2022ರಲ್ಲಿ ಮದುವೆಯಾಗುವುದು ಮಂಗಳಕರ: ಶುಭ ಮುಹೂರ್ತ, ಶುಭ ದಿನ ಮತ್ತು ದಿನಾಂಕ ತಿಳಿಯಿರಿ
ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಮದುವೆಗೆ ಶುಭ ಮುಹೂರ್ತ ಹಾಗೂ ಶುಭ ಯೋಗವನ್ನು ಹೇಳಲಾಗಿದೆ.
ನವದೆಹಲಿ: ಮದುವೆಗಳ ಸೀಸನ್ ಆರಂಭವಾಗಿದೆ. ಆದರೆ ಡಿಸೆಂಬರ್ 15ರಿಂದ ಆರಂಭವಾಗಲಿರುವ ಮಲಮಾಸ(ಅಧಿಕಮಾಸ)ವು ಮತ್ತೊಮ್ಮೆ ಮದುವೆಗಳಿಗೆ ಬ್ರೇಕ್ ಹಾಕಲಿದೆ. ಇದರ ನಂತರ 2022ರ ಹೊಸ ವರ್ಷದ ಜನವರಿ 3ನೇ ವಾರದಿಂದ ಮಂಗಳವಾದ್ಯಗಳು ಮತ್ತೆ ರಿಂಗಣಿಸಲು ಪ್ರಾರಂಭಿಸುತ್ತವೆ. ನೀವು ಏನಾದರೂ ಮದುವೆಗೆ ಅಥವಾ ಮದುವೆಯಾಗಲು ಪ್ಲಾನ್ ಮಾಡಿದ್ದರೆ 2022ರ 12 ತಿಂಗಳುಗಳಲ್ಲಿ ಯಾವ ದಿನ ಉತ್ತಮ, ಶುಭ ಮುಹೂರ್ತದ(Auspicious Hindu Marriage Dates) ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಅಕ್ಷಯ ತೃತೀಯದಂತಹ ಕೆಲವು ಶುಭ ದಿನಗಳು ಮುಹೂರ್ತವಿಲ್ಲದೆಯೇ ನಡೆಯುತ್ತವೆ. 2022 ಮೇ 3ರ ಅಕ್ಷಯ ತೃತೀಯ ದಿನದಂದು ಮದುವೆಯಾಗುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
2022ರ ಮದುವೆಯ ಶುಭ ಮುಹೂರ್ತ
2022ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಮದುವೆಗಳಿಗೆ ಮುಹೂರ್ತ(Hindu Marriage Dates)ವಿರುತ್ತದೆ. ಈ ಸಮಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಚಾತುರ್ಮಾಸ್ ಕಾರಣ ವಿವಾಹ ಮುಹೂರ್ತ ಇರುವುದಿಲ್ಲ.
ಇದನ್ನೂ ಓದಿ: Good Luck Tips: ನೀವು ಧರಿಸುವ ಶೂಗಳ ಬಗ್ಗೆ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ
ಜನವರಿ 2022: 2022ರ ಜನವರಿ 22, 23, 24 ಮತ್ತು 25ರಂದು ವಿವಾಹವಾಗುವುದು ಮಂಗಳಕರವಾಗಿರುತ್ತದೆ.
ಫೆಬ್ರವರಿ 2022: 5, 6, 7, 9,10, 11,12,18, 19, 20 ಮತ್ತು 22ರಂದು ವಿವಾಹವಾಗುವುದು ಶುಭಕರವಾಗಿರುತ್ತದೆ.
ಮಾರ್ಚ್ 2022: ಮಾರ್ಚ್ 2022ರಲ್ಲಿ ಮದುವೆಗೆ ಕೇವಲ 2 ಮಂಗಳಕರ ಸಮಯ(Shubh Vivah Muhurat)ಗಳಿವೆ. ಈ ತಿಂಗಳ 4 ಮತ್ತು 9ರಂದು ವಿವಾಹವು ಶುಭವಾಗಲಿದೆ.
ಏಪ್ರಿಲ್ 2022: 2022ರ ಏಪ್ರಿಲ್ 14, 15, 16, 17, 19, 20, 21, 22, 23, 24 ಮತ್ತು 27ರಂದು ವಿವಾಹವಾಗುವುದು ಮಂಗಳಕರವಾಗಿರುತ್ತದೆ.
