ನವದೆಹಲಿ: Chaturgrahi Yoga In March 2022 - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 2022ರ ಮಾರ್ಚ್ ನಲ್ಲಿ 3 ಶುಭ ಗ್ರಹಗಳ ರಾಶಿ ಬದಲಾಗಲಿದೆ. ಯಾವುದೇ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಮಾರ್ಚ್ 6, ಭಾನುವಾರದಂದು ಬುಧ ಸಂಕ್ರಮಣ ನಡೆಯಲಿದೆ. ಇದರ ನಂತರ, ಮಾರ್ಚ್ 15 ರಂದು ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ನಂತರ ಮಾರ್ಚ್ 31 ರಂದು ಶುಕ್ರನು (Shukra Gochar March 2022) ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿದೇವ (Shani Dev) ಈಗಾಗಲೇ ಮಕರ ರಾಶಿಯಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಾಗಿ ಈ ಸಂದರ್ಭದಲ್ಲಿ, ಚತುರ್ಗ್ರಹಿ ಯೋಗವು ರೂಪಗೊಳ್ಳಲಿದೆ. ಇದು ಎಲ್ಲಾ ರಾಶಿಗಳ ಜನರ ಮೇಲೆ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ಚತುರ್ಗ್ರಹಿ ಯೋಗವು ವಿಶೇಷವಾಗಿ  4 ರಾಶಿಗಳ ಜನರಿಗೆ ಪ್ರಚಂಡ ಲಾಭವನ್ನು ತರಲಿದೆ. ಚತುರ್ಗ್ರಹಿ ಯೋಗದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

3 ಗ್ರಹಗಳು ರಾಶಿಯನ್ನು ಬದಲಾಯಿಸುತ್ತಿವೆ
ಮಾರ್ಚ್ 6 ರ ಭಾನುವಾರದಂದು ಬುಧನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ. ನಂತರ ಮಾರ್ಚ್ 18 ರಂದು ಬುಧನು ಅದೇ ರಾಶಿಯಲ್ಲಿ ಅಸ್ತಮಿಸುತ್ತಾನೆ. ಇದರ ನಂತರ, ಮಾರ್ಚ್ 24 ರಂದು, ಬುಧ ಗ್ರಹವು ಮೀನ ರಾಶಿಯಲ್ಲಿ ಸಾಗಲಿದೆ. ಮಾರ್ಚ್ 15 ರಂದು, ಸೂರ್ಯ ದೇವರು (Surya Gochar March 2022) ಮೀನ ರಾಶಿಯಲ್ಲಿ ಸಾಗುತ್ತಾನೆ. ಮಾರ್ಚ್ ಅಂತ್ಯದಲ್ಲಿ ಅಂದರೆ ಮಾರ್ಚ್ 31 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

ಈ 4 ರಾಶಿಗಳ ಜಾತಕದವರಿಗೆ ಅದ್ಭುತ ಪ್ರಯೋಜನಗಳು ಸಿಗಲಿವೆ
ಮೇಷ:
ಮೇಷ ರಾಶಿಯವರಿಗೆ ಚತುರ್ಗ್ರಹಿ ಯೋಗದಿಂದ ಅಪಾರ ಲಾಭ ದೊರೆಯಲಿದೆ. ಈ ಸಮಯದಲ್ಲಿ, ಕೆಲಸದಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಇದಲ್ಲದೇ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರುವುದು.

ವೃಷಭ: ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಬಲವಾಗಲಿದೆ. ಉದ್ಯೋಗದಲ್ಲಿ  ಲಾಭ ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಆದಾಯ ದ್ವಿಗುಣವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.


ಇದನ್ನೂ ಓದಿ-ಮಹಾಶಿವರಾತ್ರಿಯಂದು ಈ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ ಪ್ರಾಪ್ತಿಯಾಗುತ್ತದೆ ಅಖಂಡ ಸೌಭಾಗ್ಯ

ತುಲಾ: ಉದ್ಯೋಗದಲ್ಲಿ ಬಡ್ತಿಯಿಂದಾಗಿ ಆದಾಯ ಹೆಚ್ಚಲಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ.


ಇದನ್ನೂ ಓದಿ-ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಪತಿಯ ಪಾಲಿಗೆ ಅದೃಷ್ಟದಾತೆ

ವೃಶ್ಚಿಕ: ಚತುರ್ಗ್ರಹಿ ಯೋಗವು ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಉದ್ಯೋಗ ಮತ್ತು ನೌಕರಿಯಲ್ಲಿ  ಧನಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ಆದಾಯದ ಮೂಲ ಹೆಚ್ಚಾಗಲಿದೆ. ಇದಲ್ಲದೆ, ಅನೇಕ ಕ್ಷೇತ್ರಗಳಿಂದ ಆದಾಯ ಹರಿದುಬರಲಿದೆ.


ಇದನ್ನೂ ಓದಿ-ನಾಳೆ ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಂಗಾರಕ ಯೋಗ, ಜೀವನದ ಮೇಲೆ ಬೀರಲಿದೆ ಭಾರೀ ಪ್ರಭಾವ


(Desclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