ನವದೆಹಲಿ: ನಿಮ್ಮ ದೇಹವು ಹೇಗೆ ದಣಿಯುತ್ತದೋ ಅದೇ ರೀತಿ ನಿಮ್ಮ ಮೆದುಳು ಕೂಡ ದಣಿದಿರುತ್ತದೆ. ಈ ಆಯಾಸದಿಂದ ಕೆಲವೊಮ್ಮೆ ಮೆದುಳಿನಲ್ಲಿ ಭಾರವೂ ಶುರುವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ನಿಮಗೆ ಆಯಾಸವಾದಾಗ ತಲೆಯಲ್ಲಿ ಭಾರ, ಮಾನಸಿಕ ಆಯಾಸ, ಸಿಡುಕು, ಸಿಟ್ಟು, ಉದ್ವೇಗ, ಯಾರೊಂದಿಗೂ ಮಾತನಾಡುವ ಆಸೆ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳು ನಿಮ್ಮ ಮೆದುಳಿನ ಆರೋಗ್ಯಕ್ಕೆ ಗಮನ ಕೊಡಬೇಕೆಂದು ಸೂಚಿಸುತ್ತವೆ. ಇದಲ್ಲದೆ ಭಾವನಾತ್ಮಕ ಆರೋಗ್ಯದ ಬಗ್ಗೆ ಗಮನಹರಿಸುವ ಅವಶ್ಯಕತೆಯಿದೆ. ಮೆದುಳಿನ ಭಾರಕ್ಕೆ ಇತರ ಕಾರಣಗಳು ಯಾವುವು ಮತ್ತು ಅದನ್ನು ಹೇಗೆ ನಿವಾರಿಸಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಈ ಕಾರಣಕ್ಕೆ ಮಾನಸಿಕ ಆಯಾಸ ಉಂಟಾಗುತ್ತದೆ


ಮಾನಸಿಕ ಆಯಾಸವು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಆಯಾಸದ ಕಾರಣಗಳು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿರಬಹುದು. ಉದಾಹರಣೆಗೆ ದೀರ್ಘಕಾಲದ ಅನಾರೋಗ್ಯ, ಔಷಧಿಗಳ ದೀರ್ಘಕಾಲದ ಬಳಕೆ, ಹೆಚ್ಚು ಒತ್ತಡ ತೆಗೆದುಕೊಳ್ಳುವುದು. ಈ ಎಲ್ಲಾ ಕಾರಣಗಳು ಮಾನಸಿಕ ಆಯಾಸದಿಂದ ಉಂಟಾಗಬಹುದು.


ಇದನ್ನೂ ಓದಿ: Curd Benefits : ಮೊಸರಿನ ಜೊತೆ ಸೇವಿಸಿ ಈ ಆಹಾರ ಪದಾರ್ಥಗಳನ್ನು, ರೋಗಗಳಿಂದ ದೂರವಿರಿ


ಈ ಆಯುರ್ವೇದ ಔಷಧಗಳಿಂದ ಮಾನಸಿಕ ಆಯಾಸಕ್ಕೆ ಪರಿಹಾರ


  • ಮಾನಸಿಕ ಆಯಾಸವನ್ನು ತಪ್ಪಿಸಲು ನೀವು 3 ಆಯುರ್ವೇದ ಔಷಧಿಗಳನ್ನು ಸಹ ಬಳಸಬಹುದು. ಇದು ಖಂಡಿತವಾಗಿಯೂ ನಿಮಗೆ ಪರಿಹಾರವನ್ನು ನೀಡುತ್ತದೆ. ಇದು ಅಶ್ವಗಂಧ, ಶಂಖಪುಷ್ಪಿ ಮತ್ತು ಬ್ರಾಹ್ಮಿಗಳನ್ನು ಒಳಗೊಂಡಿದೆ.

  • ಅಶ್ವಗಂಧವು ದೈವಿಕ ಔಷಧವಾಗಿದೆ, ಇದು ನಿಮ್ಮನ್ನು ಮಾನಸಿಕ ಒತ್ತಡದಿಂದ ರಕ್ಷಿಸುತ್ತದೆ. ಈ ಔಷಧಿಯನ್ನು ಅನಾರೋಗ್ಯದ ಸಮಯದಲ್ಲಿ ಮಾತ್ರ ಸೇವಿಸಬೇಕೆಂದೆನಿಲ್ಲ, ಸಕ್ರಿಯವಾಗಿರಲು ನೀವು ಇದನ್ನು ಬಳಸಬಹುದು.

  • ಬ್ರಾಹ್ಮಿ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಲ್ಲದು. ಇದರೊಂದಿಗೆ ಇದು ಮಾನಸಿಕ ಆಯಾಸವನ್ನು ನಿವಾರಿಸಲು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಸಮಸ್ಯೆ ಇದ್ದರೆ ನೀವು ಬ್ರಾಹ್ಮಿಯನ್ನು ಸೇವಿಸಬೇಕು.

  • ಅದೇ ರೀತಿ ಮೂರನೇ ಔಷಧವು ಮನಸ್ಸನ್ನು ಚುರುಕುಗೊಳಿಸಲಿದೆ. ಇದನ್ನು ಶಂಖಪುಷ್ಪಿ ಎಂದು ಕರೆಯಲಾಗುತ್ತದೆ. ಇದನ್ನು ಸೇವಿಸುವುದರಿಂದ ದೇಹ ಮತ್ತು ಮನಸ್ಸು ಎರಡೂ ತಾಜಾತನವನ್ನು ಪಡೆಯುತ್ತದೆ.


ಇದನ್ನೂ ಓದಿ: ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಹಣ್ಣನ್ನು ಈ ರೀತಿ ಬಳಸಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.