Good Luck Tips: ನೀವು ಧರಿಸುವ ಶೂಗಳ ಬಗ್ಗೆ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ

Good Luck Tips: ಬೂಟುಗಳು ಸಹ ಜಾತಕದ ಗ್ರಹಗಳ ಅಭಿವ್ಯಕ್ತಿಗಳಿಗೆ ಸಂಬಂಧಿಸಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಎಂಟನೇ ಮನೆಯು ಪಾದದ ಅಡಿಭಾಗಕ್ಕೆ ಸಂಬಂಧಿಸಿದೆ.  

Written by - Yashaswini V | Last Updated : Nov 22, 2021, 06:51 AM IST
  • ಬೂಟುಗಳು ಸಹ ಜಾತಕದ ಗ್ರಹಗಳ ಅಭಿವ್ಯಕ್ತಿಗಳಿಗೆ ಸಂಬಂಧಿಸಿದೆ
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಎಂಟನೇ ಮನೆಯು ಪಾದದ ಅಡಿಭಾಗಕ್ಕೆ ಸಂಬಂಧಿಸಿದೆ
  • ಯಾವುದೇ ವ್ಯಕ್ತಿಯು ತನ್ನ ಪಾದುಕೆಗಳ ಅಂದರೆ ಶೂ ಅಥವಾ ಚಪ್ಪಲಿ ವಿಷಯದಲ್ಲಿ ಮಾಡುವ ತಪ್ಪುಗಳಿಂದಾಗಿ ಅವನು ವೃತ್ತಿ ಮತ್ತು ಹಣದ ವಿಷಯದಲ್ಲಿ ನರಳಬೇಕಾಗುತ್ತದೆ
Good Luck Tips: ನೀವು ಧರಿಸುವ ಶೂಗಳ ಬಗ್ಗೆ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ title=
Good Luck Tips

Good Luck Tips: ಶುಭ್ರವಾದ ಬಟ್ಟೆ ಮತ್ತು ಬೂಟುಗಳನ್ನು ಧರಿಸುವುದು ಜನರ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ಇದು ನಮಗೇ ಅರಿವಿಲ್ಲದೆ ನಮಗೊಂದು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಬಟ್ಟೆ ಅಷ್ಟೊಂದು ಚೆನ್ನಾಗಿಲ್ಲದಿದ್ದರೂ ಶೂಗಳನ್ನು ಯಾವಾಗಲೂ ಚೆನ್ನಾಗಿ ಧರಿಸಬೇಕು ಎಂದು ಹೇಳಲಾಗುತ್ತದೆ. ವ್ಯಕ್ತಿತ್ವ ವಿಕಸನದ ವಿಷಯದಲ್ಲಿ ಇವುಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆಯಾದರೂ, ಜ್ಯೋತಿಷ್ಯದ ವಿಷಯದಲ್ಲಿ ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಎಂಟನೇ ಮನೆಯು ಪಾದುಕೆಗೆ ಸಂಬಂಧಿಸಿದೆ:
ಬೂಟುಗಳು ಸಹ ಜಾತಕದ ಗ್ರಹಗಳ ಅಭಿವ್ಯಕ್ತಿಗಳಿಗೆ ಸಂಬಂಧಿಸಿದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಜಾತಕದ ಎಂಟನೇ ಮನೆಯು ಪಾದದ ಅಡಿಭಾಗಕ್ಕೆ ಸಂಬಂಧಿಸಿದೆ. ಯಾವುದೇ ವ್ಯಕ್ತಿಯು ತನ್ನ ಪಾದುಕೆಗಳ ಅಂದರೆ ಶೂ ಅಥವಾ ಚಪ್ಪಲಿ ವಿಷಯದಲ್ಲಿ ಮಾಡುವ ತಪ್ಪುಗಳಿಂದಾಗಿ ಅವನು ವೃತ್ತಿ ಮತ್ತು ಹಣದ ವಿಷಯದಲ್ಲಿ ನರಳಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ಬೂಟುಗಳನ್ನು ಧರಿಸುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಜ್ಯೋತಿಷ್ಯದಲ್ಲಿ ಇದಕ್ಕೆ ಕೆಲವು ನಿಯಮಗಳಿವೆ.

ಎಷ್ಟೋ ಸಲ ಮನೆ ಮಂದಿ ಒಬ್ಬರಿಗೊಬ್ಬರು ಗಿಫ್ಟ್ ಕೊಟ್ಟಾಗ ಶೂ, ಚಪ್ಪಲಿ ಗಿಫ್ಟ್ ಕೊಡ್ತಾರೆ. ಆದರೆ ಹೀಗೆ ಮಾಡುವುದರಿಂದ ಕೊಡುವವರಿಗೂ ಮತ್ತು ಸ್ವೀಕರಿಸುವವರಿಗೂ ಹೆಚ್ಚು ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಯಾರಿಗೂ ಸಹ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಬೇಡಿ.

