Mangal Gochar October 2022: ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವ ಕೊಡಲಾಗಿದೆ. ಗ್ರಹಗಳ ಈ ಸ್ಥಾನ ಪಲ್ಲಟದ ಪ್ರಭಾವ ಎಲ್ಲಾ 12 ರಾಶಿಗಳ ಜನರ ಜೀವನದಲ್ಲಿ ಭಾರಿ ಬದಲಾವಣೆ ತರುತ್ತದೆ. ಕೆಲ ರಾಶಿಗಳ ಜನರ ಜೀವನದಲ್ಲಿ ಇದು ಸಕಾರಾತ್ಮಕ ಬದಲಾವಣೆಗಳನ್ನು ತಂದರೆ, ಉಳಿದ ರಾಶಿಗಳ ಪಾಲಿಗೆ ಇದು ನಕಾರಾತ್ಮಕ ಸಾಬೀತಾಗುವ ಸಾಧ್ಯತೆ ಇರುತ್ತದೆ. ಈ ತಿಂಗಳ ಮೊದಲ ರಾಶಿ ಪರಿವರ್ತನೆ ಅಕ್ಟೋಬರ್ 16ರಂದು ನಡೆಯಲಿದೆ. ಅಕ್ಟೋಬರ್ 16 ರಂದು ಗ್ರಹಗಳ ಸೇನಾಪತಿಯಾಗಿರುವ ಮಂಗಳ ತನ್ನ ರಾಶಿಯನ್ನು ಬದಲಾಯಿಸಿ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳನ ಈ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳ ಜನರ ಭಾಗ್ಯದಲ್ಲಿ ಬಂಬಾಟ್ ಬದಲಾವಣೆಯಾಗಲಿದೆ. ಇನ್ನೊಂದೆಡೆ ಕೆಲ ರಾಶಿಗಳ ಜನರು ವಿಶೇಷ ಎಚ್ಚರಿಕೆಯನ್ನು ವಹಿಸುವ ಅವಶ್ಯಕತೆ ಇದೆ. ಹಾಗಾದರೆ ಬನ್ನಿ ಮಂಗಳ ರಾಶಿ ಪರಿವರ್ತನೆಯಿಂದ ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಮೇಷ ರಾಶಿ- ಕಾರ್ಯಗಳ ಪ್ರತಿ ಉತ್ಸಾಹ ಇರಲಿದೆ. ಆದರೆ, ಸಂಭಾಷಣೆಯಲ್ಲಿ ಸಂತುಲನ ಕಾಯ್ದುಕೊಳ್ಳಿ. ಮನಸ್ಸು ಅಶಾಂತವಾಗಿರಲಿದೆ. ಧರ್ಮ-ಕರ್ಮದ ಪ್ರತಿ ಆಸಕ್ತಿ ಹೆಚ್ಚಾಗಲಿದೆ. ತಂದೆಗೆ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಕಾಳಜಿ ವಹಿಸಿ. ತಾಯಿಯ ಬೆಂಬಲ ಸಿಗಲಿದೆ. ತಾಯಿಯಿಂದ ಧನಪ್ರಾಪ್ತಿಯ ಯೋಗವಿದೆ. ಸ್ನೇಹಿತನ ಆಗಮನದ ಸಾಧ್ಯತೆ ಇದೆ. ಬೌದ್ಧಿಕ ಕಾರ್ಯಗಳಲ್ಲಿ ಧನಾಗಮನವಿರಲಿದೆ. ಸುಕ್ಷೇತ್ರಕ್ಕೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಖರ್ಚು ಅಧಿಕವಾಗಿರಲಿದೆ. ಆರೋಗ್ಯದ ಪ್ರತಿ ಎಚ್ಚರಿಕೆಯಿಂದ ಇರಿ.