ಮೇ 2022: ಮೇ 2022ರಲ್ಲಿ 2, 3 (ಅಕ್ಷಯ ತೃತೀಯ), 9, 10, 11, 12, 15, 17, 18, 19, 20, 21, 26 ಮತ್ತು 31ರಂದು ವಿವಾಹವಾಗುವುದು ಶುಭಕರವಾಗಿರುತ್ತದೆ.
ಜೂನ್ 2022: ಜೂನ್ 2022ರಲ್ಲಿ ಮದುವೆಯಾಗಲು ಮಂಗಳಕರ ಸಮಯ 1, 5, 6, 7, 8, 9, 10, 11, 13, 17, 23 ಮತ್ತು 24ರಂದು ಇರುತ್ತದೆ.
ಜುಲೈ 2022: ಜುಲೈ ತಿಂಗಳಲ್ಲಿ ಮದುವೆಯಾಗಲು ಮಂಗಳಕರ ಸಮಯವು 4, 6, 7, 8 ಮತ್ತು 9ನೇ ತಾರೀಖಿನಂದು ಇರುತ್ತದೆ.
ನವೆಂಬರ್ 2022: ನವೆಂಬರ್ 2022 ರಲ್ಲಿ ಮದುವೆಗೆ ಶುಭ ಸಮಯವು 25, 26, 28 ಮತ್ತು 29ರಂದು ಇರುತ್ತದೆ.
ಡಿಸೆಂಬರ್ 2022: ಡಿಸೆಂಬರ್ 2022ರಲ್ಲಿ ಮದುವೆಯಾಗಲು, 1, 2, 4, 7, 8, 9 ಮತ್ತು 14ರಂದು ಶುಭ ಸಮಯ ಇರುತ್ತದೆ.
ಮದುವೆಗೆ ಶುಭ ದಿನ ಮತ್ತು ದಿನಾಂಕ
ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಮದುವೆಗೆ ಶುಭ ಮುಹೂರ್ತ(Marriage Dates 2022) ಹಾಗೂ ಶುಭ ಯೋಗವನ್ನು ಹೇಳಲಾಗಿದೆ. ಅದೇ ರೀತಿ ಮದುವೆಗೆ ಮಂಗಳಕರ ದಿನಗಳು, ಶುಭ ದಿನಾಂಕಗಳನ್ನೂ ಹೇಳಲಾಗಿದೆ. ಈ ದಿನಗಳು ಮತ್ತು ದಿನಾಂಕಗಳಲ್ಲಿ ಮದುವೆಯಾಗುವುದು ತುಂಬಾ ಮಂಗಳಕರವಾಗಿದೆ. ಇದರಿಂದಾಗಿ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪತಿ-ಪತ್ನಿಯರ ಅದೃಷ್ಟ ವೃದ್ಧಿಯಾಗುತ್ತದೆ.
ಇದನ್ನೂ ಓದಿ: Weekly Numerology Horoscope: ಹುಟ್ಟಿದ ದಿನಾಂಕದಿಂದ ನಿಮ್ಮ ವಾರ ಹೇಗಿರುತ್ತದೆ ಎಂದು ತಿಳಿಯಿರಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರವನ್ನು ಮದುವೆಯಾಗಲು ಹೆಚ್ಚು ಅನುಕೂಲಕರ(Marriage Muhurats)ವೆಂದು ಪರಿಗಣಿಸಲಾಗುತ್ತದೆ. ಆದರೆ ಮಂಗಳವಾರ ಮದುವೆಗೆ ಅಶುಭವೆಂದು ಪರಿಗಣಿಸಲಾಗಿದೆ. ಹಾಗೆಯೇ ದ್ವಿತೀಯ ತಿಥಿ, ತೃತೀಯಾ ತಿಥಿ, ಪಂಚಮಿ ತಿಥಿ, ಸಪ್ತಮಿ ತಿಥಿ, ಏಕಾದಶಿ ತಿಥಿ ಮತ್ತು ತ್ರಯೋದಶಿ ತಿಥಿಗಳು ವಿವಾಹವಾಗಲು ಬಹಳ ಶುಭ. ಅಲ್ಲದೆ ಅಭಿಜಿತ್ ಮುಹೂರ್ತವು ಮದುವೆಗೆ ಅತ್ಯಂತ ಮಂಗಳಕರವಾಗಿದೆ. ಇದಲ್ಲದೇ ಗೋಧೂಳಿ ಲಗ್ನದಲ್ಲಿ ಮದುವೆ ಮಾಡುವುದು ಉತ್ತಮವೆಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.