ಈ ರಾಶಿಯವರನ್ನು ಅತಿಯಾಗಿ ಕಾಡಲಿರುವ ರಾಹು ಕೇತು, ಐದು ರಾಶಿಯವರಿಗೆ ಕರುಣಿಸಲಿದ್ದಾರೆ ಅದೃಷ್ಟ

ಏಪ್ರಿಲ್ ನಲ್ಲಿ ರಾಹುವು ಮೇಷರಾಶಿಗೆ ಮತ್ತು ಕೇತು ತುಲಾರಾಶಿಯನ್ನು ಪ್ರವೇಶಿಸಲಿದ್ದಾರೆ. ಜ್ಯೋತಿಷಿಗಳ ಪ್ರಕಾರ, ಒಂದು ಗ್ರಹದ ರಾಶಿಚಕ್ರದ ಬದಲಾವಣೆಯು ವಿವಿಧ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. 

Written by - Ranjitha R K | Last Updated : Mar 30, 2022, 09:02 AM IST
  • 18 ತಿಂಗಳ ಬಳಿಕ ರಾಹು ಕೇತು ರಾಶಿ ಬದಲಾವಣೆ
  • ಐದು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು
  • ಈ ರಾಶಿಯವರ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ
ಈ ರಾಶಿಯವರನ್ನು ಅತಿಯಾಗಿ ಕಾಡಲಿರುವ ರಾಹು ಕೇತು, ಐದು ರಾಶಿಯವರಿಗೆ ಕರುಣಿಸಲಿದ್ದಾರೆ ಅದೃಷ್ಟ  title=
18 ತಿಂಗಳ ಬಳಿಕ ರಾಹು ಕೇತು ರಾಶಿ ಬದಲಾವಣೆ (file photo)

ಬೆಂಗಳೂರು : ರಾಹು ಮತ್ತು ಕೇತು ಈ ವರ್ಷ ಏಪ್ರಿಲ್‌ನಲ್ಲಿ ರಾಶಿಯನ್ನು ಬದಲಾಯಿಸಲಿದ್ದಾರೆ (Rahu-Ketu transit). ರಾಹು ಮತ್ತು ಕೇತುಗಳ ಈ ರಾಶಿ  ಪರಿವರ್ತನೆಯು ದೊಡ್ಡ ಬದಲಾವಣೆಯಾಗಿದೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ರಾಹು 23ನೇ ಸೆಪ್ಟೆಂಬರ್ 2020 ರಂದು ಬೆಳಿಗ್ಗೆ 5:28 ಕ್ಕೆ ಮಿಥುನ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸಿದ್ದ (Rahu in Vrushabha Rashi). 12 ಏಪ್ರಿಲ್ 2022 ರವರೆಗೆ  ರಾಹು  ವೃಷಭ ರಾಶಿಯಲ್ಲೇ ಇರಲಿದ್ದಾನೆ. ಮತ್ತೊಂದೆಡೆ, ಕೇತುವು 23 ಸೆಪ್ಟೆಂಬರ್ 2020 ರಂದು ಬೆಳಿಗ್ಗೆ 7:38 ಕ್ಕೆ ಧನು ರಾಶಿಯಿಂದ ವೃಶ್ಚಿಕ ರಾಶಿಗೆ ಪರಿವರ್ತನೆಯಾಗಿದ್ದ (Ketu in Vruschika Rashi).  ಏಪ್ರಿಲ್ 12, 2022 ಕೇತು ಕೂಡಾ ವೃಶ್ಚಿಕ ರಾಶಿಯಲ್ಲಿಯೇ ಇರಲಿದ್ದಾನೆ.  

ಏಪ್ರಿಲ್ ನಲ್ಲಿ ರಾಹುವು ಮೇಷರಾಶಿಗೆ ಮತ್ತು ಕೇತು ತುಲಾರಾಶಿಯನ್ನು ಪ್ರವೇಶಿಸಲಿದ್ದಾರೆ (Rahu Transit). ಜ್ಯೋತಿಷಿಗಳ ಪ್ರಕಾರ (Astrology), ಒಂದು ಗ್ರಹದ ರಾಶಿಚಕ್ರದ ಬದಲಾವಣೆಯು ವಿವಿಧ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. 

ಇದನ್ನೂ ಓದಿ : Shani: ಶನಿದೇವನನ್ನು ಮೆಚ್ಚಿಸಲು ಮುಂಜಾನೆ ಈ ಸಣ್ಣಪುಟ್ಟ ಕೆಲಸ ಮಾಡಿದರಷ್ಟೇ ಸಾಕು!

ರಾಹು-ಕೇತುಗಳ ಈ ರಾಶಿ ಬದಲಾವಣೆಯು ಕೆಲವು ರಾಶಿಚಕ್ರದ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ (Rahu Ketu Transit effects). ರಾಹು-ಕೇತುವಿನ ಈ ರಾಶಿ ಬದಲಾವಣೆಯು ಕೆಲವು ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಅದೃ ಷ್ಟವನ್ನು ತಂದು ಕೊಡಲಿದೆ. ರಾಹು ಮತ್ತು ಕೇತು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. 

ರಾಹು ಮತ್ತು ಕೇತುಗಳ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ,  ಮೇಷ, ವೃಷಭ, ಕರ್ಕಾಟಕ, ಕನ್ಯಾ, ಮಕರ ರಾಶಿಯವರಿಗೆ ಈ ಸಮಯ  ಕಷ್ಟವಾಗಿರಬಹುದು. ಈ ಜನರು ಸ್ವಲ್ಪ ಜಾಗರೂಕರಾಗಿರಬೇಕು (Rahu bad effects). ಈ ರಾಶಿಯವರು ಯಾವುದೇ ಕೆಲಸ ಮಾಡಲು ಹೋದರೂ ಹಿನ್ನೆಡೆ ಅನುಭವಿಸಬೇಕಾಗಬಹುದು. ಹಾಗಾಗಿ ಹೊಸ ಕೆಲಸ ಆರಂಭಿಸಬೇಕಾದರೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. 

ಇದನ್ನೂ ಓದಿ : Samudrik Shastra : ನಿಮ್ಮ ಕಣ್ಣುಗಳು ಜೀವನದ ರಹಸ್ಯಗಳನ್ನು ಹೇಳುತ್ತವೆ! ಹೇಗೆ ಇಲ್ಲಿದೆ ನೋಡಿ

ಇದಲ್ಲದೇ ಸಿಂಹ, ತುಲಾ, ವೃಶ್ಚಿಕ, ಧನು, ಕುಂಭ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದಾಗಿರಲಿದೆ (Rahu Ketu good effects). ಈ ಜನರು ಜೀವನದಲ್ಲಿ ಲಾಭ ಮತ್ತು ಮಂಗಳಕರ ಅವಕಾಶಗಳನ್ನು ಪಡೆಯುತ್ತಾರೆ. ಪ್ರತಿ ಕೆಲಸದಲ್ಲಿಯೂ ಇವರಿಗೆ ಯಶಸ್ಸು ಸಿಗಲಿದೆ. ಧನ ಲಾಭ, ಉಧ್ಯೋಗದಲ್ಲಿ ಉನ್ನತಿ ಇರಲಿದೆ.  

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News