುಭಕರ ಮಾಸವಾಗಿದೆ
  • ಶ್ರಾವಣ ತಿಂಗಳ ಸೋಮವಾರ ಶಿವನನ್ನು ಈ ರೀತಿ ಪೂಜಿಸಿ
  • ಶ್ರಾವಣ ಮೊದಲ ಸೋಮವಾರ ಭೋಲೆನಾಥನನ್ನು ಮೆಚ್ಚಿಸಲು ಹೀಗೆ ಮಾಡಿ
ಶ್ರಾವಣ ಮೊದಲ ಸೋಮವಾರ ಭೋಲೆನಾಥನನ್ನು ಮೆಚ್ಚಿಸಲು ಹೀಗೆ ಮಾಡಿ, ಶಿವನ ಕೃಪೆಗೆ ಪಾತ್ರರಾಗುವಿರಿ title=
ಶಿವ

Shravan Somwar Puja Vidhi: ಭೋಲೆನಾಥನ ಪ್ರೀತಿಯ ಶ್ರಾವಣ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳ ಎಲ್ಲಾ ಸೋಮವಾರಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಭೋಲೆನಾಥನನ್ನು ಮೆಚ್ಚಿಸಲು ಶ್ರಾವಣ ಸೋಮವಾರ ಉತ್ತಮ ದಿನವಾಗಿದೆ. ಶ್ರಾವಣ ಸೋಮವಾರದಂದು ಮಂಗಳಕರ ಯೋಗದಲ್ಲಿ ಶಿವನನ್ನ ಪೂಜಿಸುವುದರಿಂದ ಅಂತಿಮ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ಸರಿಯಾಗಿ ಪೂಜೆ ಮಾಡುವುದು ಕೂಡ ಮುಖ್ಯ.

ಇದನ್ನೂ ಓದಿ: ವಾಸ್ತು ನಿಯಮಗಳು: ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ

ಶ್ರಾವಣ ಸೋಮವಾರ ಪೂಜಾ ವಿಧಾನ: ಶ್ರಾವಣ ಸೋಮವಾರದಂದು ಮುಂಜಾನೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಶ್ರಾವಣ ಸೋಮವಾರ ಉಪವಾಸವಿರಬೇಕು. ನೀವು ಉಪವಾಸವನ್ನು ಆಚರಿಸಿದರೆ, ದೇವರ ಮುಂದೆ ಕೈ ಮುಗಿದು ಉಪವಾಸದ ಪ್ರತಿಜ್ಞೆ ಮಾಡಿ. 

ಇದರ ನಂತರ ಎಲ್ಲಾ ದೇವರಿಗೆ ಗಂಗಾಜಲದಿಂದ ಅಭಿಷೇಕ ಮಾಡಿ. ನಂತರ ಶಿವನಿಗೆ ಜಲಾಭಿಷೇಕ ಮಾಡಿ. ಸಾಧ್ಯವಾದರೆ ಪಂಚಾಮೃತವನ್ನೂ ಅರ್ಪಿಸಿ. ಈ ಸಮಯದಲ್ಲಿ, 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುತ್ತಿರಿ. ಇದಾದ ನಂತರ, ಭೋಲೇನಾಥನಿಗೆ ಬಿಳಿ ಚಂದನ, ಅಕ್ಷತೆ, ಬಿಳಿ ಹೂವುಗಳು, ಬಿಲ್ಪತ್ರೆ ಇತ್ಯಾದಿಗಳನ್ನು ಅರ್ಪಿಸಿ. ಶಮಿ ಎಲೆಗಳನ್ನೂ ಅರ್ಪಿಸಿ, ಹೀಗೆ ಮಾಡುವುದರಿಂದ ಶನಿದೋಷ ನಿವಾರಣೆಯಾಗುತ್ತದೆ.

ಶಿವಾಜಿಯ ಆರತಿಯನ್ನು ಮಾಡಿ:

ದೇವರಿಗೆ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ. ಶಿವನಿಗೆ ಹಾಲು ಮತ್ತು ಅನ್ನವನ್ನು ಅರ್ಪಿಸುವುದು ಒಳ್ಳೆಯದು. ನಂತರ ಶಿವ ಚಾಲೀಸಾ ಪಠಣ ಮಾಡಿ. ಶ್ರಾವಣ ಸೋಮವಾರದ ಕಥೆಯನ್ನು ಓದಿ ಅಥವಾ ಕೇಳಿ. ಕೊನೆಯಲ್ಲಿ ಶಿವನ ಆರತಿಯನ್ನು ಮಾಡಿ. ಪೂಜೆಯ ನೈವೇದ್ಯವನ್ನು ಎಲ್ಲರಿಗೂ ವಿತರಿಸಿ. ಇದರಿಂದ ಶವನ ಕೃಪೆಗೆ ಪಾತ್ರರಾಗುತ್ತೀರಾ.

ಇದನ್ನೂ ಓದಿ: Guru Gochar 2022: ಮೀನ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ! ಈ ರಾಶಿಗಳ ಜನರಿಗೆ ಸಮಯ ಕಠಿಣವಾಗಿರಲಿದೆ

(Disclaimer: ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News