Mango Selection Tips: ಬಣ್ಣಕ್ಕೆ ಮರುಳಾಗಬೇಡಿ.. ಸಿಹಿಯಾದ ಮಾವಿನ ಹಣ್ಣನ್ನು ಹೀಗೆ ಆಯ್ಕೆ ಮಾಡಿ..!
Mango Selection: ಹಣ್ಣುಗಳ ರಾಜ ಮಾವು ಬೇಸಿಗೆಯಲ್ಲಿ ಮಾತ್ರ ಲಭ್ಯವಿರುತ್ತದೆ.. ಬೇಸಿಗೆ ಕಾಲ ಬಂತೆಂದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳು ಸಿಗುತ್ತವೆ. ಆದರೆ ಅನೇಕರು ಮಾವಿನ ಹಣ್ಣನ್ನು ಅದರ ಬಣ್ಣ ನೋಡಿ ಖರೀದಿಸುತ್ತಾರೆ. ಆದರೆ ಇದು ತಪ್ಪು.. ಈಗ ಮಾವಿನ ಹಣ್ಣುಗಳನ್ನು ಹೇಗೆ ಖರೀದಿಸಬೇಕು ಎಂದು ತಿಳಿಯೋಣ.
Mango Selection Tips: ಮಾವು ಹಣ್ಣುಗಳ ರಾಜ. ಇದನ್ನು ಇಷ್ಟಪಡದವರು ಯಾರೂ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ... ಆದರೆ ಮಾವು ಖರೀದಿಸುವಾಗ ಕೆಲವು ಟಿಪ್ಸ್ಗಳನ್ನು ಫಾಲೋ ಮಾಡಬೇಕು..
ಮಾವಿನ ಹಣ್ಣನ್ನು ಕೊಳ್ಳುವಾಗ.. ಮೊದಲು ಅದರ ವಾಸನೆ ನೋಡಬೇಕು.. ಮಾಗಿದ ಮಾವಿನಹಣ್ಣು ಹೆಚ್ಚು ಪರಿಮಳಯುಕ್ತ ಸುವಾಸನೆಭರಿತವಾಗಿರುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣು ಈ ರೀತಿ ವಾಸನೆ ಹೊಂದಿರುತ್ತದೆ..
ಇದನ್ನೂ ಓದಿ-ಶನಿದೇವನ ಕಣ್ಣುಗಳನ್ನು ನೋಡಬಾರದು ಅಂತ ಹೇಳುತ್ತಾರೆ..! ಏಕೆ ಗೊತ್ತೆ..? ಇಲ್ಲಿದೆ ಮಾಹಿತಿ
ಮಾವಿನ ಹಣ್ಣನ್ನು ಅವುಗಳ ಬಣ್ಣ ನೋಡಿ ಕೊಳ್ಳುವುದು ಒಳ್ಳೆಯದಲ್ಲ. ಮಾವಿನಕಾಯಿಯಲ್ಲಿ ಹಲವು ವಿಧಗಳಿವೆ.. ಪ್ರತಿಯೊಂದು ಹಣ್ಣುಗಳು ವಿಭಿನ್ನ ರುಚಿಯನ್ನು ಹೊಂದಿರುತ್ತವೆ. ಇದಲ್ಲದೆ, ಕೆಲವು ಹಣ್ಣುಗಳು ಸಂಪೂರ್ಣವಾಗಿ ಹಳದಿ ಮತ್ತು ಹಸಿರು ಬಣ್ಣದಲ್ಲಿರುತ್ತವೆ... ಅವು ತಿನ್ನಲು ತುಂಬಾ ಸಿಹಿಯಾಗಿರುತ್ತವೆ. ಕೆಲವು ಹಣ್ಣು ಹೊರಗೆ ಹಸಿರು ಬಣ್ಣ ಹೊಂದಿದ್ದರೂ ರುಚಿಯಾಗಿರುತ್ತವೆ.. ಹಾಗಾಗಿ ಬಣ್ಣ ನೋಡಿ ಮಾವಿನ ಹಣ್ಣನ್ನು ಖರೀದಿಸಬೇಡಿ.
ಇದನ್ನೂ ಓದಿ-ಕೂದಲಿಗೆ ವರದಾನ ಕಾಫಿ ಪುಡಿ.. ಈ ರೀತಿ ಬಳಸಿದರೆ ದಷ್ಟ ಪುಷ್ಟ, ಕಡು ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!
ಮಾವಿನ ಹಣ್ಣುಗಳು ಸಂಪೂರ್ಣವಾಗಿ ಹಣ್ಣಾದಾಗ ಮೃದುವಾಗುತ್ತದೆ.. ಅಂತಹ ಹಣ್ಣುಗಳನ್ನು ಖರೀದಿಸುವುದು ಉತ್ತಮ. ಹಣ್ಣನ್ನು ತೆಗೆದುಕೊಳ್ಳುವ ಮುನ್ನ ಕೈಯಿಂದ ಮುಟ್ಟಿದರೆ ಮೃದು ಅನಿಸಬೇಕು.. ಆದರೆ ತುಂಬಾ ಮೃದುವಾಗಿರುವ ಮಾವಿನ ಹಣ್ಣನ್ನು ಕೊಳ್ಳಬೇಡಿ. ಕಪ್ಪು ಚುಕ್ಕೆಗಳಿರುವ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ. ಏಕೆಂದರೆ ಅವು ರುಚಿಯಾಗಿರುವುದಿಲ್ಲ...
ಕೆಲವು ಮಾವಿನಕಾಯಿಗಳು ಹುಳಿಯಾಗಿರುತ್ತವೆ. ಅಂತಹ ಮಾವಿನಹಣ್ಣುಗಳನ್ನು ವಾಸನೆಯಿಂದ ಗುರುತಿಸುವುದು ಸುಲಭ.. ಅಲ್ಲದೆ ಮದ್ಯದ ವಾಸನೆ ಬರುವ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.