ವೃಷಭ ರಾಶಿ- ತಾಳ್ಮೆಯ ಕೊರತೆ ಕಾಡಲಿದೆ, ಸಂಯಮದಿಂದಿರಿ, ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಸ್ನೇಹಿತರ ಸಹಾಯದಿಂದ ವ್ಯಾಪಾರ ವಿಸ್ತರಣೆಯ ಸಾಧ್ಯತೆಗಳು ಗೋಚರಿಸುತ್ತಿವೆ, ಲಾಭದ ಅವಕಾಶಗಳಿರುತ್ತವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮ ಇರಲಿದೆ. ಆದಾಯದಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ, ಖರ್ಚು ಹೆಚ್ಚಾಗಲಿದೆ. ನೀವು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ಸ್ನೇಹಿತರ ಬೆಂಬಲ ಸಿಗಲಿದೆ.


ಮಿಥುನ ರಾಶಿ- ಆತ್ಮವಿಶ್ವಾಸದ ಕೊರತೆ ಕಾಡಲಿದೆ, ಶಾಂತಿ ಕಾಪಾಡಿ. ಸ್ವಾದಿಷ್ಟ ಆಹಾರದಲ್ಲಿ ಆಸಕ್ತಿ ಹೆಚ್ಚಾಗಲಿದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ, ನೀವು ಸ್ನೇಹಿತರ ಸಹಾಯದಿಂದ ಆಸ್ತಿಯಲ್ಲಿ ಹೂಡಿಕೆ ಮಾಡುವಿರಿ. ಸಂಗ್ರಹವಾದ ಸಂಪತ್ತು ಕಡಿಮೆಯಾಗುವ ಸಾಧ್ಯತೆ ಇದೆ, ಬರವಣಿಗೆ, ಬೌದ್ಧಿಕ ಕೆಲಸಗಳಿಂದ ಹಣ ಬರಬಹುದು. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ, ಬಟ್ಟೆಗಾಗಿ ಖರ್ಚು ಹೆಚ್ಚಾಗಲಿದೆ. ಕೆಲಸದ ವ್ಯಾಪ್ತಿಯಲ್ಲಿ ಹೆಚ್ಚಳ ಸಾಧ್ಯತೆ ಇದೆ, ಸಾಕಷ್ಟು ಶ್ರಮ ಇರಲಿದೆ, ಖರ್ಚು ಹೆಚ್ಚಾಗಲಿದೆ.


ಕರ್ಕ ರಾಶಿ- ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಿ, ಆತ್ಮವಿಶ್ವಾಸ ಕಡಿಮೆಯಾಗಲಿದೆ. ಅತಿಯಾದ ಕೋಪವನ್ನು ತಪ್ಪಿಸಿ, ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು. ಕುಟುಂಬದ ಹಿರಿಯರಿಂದ ಲಾಭ ಪಡೆಯುವಿರಿ, ನೀವು ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು. ಸಹೋದರರ ಬೆಂಬಲ ಸಿಗಲಿದೆ. ಯಾವುದೇ ಸ್ಥಗಿತಗೊಂಡ ಹಣ ನಿಮ್ಮ ಬಳಿಗೆ ಮರಳಲಿದೆ. ಕೆಲಸದಲ್ಲಿ ನಿಮಗೆ ಅಧಿಕಾರಿಗಳ ಸಹಕಾರ ಸಿಗಲಿದೆ. ಸ್ಥಾನ ಪರಿವರ್ತನೆಯ ಸಾಧ್ಯತೆ ಗೋಚರಿಸುತ್ತಿದೆ.


ಸಿಂಹ ರಾಶಿ- ಮನಸ್ಸಿನಲ್ಲಿ ಹತಾಶೆ ಮತ್ತು ಅಸಮಾಧಾನದ ಭಾವನೆ ಇರಲಿದೆ, ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಅಧ್ಯಯನದಲ್ಲಿ ಆಸಕ್ತಿ ಇರಲಿದೆ, ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ, ಆಸ್ತಿಯಲ್ಲಿ ಹೆಚ್ಚಳ ಸಾಧ್ಯತೆ ಇದೆ. ತಾಯಿಯ ಬೆಂಬಲ ಸಿಗಲಿದೆ, ಖರ್ಚು ಹೆಚ್ಚಾಗಲಿದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಶೈಕ್ಷಣಿಕ ಕೆಲಸದಲ್ಲಿ ಆಹ್ಲಾದಕರ ಫಲಿತಾಂಶಗಳು ಕಂಡುಬರಲಿವೆ. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗುವುದು, ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯಗಳಿರಬಹುದು, ಬದಲಾವಣೆಯ ಸಾಧ್ಯತೆ ಇದೆ.


