ಬೆಂಗಳೂರು : ಮಹಾಲಕ್ಷ್ಮಿಯ ಆಶೀರ್ವಾದ ಯಾರ ಮೇಲಿರುತ್ತದೆಯೋ, ಅವರ ಜೀವನ ಯಾವುದೇ ತೊಡಕಿಲ್ಲದಂತೆ ನಡೆಯುತ್ತದೆ. ಅವರ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಯಾವಾಗಲೂ ಸಮೃದ್ಧಿ ನೆಲೆಯಾಗಿರುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದ ಬೇಕೆಂದರೆ ಲಕ್ಷ್ಮೀ ದೇವಿಯನ್ನು ಮೆಚ್ಚಿಸುವುದು ಅವಶ್ಯಕ. ವಾಸ್ತು ಶಾಸ್ತ್ರದಲ್ಲಿ ಲಕ್ಷ್ಮೀ ದೇವಿಯನ್ನು ಮೆಚ್ಚಿಸುವ ಕೆಲವು ವಿಧಾನಗಳನ್ನು ಹೇಳಲಾಗಿದೆ.
ಮಹಾ ಲಕ್ಷ್ಮೀಯ ಆಶೀರ್ವಾದ ಪಡೆಯುವುದು ಹೇಗೆ ? :
ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಏನು ಮಾಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಮಾರ್ಗಗಳನ್ನು ಅನುಸರಿಸಿದರೆ ಆದಾಯವೂ ಹೆಚ್ಚಾಗುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೂಡಾ ದೂರವಾಗುತ್ತವೆ. ಇದಕ್ಕಾಗಿ, ಲಕ್ಷ್ಮೀಯ ಫೋಟೋವನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇರಿಸಬೇಕಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಲಕ್ಷ್ಮೀಯ ಭಾವಚಿತ್ರ ಇಟ್ಟರೆ, ಬಹಳಷ್ಟು ಪ್ರಯೋಜನ ಸಿಗುತ್ತದೆ. ಆದರೆ ತಪ್ಪು ದಿಕ್ಕಿನಲ್ಲಿಟ್ಟ ಚಿತ್ರವು ಹಾನಿಯನ್ನುಂಟುಮಾಡುತ್ತದೆ .
ಇದನ್ನೂ ಓದಿ : Gemology: ಧರಿಸಿದ ಕೇವಲ 30 ದಿನದಲ್ಲಿ ನಿಮ್ಮ ಅದೃಷ್ಟ ಬದಲಿಸುವ ರತ್ನವಿದು.!
ಯಾವ ದಿಕ್ಕಿನಲ್ಲಿ ಲಕ್ಷ್ಮೀ ದೇವಿಯ ಫೋಟೋ ಹಾಕಬೇಕು :
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮೀಯ ಫೋಟೋವನ್ನು ಮನೆಯಲ್ಲಿ ಹಾಕುವಾಗ, ಲಕ್ಷ್ಮೀಯ ಫೋಟೋ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಇದಕ್ಕಾಗಿ, ಚಿತ್ರವನ್ನು ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕತೆ ಬರುತ್ತದೆ. ಮನೆಯವರು ಸಂತೋಷದಿಂದ ಆರೋಗ್ಯದಿಂದ ಇರುತ್ತಾರೆ. ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮನೆ ಮಂದಿಯ ಆದಾಯ ಹೆಚ್ಚಾಗುತ್ತದೆ. ಮನೆಯಲ್ಲಿ ಯಾವಾಗಲೂ ಸಮೃದ್ಧಿ ಇರುತ್ತದೆ. ಇದರೊಂದಿಗೆ, ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀಯ ಚಿತ್ರವನ್ನು ಮನೆಯಲ್ಲಿ ಇರಿಸಬೇಕು. ಚಿತ್ರದಲ್ಲಿ 2 ಆನೆಗಳು ಹಣದ ಮಳೆಗರೆಯುತ್ತಿದ್ದರೆ ಇನ್ನೂ ಹೆಚ್ಚಿನ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : Shani Margi 2022 : ಶನಿಯ ನೇರ ಚಲನೆ ಈ ರಾಶಿಯವರ ಮೇಲೆ ನೇರ ಪರಿಣಾಮ, ನಿಮ್ಮ ರಾಶಿ ಇದ್ದರೆ ಎಚ್ಚರದಿಂದಿರಿ!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.