Benefite of Oil Massage: ಮುಖ, ಕೂದಲು ಮತ್ತು ನಮ್ಮ ದೇಹದ ಇತರ ಭಾಗಗಳ ಬಗ್ಗೆ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳುವ ನಾವು, ನಮ್ಮ ಪಾದದ ಬಗ್ಗೆ ಆರೈಕೆಯನ್ನ ಮರೆತುಬಿಡುತ್ತೇವೆ. ನಮ್ಮ ದೇಹಕ್ಕಿಂತಲೂ ಹೆಚ್ಚು ದೂಳನ್ನ ನಮ್ಮ ಪಾದಗಳು ಮೆಟ್ಟುತ್ತವೆ. ದಿನವಿಡೀ ಧೂಳು ಮತ್ತು ಇತರ ವಿಷಗಳನ್ನು ಸಂಗ್ರಹಿಸುವ ನಮ್ಮ ಪಾದಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಕಡಿಮೆ.ಅದ್ದರಿಂದಲೇ ಪಾದಗಳ ಕಡೆಗೆ ನಾವು ವಿಶೇಷ ಗಮನ ನೀಡಬೇಕು. ಯಾವ ರೀತಿಯ ಕಾಳಜಿ ಸೂಕ್ತ ಎನ್ನುವುದನ್ನು ಇಲ್ಲಿ ಗಮನಿಸೋಣ..


COMMERCIAL BREAK
SCROLL TO CONTINUE READING

ನಮ್ಮ ದೇಹವನ್ನ ಆರೈಕೆ ಮಾಡೋದಕ್ಕೆ ನಮಗೆ ಸಮಯವಿಲ್ಲ ಇನ್ನು ಹೇಗಪ್ಪಾ ನಮ್ಮ ಪಾದಗಳನ್ನು ಆರೈಕೆ ಮಾಡುವುದು. ಅಯ್ಯೋ ಅದಕ್ಕೆ ಸಮಯನೇ ಇಲ್ಲ ಅಂತ ಅಂದುಕೊಂಡರೆ. ರಾತ್ರಿ ಮಲಗುವಾಗ 5 ನಿಮಿಷ ಸಾಕು ನಿಮ್ಮ ಪಾದಗಳನ್ನು ಆರೈಕೆ ಮಾಡೋಕೆ. ಮಲಗುವ ಮೊದಲು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡುವುದರಿಂದ ಹಾಗುವ ಪ್ರಯೋಜನಗಳು ಹಲವಾರು. ಮಲಗುವ ಮೊದಲು ತೆಂಗಿನಕಾಯಿ, ಎಳ್ಳು, ಲ್ಯಾವೆಂಡರ್ ಮತ್ತು ಬಾದಾಮಿ ಎಣ್ಣೆಯನ್ನು ಹಚ್ಚಿಕೊಂಡು ಮಲಗುವುದರಿಂದ ಇದು ರಾತ್ರಿಯಿಡೀ ಶಾಂತಿಯುತ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಧೂಮಪಾನ ಮಾಡುವ ಸ್ಥಳಗಳಲ್ಲಿ ನೀವು ನಿಲ್ಲುತ್ತೀರಾ..? ಹಾಗಾದರೆ ಈ ಸ್ಟೋರಿ ನೋಡಿ...


ಪಾದಗಳಿಗೆ ಎಣ್ಣೆ ಹಚ್ಚುವ ವಿಧಾನ


* ಎಣ್ಣೆ ಹಚ್ಚುವ ಮುನ್ನ ನಿಮ್ಮ ಪಾದಗಳನ್ನು ಸಾಬೂನಿನಿಂದ ಚೆನ್ನಾಗಿ ತೆಳೆಯಿರಿ.
* ಎಣ್ಣೆಯನ್ನು ಕೆಲ ಡಾಪ್ಸ್‌ ತೆಗೆದುಕೊಂಡು ಗಟ್ಟಿಯಾಗಿ ಒತ್ತಿ ಮಸಾಜ್‌ ಮಾಡಿ. 
* 5-10 ನಿಮಿಷಗಳ ಕಾಲ ಪಾದಗಳ ಸುತ್ತಲೂ ಮಸಾಜ್ ಮಾಡಿ.
* ಎಣ್ಣೆಯನ್ನು ಬಿಸಿ ಮಾಡಿ ಉಪಯೋಗಿಸುವುದರಿಂದ ಹೆಚ್ಚು ಪರಿಣಾಮಕಾರಿ.