ಕನ್ಯಾ ರಾಶಿ- ವ್ಯಾಪಾರ ವಿಸ್ತರಣೆ ನಿಮ್ಮ ಯೋಜನೆಯು ಸಾಕಾರವಾಗಲಿದೆ, ನೀವು ಸಹೋದರರ ಬೆಂಬಲವನ್ನು ಪಡೆಯುವಿರಿ, ಆದರೆ ಸಾಕಷ್ಟು ಪರಿಶ್ರಮ ಇರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರಲಿವೆ, ಯೋಜನೇತರ ವೆಚ್ಚಗಳು ಹೆಚ್ಚಾಗಲಿವೆ. ಉಡುಗೊರೆಯ ರೂಪದಲ್ಲಿ ಬಟ್ಟೆಗಳು ಸಿಗುವ ಸಾಧ್ಯತೆ ಇದೆ. ಕೆಲಸದ ಬದಲಾವಣೆಯೊಂದಿಗೆ, ನೀವು ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆಮದು-ರಫ್ತು ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. ತಾಯಿಯ ಸಾನಿಧ್ಯ, ವಾಹನ ಸುಖ ಹೆಚ್ಚಾಗಬಹುದು. ನೌಕರಿಯಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ.


ತುಲಾ ರಾಶಿ- ಮಾತಿನಲ್ಲಿ ಕಠೋರತೆಯ ಭಾವನೆ ಇದ್ರಲಿದೆ, ಸಂಭಾಷಣೆಯಲ್ಲಿ ಮಿತವಾಗಿರಿ. ಬಟ್ಟೆ ಇತ್ಯಾದಿಗಳತ್ತ ಒಲವು ಹೆಚ್ಚಾಗಲಿದೆ. ತಾಯಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಧನಪ್ರಾಪ್ತಿಯು ಆಗಲಿದೆ. ಸಂಗ್ರಹವಾದ ನಿಧಿ ಹೆಚ್ಚಾಗಲಿದೆ, ಅಧಿಕಾರಿಗಳು ಉದ್ಯೋಗದಲ್ಲಿ ಬೆಂಬಲವನ್ನು ಪಡೆಯಲಿದ್ದಾರೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಸಂಗ್ರಹವಾದ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗುವುದು, ವಾಹನ ಸುಖ ಹೆಚ್ಚಾಗಲಿದೆ. ಸ್ಥಾನ ಪಲ್ಲಟದ ಸಾಧ್ಯತೆ ಇದೆ.


ವೃಶ್ಚಿಕ ರಾಶಿ- ಆತ್ಮವಿಶ್ವಾಸದಿಂದ ತುಮ್ಬಿರುವಿರಿ, ಆದರೆ ಸಂಯಮದಿಂದಿರಿ. ಸೋಮಾರಿತನ ಅಧಿಕವಾಗಿರಲಿದೆ, ಕೌಟುಂಬಿಕ ಸೌಕರ್ಯಗಳ ಹೆಚ್ಚಾಗಲಿವೆ. ಜೀವನ ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ, ಕಠಿಣ ಪರಿಶ್ರಮ ಇರಲಿದೆ. ತಾಯಿಯಿಂದ ಬೆಂಬಲ ಸಿಗಲಿದೆ. ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ, ಕಾರ್ಯ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಕಠಿಣ ಪರಿಶ್ರಮ ಇರಲಿದೆ.


ಧನು ರಾಶಿ- ಆತ್ಮವಿಶ್ವಸದಿಂದಿರುವಿರಿ, ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆಸ್ತಿ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಸಂಗಾತಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ, ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಸಹೋದರರ ಸಹಕಾರ ಸಿಗಲಿದೆ, ಆದರೆ ಸಾಕಷ್ಟು ಕಠಿಣ ಪರಿಶ್ರಮ ಇರಲಿದೆ. ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು ಕಾಳಜಿವಹಿಸಿ, ಜೀವನದಲ್ಲಿ ಪರಿಸ್ಥಿತಿಗಳು ಅಹಿತಕರವಾಗಿರುತ್ತದೆ.