ಇದನ್ನೂ ಓದಿ- Chanakya Niti:ಈ ಐದು ಗುಣಗಳನ್ನು ಹೊಂದಿರುವ ಮಹಿಳೆಯರು ವ್ಯಕ್ತಿಯೊಬ್ಬನ ಭಾಗ್ಯವನ್ನೇ ಬದಲಾಯಿಸುತ್ತಾರೆ

ಉಡುಗೊರೆಯಾಗಿ ದೊರೆತ ಪಾದರಕ್ಷೆಗಳನ್ನು (Footwear) ಧರಿಸುವುದರಿಂದ ಶನಿ ದೇವನು ಹೆಗಲೇರುತ್ತಾನೆ. ಇದರಿಂದ ಕೆಟ್ಟ ಫಲಿತಾಂಶಗಳು ಲಭ್ಯವಾಗುತ್ತವೆ. ಆದ್ದರಿಂದ, ಶೂಗಳು ಮತ್ತು ಸ್ಯಾಂಡಲ್ಗಳನ್ನು ಉಡುಗೊರೆಯಾಗಿ ನೀಡಬಾರದು ಅಥವಾ ಖರೀದಿಸಬಾರದು.

ಹರಿದ ಬೂಟುಗಳು:
ಹರಿದ ಅಥವಾ ಹಾನಿಗೊಳಗಾದ ಬೂಟುಗಳನ್ನು ಧರಿಸಬೇಡಿ. ವಿಶೇಷವಾಗಿ ಕೆಲಸದ ಸಂದರ್ಶನ ಅಥವಾ ಪ್ರಮುಖ ಕಾರ್ಯಯೋಜನೆಗಳಿಗೆ ಹೋಗುವಾಗ ಹರಿದ ಅಥವಾ ಹಾನಿಗೊಳಗಾದ ಬೂಟುಗಳನ್ನು ಧರಿಸಬೇಡಿ. ಹಾಗೆ ಮಾಡುವುದರಿಂದ ಯಶಸ್ಸಿನ ಅಗತ್ಯವಿರುವಲ್ಲಿ ವೈಫಲ್ಯಕ್ಕೆ ಕಾರಣವಾಗುತ್ತದೆ.

ಕದ್ದು ಧರಿಸಿದ ಪಾದರಕ್ಷೆಗಳು:
ಕದ್ದ ಬೂಟುಗಳು ವಿವಿಧ ಪರೀಕ್ಷೆಗಳನ್ನು ನೀಡುತ್ತವೆ. ಅನೇಕ ಸಂದರ್ಭಗಳಲ್ಲಿ, ಸಾಮಾಜಿಕ ಕಾರ್ಯಕ್ರಮಗಳು ಅಥವಾ ದೇವಾಲಯಗಳಲ್ಲಿ ಶೂ, ಕಳ್ಳತನವಾಗುವುದು  ಸಾಮಾನ್ಯ. ಕೆಲವರು ತಮ್ಮ ಪಾದರಕ್ಷೆ ಕಳುವಾಗಿದ್ದರೆ ಇತರರ ಪಾದರಕ್ಷೆಯನ್ನು ಧರಿಸುತ್ತಾರೆ, ಹಾಗೆ ಮಾಡುವುದರಿಂದ ಆರೋಗ್ಯ ಮತ್ತು ಸಂಪತ್ತಿಗೆ ಹಾನಿಯಾಗುತ್ತದೆ.

ಇದನ್ನೂ ಓದಿ- ನಿಮ್ಮ ವೃತ್ತಿ ಜೀವನವನ್ನೇ ಬುಡಮೇಲು ಮಾಡುವ ಒಂದು ವಾಸ್ತು ದೋಷ ಯಾವುದು ತಿಳಿಯಿರಿ

ಹಳದಿ ಬೂಟುಗಳು:
ಹಳದಿ ಬೂಟುಗಳನ್ನು ಧರಿಸುವುದು ತುಂಬಾ ಅಹಿತಕರವಾಗಿರುತ್ತದೆ. ಹಳದಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣದ ಬೂಟುಗಳನ್ನು ಧರಿಸುವುದರಿಂದ ಗೌರವ ಮತ್ತು ಹಣದ ನಷ್ಟವಾಗುತ್ತದೆ.

ಕಂದು ಶೂಗಳು:
ಕೆಲಸದ ಸ್ಥಳದಲ್ಲಿ ಕಂದು ಬಣ್ಣದ ಬೂಟುಗಳನ್ನು ಧರಿಸುವುದು ಅಷ್ಟು ಸೂಕ್ತವಲ್ಲ. ಇದು ಕೆಲಸದ ಸ್ಥಳದಲ್ಲಿ ಪ್ರಗತಿಗೆ ಅಡ್ಡಿಯಾಗಬಹುದು.

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ದೃಢಪಡಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News