Chanakya Niti: ಶ್ರೀಮಂತರಲ್ಲ, ನಿಮ್ಮನ್ನು ಬಡವರನ್ನಾಗಿಸುತ್ತದೆ ಈ ರೀತಿಯ ಹಣ

Chanakya Niti: ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಣಿ ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಶ್ರೀಮಂತರಾಗುವ ಹಲವು ಮಾರ್ಗಗಳನ್ನು ಹೇಳಿದ್ದಾರೆ. ಅಷ್ಟೇ ಅಲ್ಲ, ಇದರಲ್ಲಿ ಹಣಕ್ಕೆ ಸಂಬಂಧಿಸಿದಂತೆ ಯಾವ ಕೆಲಸಗಳನ್ನು ಮಾಡಬೇಕು? ಎಂತಹ ಕೆಲಸಗಳನ್ನು ತಪ್ಪಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ.

Written by - Yashaswini V | Last Updated : Nov 17, 2022, 02:09 PM IST
  • ಹಣ ಇಂದಲ್ಲಾ ನಾಳೆ ಸಂಪಾದಿಸಬಹುದು.
  • ಆದರೆ, ಕೆಲವು ಮೌಲ್ಯಗಳನ್ನು ಸಂಪಾದಿಸುವುದು ಕಷ್ಟ.
  • ಎಲ್ಲವನ್ನೂ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ.
Chanakya Niti: ಶ್ರೀಮಂತರಲ್ಲ, ನಿಮ್ಮನ್ನು ಬಡವರನ್ನಾಗಿಸುತ್ತದೆ ಈ ರೀತಿಯ ಹಣ  title=
Chanakya Niti for Money

Chanakya Niti for Money: ಆಚಾರ್ಯ ಚಾಣಕ್ಯ ಅವರು ಸಂತೋಷ ಮತ್ತು ಯಶಸ್ವಿ ಜೀವನ ನಡೆಸಲು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಲವು ಅಂಶಗಳ ಬಗ್ಗೆ ತಿಳಿಸಿದ್ದಾರೆ. ಇದರೊಂದಿಗೆ ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಶ್ರೀಮಂತರಾಗಲು ಮಾರ್ಗದರ್ಶನವನ್ನೂ ನೀಡಲಾಗಿದೆ.  ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರ ಚಾಣಕ್ಯ ನೀತಿಯಲ್ಲಿ ಇಂತಹ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಶ್ರೀಮಂತರಾಗಲು ಹಣ ಸಂಪಾದಿಸುವುದು ಮಾತ್ರವಲ್ಲ ನಾವು ಯಾವ ರೀತಿ ಹಣ ಸಂಪಾದಿಸುತ್ತೇವೆ ಎಂಬುದು ಸಹ ಮುಖ್ಯವೆಂದು ತಿಳಿಸಿದ್ದಾರೆ. 

ವಾಸ್ತವವಾಗಿ, ಹಣ ಇಂದಲ್ಲಾ ನಾಳೆ ಸಂಪಾದಿಸಬಹುದು. ಆದರೆ, ಕೆಲವು ಮೌಲ್ಯಗಳನ್ನು ಸಂಪಾದಿಸುವುದು ಕಷ್ಟ. ಎಲ್ಲವನ್ನೂ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ವ್ಯಕ್ತಿಯು ಅದೃಷ್ಟದ ಬಲದಿಂದ ಶೀಘ್ರದಲ್ಲೇ ಶ್ರೀಮಂತನಾಗುತ್ತಾನೆ. ಆದರೆ, ಇನ್ನೂ ಕೆಲವರು ಹೆಚ್ಚು ಹಣ ಸಂಪಾದಿಸಿದರೂ ಕೂಡ ಮೊದಲಿಗಿಂತ ಬದವರಾಗುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಅಡ್ಡದಾರಿಯಲ್ಲಿ ಸಂಪಾದಿಸಿದ ಹಣವು ವ್ಯಕ್ತಿಯನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Chanakya Niti: ಹೆಂಡತಿಯರು ಗಂಡನಿಂದ ಈ 6 ವಿಷಯಗಳನ್ನು ಮರೆಮಾಚುತ್ತಾರೆ..!

ಈ ರೀತಿ ಸಂಪಾದಿಸಿದ ಹಣ ವ್ಯಕ್ತಿಯನ್ನು ತ್ವರಿತವಾಗಿ ನಾಶಪಡಿಸುತ್ತದೆ:
ತಪ್ಪಾಗಿ, ಅಡ್ಡದಾರಿಯಲ್ಲಿ ಗಳಿಸಿದ ಹಣವು ಬಹಳ ವೇಗವಾಗಿ ವ್ಯಕ್ತಿಯನ್ನು ನಾಶಪಡಿಸುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಕದಿಯುವುದು, ಸುಳ್ಳು ಹೇಳುವುದು, ಒಬ್ಬರಿಗೆ ಮೋಸ ಮಾಡಿ ಸಂಪಾದಿಸುವ ಹಣ ಇದೆಲ್ಲದರಿಂದ ವ್ಯಕ್ತಿ ಬೇಗ ಶ್ರೀಮಂತನಾಗಬಹುದು. ಆದರೆ, ಅಷ್ಟೇ ವೇಗವಾಗಿ ಮೊದಲಿಗಿಂತ ಪಾತಾಳಕ್ಕೆ ಬೀಳುತ್ತಾನೆ. ಆತ ಕಡು ಬಡವನಾಗುತ್ತಾನೆ. ಅಂತಹ ಹಣವು ನಿಮ್ಮನ್ನು ಪಾಪದ ಪಾಲುದಾರರನ್ನಾಗಿ ಮಾಡುತ್ತದೆ. ಈ ಹಣವು ನಿಮಗೆ ಸ್ವಲ್ಪ ಸಮಯದವರೆಗೆ ಸಂತೋಷವನ್ನು ನೀಡುತ್ತದೆ, ಆದರೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಜೀವನದಲ್ಲಿ ಎಂದಿಗೂ ಸಹ ಶಾರ್ಟ್‌ಕಟ್‌ನಲ್ಲಿ ಅನೈತಿಕವಾಗಿ ಹಣ ಸಂಪಾದಿಸುವ ಮಾರ್ಗದಲ್ಲಿ ಹೋಗಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಇದನ್ನೂ ಓದಿ- Chanakya Niti: ಒಂದು ಸಣ್ಣ ತಪ್ಪು ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು, ಎಚ್ಚರ!

ದಾನ:
ನಮ್ಮ ಹಿರಿಯರು ಯಾವುದನ್ನೂ ಸಹ ಸುಮ್ಮನೆ ಪಾಲಿಸಿಲ್ಲ. ಕೈಲಾಗದವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಪ್ರತಿಯೊಬ್ಬರ ಮನೆಯಲ್ಲೂ ಹಿರಿಯರು ನೀತಿ ಪಾಠವನ್ನು ಹೇಳಿಯೇ ಇರುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮ ಆದಾಯದ ಒಂದು ಭಾಗವನ್ನು ನಿರ್ಗತಿಕರಿಗೆ ಸಹಾಯ ಮಾಡಲು ಮತ್ತು ದಾನ ಮಾಡಲು ಖರ್ಚು ಮಾಡುವ ಜನರನ್ನು ತಾಯಿ ಲಕ್ಷ್ಮಿ ಮೆಚ್ಚುತ್ತಾಳೆ ಎಂದು ಹೇಳಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News