ಮಕರ ರಾಶಿ- ನೀವು ಯಾವುದಾದರೊಂದು ಕಾರ್ಯಕ್ರಮಕ್ಕೆ ಭೇಟಿ ನೀಡಬೇಕಾಗಬಹುದು. ಜೀವನ ಕೊಂಚ ಅಹಿತಕರವಾಗಿರಲಿದೆ, ಸಿಹಿ ಆಹಾರದ ಕಡೆಗೆ ಒಲವು ಹೆಚ್ಚಾಗಲಿದೆ. ಆಸ್ತಿಯಿಂದ ಆದಾಯ ಹೆಚ್ಚಾಗಬಹುದು, ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ, ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತವೆ. ಆದಾಯ ಹೆಚ್ಚಾಗಲಿದೆ, ಆದರೆ ಸ್ಥಾನ ಪರಿವರ್ತನೆಯ ಸಾಧ್ಯತೆಗಳಿವೆ.


ಕುಂಭ ರಾಶಿ- ಮನಸ್ಸಿನಲ್ಲಿ ಸಂತೋಷದ ಭಾವನೆಗಳು ಇರಲಿವೆ, ಆದರೂ ಸ್ವಯಂ ಸಂಯಮದಿಂದಿರಿ. ಅತಿಯಾದ ಕೋಪವನ್ನು ತಪ್ಪಿಸಿ, ತಾಯಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ನೀವು ಉದ್ಯೋಗದಲ್ಲಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು, ಆದಾಯ ಹೆಚ್ಚಾಗಲಿದೆ. ಜೀವನ ಪರಿಸ್ಥಿತಿಗಳು ನೋವಿನಿಂದ ಕೊಡಿರಬಹುದು, ಅಧಿಕಾರಿಗಳಿಂದ ಬೆಂಬಲ, ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಬಟ್ಟೆ ಇತ್ಯಾದಿಗಳ ಮೇಲಿನ ವೆಚ್ಚಗಳು ಹೆಚ್ಚಾಗಬಹುದು. ತಾಯಿಗೆ ಆರೋಗ್ಯ ಸಮಸ್ಯೆಗಳಿರಬಹುದು, ಜೀವನ ಪರಿಸ್ಥಿತಿಗಳು ಅಹಿತಕರವಾಗಿರುವ ಸಾಧ್ಯತೆ ಇದೆ.


ಇದನ್ನೂ ಓದಿ-Astrology : ಮನೆಯಲ್ಲಿ ಬರುವ ಈ ಹುಳಗಳು ನೀಡುತ್ತವೆ ಭವಿಷ್ಯದ ಘಟನೆಗಳ ಸುಳಿವು.!


ಮೀನ ರಾಶಿ- ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಆದರೆ ನೀವು ಕುಟುಂಬದ ಬೆಂಬಲವನ್ನು ಪಡೆಯುವಿರಿ. ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬೇಕಾಗಬಹುದು. ನಿಮ್ಮ ಆಹಾರದ ಬಗ್ಗೆ ಜಾಗ್ರತೆ ವಹಿಸಿ, ಆರೋಗ್ಯವು ತೊಂದರೆಗೊಳಗಾಗಬಹುದು. ಹಳೆಯ ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ. ಇಚ್ಛೆಗೆ ವಿರುದ್ಧವಾಗಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಳ ಸಾಧ್ಯತೆ ಇದೆ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ, ಖರ್ಚುಗಳು ಹೆಚ್ಚಾಗಲಿವೆ. ಉಡುಗೊರೆಯ ರೂಪದಲ್ಲಿ ಉಡುಪು ಸಿಗುವ ಸಾಧ್ಯತೆ ಇದೆ.


ಇದನ್ನೂ ಓದಿ-October 10 ರವರೆಗಿನ ಸಮಯ ಈ 4 ರಾಶಿಗಳ ಜನರ ಪಾಲಿಗೆ ವರದಾನಕ್ಕೆ ಸಮಾನ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.