Mercury Direct In: ವೃಷಭ ರಾಶಿಯಲ್ಲಿ ಶೀಘ್ರದಲ್ಲಿಯೇ ಬುಧನ ನೇರ ನಡೆ ಆರಂಭ, ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ
Mercury Transit 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದೆ. ಬುಧಗ್ರಹದ ರಾಶಿ ಪರಿವರ್ತನೆ, ಉದಯ, ವಕ್ರ ನಡೆ, ನೇರ ನಡೆಯ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಬೀಳುತ್ತದೆ.
Mercury Direct in Taurus 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಹೇಳಲಾಗಿದೆ. ಬುಧ ಪ್ರಸ್ತುತ ವೃಷಭ ರಾಶಿಯಲ್ಲಿ ಗೋಚರಿಸುತ್ತಿದ್ದಾನೆ. ಮೇ 10 ರಂದು ಈ ರಾಶಿಯಲ್ಲಿ ಬುಧ ವಕ್ರ ನಡೆಯನ್ನು ಅನುಸರಿಸಿದ್ದ. ಇದೀಗ ಜೂನ್ 3, 2022 ರಂದು ಮತ್ತೆ ಬುಧ ವೃಷಭ ರಾಶಿಯಲ್ಲಿ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ವಾಣಿ, ವ್ಯಾಪಾರ ಹಾಗೂ ಬುದ್ಧಿಯ ಜೊತೆಗೆ ಬುಧ ನೇರ ಸಂಬಂಧವನ್ನು ಹೊಂದಿದ್ದಾನೆ. ಹೀಗಾಗಿ ಬುಧನ ಈ ನೇರ ನಡೆ ಕೆಲ ರಾಶಿಗಳ ಪಾಲಿಗೆ ಅಡೆತಡೆಗಳನ್ನು ತರಲಿದೆ. ಯಾವ ರಾಶಿಗಳಿಗೆ ಈ ಅಡೆತಡೆ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ
ಮೇಷ ರಾಶಿ - ಮೇಷ ರಾಶಿಯ ಜನರಿಗೆ ವೃಷಭ ರಾಶಿಯಲ್ಲಿನ ನೇರ ನಡೆಯಲ್ಲಿರುವ ಬುಧ ಕಾರ್ಯಕ್ಷೇತ್ರದಲ್ಲಿ ಸವಾಲುಗಳನ್ನು ತರಲಿದೆ. ಈ ಅವಧಿಯಲ್ಲಿ ಧನ ಹಾನಿಯ ಸಾಧ್ಯತೆ ಇದೆ. ಸಾಲ ನೀಡುವುದರಿಂದ ಪಾರಾಗಿ. ಸುಳ್ಳು ಹೇಳುವುದು ಕೂಡ ನಿಮಗೆ ನಷ್ಟದಾಯಕ ಸಾಬೀತಾಗಲಿದೆ. ಪ್ರಸ್ತುತ ರಾಹು-ಶುಕ್ರರ ಸಂಯೋಗ ಕೂಡ ನಿಮ್ಮ ರಾಶಿಯಲ್ಲಿಯೇ ಏರ್ಪಟ್ಟಿದೆ. ಹೀಗಾಗಿ ಈ ಅವಧಿಯಲ್ಲಿ ಸಂಯಮದಿಂದ ಇರುವುದು ಉತ್ತಮ.
ವೃಷಭ ರಾಶಿ - ವೃಷಭ ರಾಶಿಯ ರಾಷ್ಯಾಧಿಪ ಶುಕ್ರ ಗ್ರಹ. ಬುಧ ವೃಷಭ ರಾಶಿಯಲ್ಲಿಯೇ ತನ್ನ ನೇರ ನಡೆಯನ್ನು ಅನುಸರಿಸಲಿದೆ. ಹಾಗೆ ನೋಡಿದರೆ ಬುಧ ಹಾಗೂ ಶುಕ್ರರ ನಡುವೆ ಸ್ನೇಹ ಸಂಬಂಧ ಇದೆ. ಆದರೂ ಕೂಡ ಬುಧನ ನೇರ ನಡೆ ನಿಮಗೆ ಕೆಲ ಸಂಕಷ್ಟಗಳನ್ನು ತರಲಿದೆ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಸುಖ-ಸೌಕರ್ಯಗಳಿಂದ ಜೀವನ ಕಳೆಯುವಿರಿ. ದೊಡ್ಡ ಪ್ರಮಾಣದ ಹೂಡಿಕೆಯಿಂದ ಅಂತರ ಕಾಯ್ದುಕೊಳ್ಳಿ. ತಪ್ಪು ಜನರ ಸಹವಾಸದಿಂದ ಕೂಡ ದೂರ ಉಳಿಯಿರಿ. ಕಛೇರಿಯಲ್ಲಿ ಮೇಲಾಧಿಕಾರಿಯ ಬೆಂಬಲ ಸಿಗಲಿದೆ. ಜನರು ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ.
ಇದನ್ನೂ ಓದಿ-Shani Dosh Indications: ನಿಮ್ಮ ಮೇಲೆ ಶನಿಯ ಭಾರಿ ದೆಸೆ ನಡೆಯುತ್ತಿದೆ ಎನ್ನುತ್ತವೆ ಈ ಸಂಕೇತಗಳು
ವೃಶ್ಚಿಕ ರಾಶಿ - ವೃಶ್ಚಿಕ ಜಾತಕದವರ ಪಾಲಿಗೆ ಬುಧ ಹೊಸ ಸವಾಲುಗಳನ್ನೇ ತಂದೊಡ್ಡಲಿದ್ದಾನೆ. ವೃಶ್ಚಿಕ ರಾಶಿಗೆ ಮಂಗಳ ರಾಶಿಯ ಅಧಿಪತಿ. ಮಂಗಳ ಹಾಗೂ ಬುಧನ ನಡುವೆ ಶತ್ರು ಸಂಬಂಧವಿದೆ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಂಜಾಗ್ರತೆವಹಿಸಿ. ವೈವಾಹಿಕ ಜೀವನದಲ್ಲಿ ಅಡಚಣೆಗಳು ಎದುರಾಗಬಹುದು. ಸಂತಾನದ ವಿಷಯದಲ್ಲಿ ಚಿಂತೆ ಕಾಡಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆವಹಿಸಿ.
ಇದನ್ನೂ ಓದಿ-Weekly Numerology Horoscope : ಮುಂದಿನ ವಾರ ಸಂಖ್ಯಾ ಶಾಸ್ತ್ರದ ಪ್ರಕಾರ ಇವರಿಗೆ ಆರ್ಥಿಕ ಲಾಭ!
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.