ನವದೆಹಲಿ: ಜ್ಯೋತಿಷ್ಯದಲ್ಲಿ ಮಂಗಳವನ್ನು ಗ್ರಹಗಳ ನಾಯಕ ಎಂದು ಕರೆಯಲಾಗುತ್ತದೆ. ಮಂಗಳ ಗ್ರಹವು ಏಪ್ರಿಲ್ 7ರಂದು ಕುಂಭ ರಾಶಿಗೆ ಪ್ರವೇಶಿಸಲಿದ್ದು(Mars Transit), ಮೇ 17 ರವರೆಗೂ ಅಲ್ಲಿಯೇ ಇರಲಿದೆ. ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಮಂಗಳದ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮಂಗಳ ಗ್ರಹದ ಸಂಚಾರವು ಯಾವ ರಾಶಿಚಕ್ರದ ಚಿಹ್ನೆಗಳಿಗೆ ಅಶುಭವೆಂಬುದರ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಮಂಗಳ ಗ್ರಹ ಸಂಚಾರದಿಂದ 7 ರಾಶಿಗಳ ಮೇಲೆ ಪರಿಣಾಮ


ಕರ್ಕಾಟಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕಾಟಕದಲ್ಲಿ ಮಂಗಳ ಗ್ರಹ(Mangal Gochar Prabhav) ದುರ್ಬಲವಾಗಿದೆ. ಮಂಗಳ ಗ್ರಹದ ಸಂಚಾರದಿಂದ ಈ ರಾಶಿಯವರ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳ ಸಂಚಾರದ ವೇಳೆ ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಕೆಲಸದ ಒತ್ತಡ ಎದುರಿಸಬೇಕಾಗಬಹುದು. ಸಣ್ಣ ಪುಟ್ಟ ವಿವಾದಗಳನ್ನೂ ಎದುರಿಸಬೇಕಾಗಬಹುದು. ತಂದೆಯೊಂದಿಗೆ ಕುಟುಂಬದಲ್ಲಿ ವಿರಸ ಉಂಟಾಗುವುದು. ಈ ಅವಧಿಯಲ್ಲಿ ಕೋಪವನ್ನು ನಿಯಂತ್ರಿಸಬೇಕು.


ಇದನ್ನೂ ಓದಿ: ಹಿಂದೂ ಹೊಸ ವರ್ಷದಲ್ಲಿ ಬದಲಾಗಲಿದೆ ಎಲ್ಲಾ ನವಗ್ರಹಗಳ ಚಲನೆ ; ಯಾರ ಮೇಲೆ ಹೇಗೆ ಬೀರಲಿದೆ ಪ್ರಭಾವ ?


ಸಿಂಹ ರಾಶಿ: ಈ ಮಂಗಳ ಸಂಕ್ರಮಣದ ವೇಳೆ ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ತೊಂದರೆ ಉಂಟಾಗುವುದು. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುವುದರಿಂದ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗುವುದು. ಉದ್ಯೋಗದಲ್ಲಿ ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ.


ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಂಗಳ ಸಂಚಾರವು(Mars Transit In Aquarius Effect) ಶುಭಕರವಾಗಿರುವುದಿಲ್ಲ. ಸಂಚಾರದ ಸಂಪೂರ್ಣ ಅವಧಿಯಲ್ಲಿ ಕೆಲವು ರೀತಿಯ ಮಾನಸಿಕ ತೊಂದರೆಯನ್ನು ಎದುರಿಸಬೇಕಾಗಬಹುದು. ಸಂಗಾತಿಯೊಂದಿಗೆ ದೂರವಾಗುವ ಪರಿಸ್ಥಿತಿ ಇರುತ್ತದೆ. ಆದಾಯದ ಮೂಲಗಳು ಕಡಿಮೆಯಾಗುತ್ತವೆ. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ನೀವು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.


ತುಲಾ ರಾಶಿ: ಮಂಗಳ ಸಂಚಾರದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ಪರಸ್ಪರ ಭಿನ್ನಾಭಿಪ್ರಾಯಗಳ ಸಾಧ್ಯತೆಯೂ ಉಂಟಾಗಬಹುದು. ಉದ್ಯೋಗದಲ್ಲಿ ನಷ್ಟ ಉಂಟಾಗಬಹುದು. ಸಂಚಾರದ ವೇಳೆ ನೀವು ವಿವಾದಗಳಿಂದ ದೂರವಿರಬೇಕು. ಅಲ್ಲದೆ ಅವಸರದಲ್ಲಿ ಕೆಲಸ ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.


ಇದನ್ನೂ ಓದಿ: Kannada Astrology : ಕನಸಿನಲ್ಲಿ 'ವಾರ್ಡ್ ರೋಬ್' ಕಂಡರೆ, ನಿಮ್ಮ ಜೀವನದಲ್ಲಿ ಈ 2 ಘಟನೆಗಳು ಸಂಭವಿಸುತ್ತದೆ!


ವೃಶ್ಚಿಕ ರಾಶಿ: ವೈವಾಹಿಕ ಜೀವನದಲ್ಲಿ ಹಲವು ಏರಿಳಿತಗಳಿರಬಹುದು. ಕೆಲಸದ ಸ್ಥಳದಲ್ಲಿ ಪಾಲುದಾರರೊಂದಿಗೆ ವಿವಾದದ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಕೌಟುಂಬಿಕ ಕಲಹಗಳಿಂದ ದೂರವಿರಿ. ಪಾಲುದಾರಿಕೆ ವ್ಯವಹಾರದಿಂದ ಆರ್ಥಿಕ ನಷ್ಟ ಉಂಟಾಗಲಿದೆ. 


ಮಕರ ರಾಶಿ: ಈ ಅವಧಿಯಲ್ಲಿ ನಿಮಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ವಿವಾದ ಉಂಟಾಗಬಹುದು. ಉದ್ಯೋಗಗಳನ್ನು ಬದಲಾಯಿಸುವುದು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಖರ್ಚು ಹೆಚ್ಚಾಗಲಿದ್ದು, ವ್ಯಾಪಾರದಲ್ಲಿ ಸ್ವಲ್ಪ ಆರ್ಥಿಕ ನಷ್ಟ ಉಂಟಾಗುವುದು. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.


ಮೀನ ರಾಶಿ: ಮಂಗಳ ಸಂಚಾರ(Mangal Gochar 2022)ದಿಂದ ಖರ್ಚು ಹೆಚ್ಚಾಗಲಿದೆ. ಅಲ್ಲದೆ ಉದ್ಯೋಗದಲ್ಲಿ ಬದಲಾವಣೆಯ ಅವಕಾಶವಿರುತ್ತದೆ. ತಂದೆಯೊಂದಿಗೆ ವಿವಾದ ಉಂಟಾಗಬಹುದು. ಕೌಟುಂಬಿಕ ಜೀವನದಲ್ಲಿ ಸಂಗಾತಿಯೊಂದಿಗೆ ಕಲಹ ಉಂಟಾಗಬಹುದು. ಸಂಚಾರದ ಅವಧಿಯುದ್ದಕ್ಕೂ ಕೋಪವನ್ನು ನಿಯಂತ್ರಿಸಬೇಕು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.