ಪಿ ಎಂ ಎಸ್‌ (PMS) ಲಕ್ಷಣ


ಪಿ ಎಂ ಎಸ್‌  (PMS) ನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಈ ಲಕ್ಷಣಗಳಲ್ಲಿ ನಿದ್ರಾಹೀನತೆ ಮತ್ತು ಸೆಳೆತ ಸೇರಿವೆ. ಅಲ್ಲದೇ ರೋಗಲಕ್ಷಣಗಳನ್ನು ನಿಯಂತ್ರಿಸಲು ಕಾಲು ಮಸಾಜ್ ಬಹಳ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: ಎಣ್ಣೆಯಲ್ಲಿ ಕರಿದ ತಿಂಡಿಯನ್ನು ತಪ್ಪಿಸಲು ಏರ್‌ ಫ್ರೈಯರ್‌ ಬಳಸುತ್ತೀರಾ? ಹಾಗಾದರೆ ಈ ಸ್ಟೋರಿ ನಿಮಗೆ...


ತೈಲ ಮಸಾಜ್‌ನ ಪ್ರಯೋಜನಗಳು


ನಿದ್ರೆಯನ್ನು ಸುಧಾರಿಸುತ್ತದೆ : ಪಾದಗಳಲ್ಲಿ ನಿದ್ರೆಯ ಮೇಲೆ ಪರಿಣಾಮ ಬೀರುವ ಅನೇಕ ಅಕ್ಯುಪಂಕ್ಚರ್ ಪಾಯಿಂಟ್‌ಗಳಿವೆ. ಮಲಗುವ ಮುನ್ನ ಎಣ್ಣೆ ಹಾಕಿ ಮಸಾಜ್ ಮಾಡುವುದರಿಂದ, ಒತ್ತಡವನ್ನು ನಿವಾರಿಸುತ್ತದೆ ಮತ್ತು ನರಗಳನ್ನು ಕೂಲ್ ಮಾಡಲು‌ ಇದು ಪ್ರಯೋಜನಕಾರಿ.


ರಕ್ತ ಪರಿಚಲನೆ ಸುಧಾರಿಸುತ್ತದೆ: ನಾವು ದಿನದಲ್ಲಿ ಹೆಚ್ಚು ಸಮಯ ಕೂರುವಲ್ಲಿ ಕಳೆಯುತ್ತೇವೆ. ಇದರಿಂದ ನಮ್ಮ ಕಾಲುಗಳಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಮಲಗುವ ಮುನ್ನ ಪಾದಗಳನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪಾದಗಳಲ್ಲಿ ರಕ್ತ ಸಂಚಾರಕ್ಕೆ ಪುಷ್ಟಿ ನೀಡಿದಂತಾಗುತ್ತದೆ. 


ಇದನ್ನೂ ಓದಿ:Weight Loss Tips: ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ಒಂದು ಅತ್ಯುತ್ತಮ ಡಯಟ್ ಪ್ಲಾನ್!


ನೋವನ್ನು ಕಡಿಮೆ ಮಾಡುತ್ತದೆ: ಎಣ್ಣೆ ಮಸಾಜ್ ಉರಿಯೂತವನ್ನು ಶಮನಗೊಳಿಸುತ್ತದೆ ಮತ್ತು ಕಾಲುಗಳಲ್ಲಿನ ಯಾವುದೇ ರೀತಿಯ ಒತ್ತಡ ಅಥವಾ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದು ಬಿಗಿಯಾದ ಕಾಲಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.