Mangal Gochar 2022: ಪ್ರಸ್ತುತ ಮಂಗಳ ದೇವ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷ ಸ್ಥಾನ ಪ್ರಾಪ್ತಿಯಾಗಿದೆ. ಮಂಗಳನ ಈ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳ ಜನರ ಭಾಗ್ಯೋದಯ ನಿಶ್ಚಿತ ಎನ್ನಲಾಗಿದೆ. ಇನ್ನೊಂದೆಡೆ ಕೆಲ ರಾಶಿಗಳ ಜನರು ಭಾರಿ ಎಚ್ಚರಿಕೆಯಿಂದ ಇರಬೇಕಾಗುವ ಅವಶ್ಯಕತೆ ಇದೆ. ಮಂಗಳನನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದೆಡೆ ಮಂಗಳ ಊರ್ಜೆ, ಭಾತೃತ್ವ, ಭೂಮಿ, ಶಕ್ತಿ, ಸಾಹಸ, ಪರಾಕ್ರಮ, ಶೌರ್ಯದ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಮಂಗಳ ಮೇಷ ಹಾಗೂ ವೃಶ್ಚಿಕ ರಾಶಿಯ ಅಧಿಪತಿ ಗ್ರಹ ಕೂಡ ಹೌದು. ಮಂಗಳ ಮಕರ ರಾಶಿಯಲ್ಲಿ ಉಚ್ಛ ಸ್ಥಾನದಲ್ಲಿದ್ದರೆ, ಕರ್ಕ ರಾಶಿಯಲ್ಲಿ ಆತ ತನ್ನ ನೀಚ ಸ್ಥಾನದಲ್ಲಿರುತ್ತಾನೆ. ನವೆಂಬರ್ 13 ರಂದು ಮಂಗಳ ವೃಷಭ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಿದ್ದಾನೆ. ಹಾಗಾದರೆ ಬನ್ನಿ ಮಂಗಳನ ಈ ವಕ್ರ ನಡೆ ಯಾವ ಜಾತಕದವರ ಭಾಗ್ಯೋದಯಕ್ಕೆ ಕಾರಣವಾಗಲಿದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮೇಷ ರಾಶಿ - ಕೆಲಸ ಕಾರ್ಯಗಳ ಪ್ರತಿ ಉತ್ಸಾಹ ಇರಲಿದೆ. ಧರ್ಮ - ಕರ್ಮಗಳ ಪ್ರತಿ ಆಸಕ್ತಿ ಹೆಚ್ಚಾಗಲಿದೆ. ತಾಯಿಯ ಬೆಂಬಲ ಸಿಗಲಿದೆ. ತಾಯಿ ಕಡೆಯಿಂದ ಧನಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮಿತ್ರನ ಆಗಮನ, ಬೌದ್ಧಿಕ ಕಾರ್ಯಗಳಿಂದ ಧನಲಾಭ, ನೌಕರಿಯಲ್ಲಿ ಸ್ಥಾನ ಪರಿವರ್ತನೆಯ ಸಾಧ್ಯತೆ, ಕುಟುಂಬ ಸದಸ್ಯರ ಜೊತೆಗೆ ಯಾತ್ರೆಯ ಯೋಗ ನಿರ್ಮಾಣಗೊಳ್ಳುತ್ತಿದೆ.


ವೃಷಭ ರಾಶಿ - ಕೆಲಸದ ವಿಸ್ತಾರದ ನಿಮ್ಮ ಯೋಜನೆ ಸಾಕಾರಗೊಳ್ಳಲಿದೆ. ಸಹೋದರರ ಬೆಂಬಲ ಸಿಗಲಿದೆ. ಮನೆ-ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ. ಉಡುಗೊರೆಯ ರೂಪದಲ್ಲಿ ವಸ್ತ್ರಗಳು ಸಿಗಲಿವೆ. ನೌಕರಿಯಲ್ಲಿ ಪರಿವರ್ತನೆಯ ಜೊತೆಗೆ ಸ್ಥಾನ ಪಲ್ಲಟದ ಸಾಧ್ಯತೆಗಳು ಗೋಚರಿಸುತ್ತಿವೆ. ಆಮದು-ರಫ್ತು ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. ತಾಯಿಯ ಸಾನಿಧ್ಯ ಪ್ರಾಪ್ತಿಯಾಗಲಿದೆ. ವಾಹನ ಸುಖದಲ್ಲಿ ವೃದ್ಧಿಯಾಗಲಿದೆ.


ವೃಶ್ಚಿಕ ರಾಶಿ - ಆತ್ಮವಿಶ್ವಾಸದಿಂದ ತುಂಬಿರುವಿರಿ. ಮನೆ ಮತ್ತು ಕುಟುಂಬದಲ್ಲಿ ಸುಖ-ಸೌಕರ್ಯಗಳ ವಿಸ್ತಾರದ ಲಕ್ಷಣಗಳಿವೆ. ಕಾರ್ಯಕ್ಷೇತ್ರದಲ್ಲಿ ಪರಿವರ್ತನೆಯ ಸಂಭವನೀಯತೆಗಳು ಇರಲಿವೆ. ಆದರೆ, ಪರಿಶ್ರಮ ಹೆಚ್ಚಾಗಲಿದೆ. ತಾಯಿಯ ಸಾನಿಧ್ಯ ಹಾಗೂ ಬೆಂಬಲ ಸಿಗಲಿದೆ. ಲಾಭದಲ್ಲಿ ವೃದ್ಧಿ ಮತ್ತು ನೌಕರಿಯಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ.


ಇದನ್ನೂ ಓದಿ-Chanakya Niti: ಶ್ರೀಮಂತರಲ್ಲ, ನಿಮ್ಮನ್ನು ಬಡವರನ್ನಾಗಿಸುತ್ತದೆ ಈ ರೀತಿಯ ಹಣ


ಧನು ರಾಶಿ -  ಮನಸ್ಸಿನಲ್ಲಿ ಪ್ರಸನ್ನ ಭಾವ ಇರಲಿದೆ. ಆದರೂ, ಕೂಡ ಆತ್ಮ ಸಂಯಮವಹಿಸಿ. ನೌಕರಿಯಲ್ಲಿ ಬೇರೊಂದು ಸ್ಥಾನಕ್ಕೆ ಹೋಗುವ ಅವಕಾಶ ಸಿಗಬಹುದು. ಆದಾಯದಲ್ಲಿ ಹೆಚ್ಚಳ, ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಕುಟುಂಬದ ಬೆಂಬಲ ಕೂಡ ಸಿಗಲಿದೆ. ಉಡುಪು ಇತ್ಯಾದಿಗಳ ಮೇಲೆ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-ನಿತ್ಯ ಬಳಸುವ ಈ ವಸ್ತು ಕನಸಿನಲ್ಲಿ ಕಂಡರೆ ಅದೃಷ್ಟ ಖುಲಾಯಿಸಿದಂತೆ .!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.