Shani Dosh Indications: ನಿಮ್ಮ ಮೇಲೆ ಶನಿಯ ಭಾರಿ ದೆಸೆ ನಡೆಯುತ್ತಿದೆ ಎನ್ನುತ್ತವೆ ಈ ಸಂಕೇತಗಳು

Shani Dosh Remedies - ಜಾತಕದಲ್ಲಿ ಒಂದು ವೇಳೆ ಶನಿ ಅಶುಭನಾಗಿದ್ದರೆ, ಶನಿ ಶಾಂತಿಗೆ ಉಪಾಯಗಳನ್ನು ಅನುಸರಿಸಬೇಕು. ಇಲ್ಲದೆ ಹೋದರೆ ಶನಿ ಭಾರಿ ನಷ್ಟವನ್ನುಂಟು ಮಾಡಬಹುದು. ನಿಮ್ಮ ಮೇಲೆ ಶನಿಯ ಪ್ರಕೋಪ ನಡೆಯುತ್ತಿದೆ ಎಂಬುದನ್ನು ನೀವು ಕೆಲ ಸಂಕೇತಗಳ ಮೂಲಕ ತಿಳಿದುಕೊಳ್ಳಬಹುದು.   

Written by - Nitin Tabib | Last Updated : May 28, 2022, 01:08 PM IST
  • ಜಾತಕದಲ್ಲಿ ಒಂದು ವೇಳೆ ಶನಿ ಅಶುಭನಾಗಿದ್ದರೆ, ಶನಿ ಶಾಂತಿಗೆ ಉಪಾಯಗಳನ್ನು ಅನುಸರಿಸಬೇಕು.
  • ಇಲ್ಲದೆ ಹೋದರೆ ಶನಿ ಭಾರಿ ನಷ್ಟವನ್ನುಂಟು ಮಾಡಬಹುದು.
  • ನಿಮ್ಮ ಮೇಲೆ ಶನಿಯ ಪ್ರಕೋಪ ನಡೆಯುತ್ತಿದೆ ಎಂಬುದನ್ನು ನೀವು ಕೆಲ ಸಂಕೇತಗಳ ಮೂಲಕ ತಿಳಿದುಕೊಳ್ಳಬಹುದು.
Shani Dosh Indications: ನಿಮ್ಮ ಮೇಲೆ ಶನಿಯ ಭಾರಿ ದೆಸೆ ನಡೆಯುತ್ತಿದೆ ಎನ್ನುತ್ತವೆ ಈ ಸಂಕೇತಗಳು title=
Shani Jayanti Remedies

Shani Dosh Indications: ಶನಿಯ ಕೆಟ್ಟ ದೃಷ್ಟಿ ಅತ್ಯಲ್ಪ ಸಮಯದಲ್ಲಿ ರಾಜನನ್ನೂ ಕೂಡ ಭಿಕ್ಷುಕನನ್ನಾಗಿಸುತ್ತದೆ ಎನ್ನಲಾಗುತ್ತದೆ. ಹೀಗಾಗಿ ಎಲ್ಲರು ಶನಿದೇವನಿಗೆ ತುಂಬಾ ಹೆದರುತ್ತಾರೆ. ಹಾಗೆ ನೋಡಿದ್ರೆ ಶನಿಯನ್ನು ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ವ್ಯಕ್ತಿಗಳಿಗೆ ಅವರವರ ಕರ್ಮಗಳ ಆಧಾರದ ಮೇಲೆ ಶನಿ ಫಲ ನೀಡುತ್ತಾನೆ ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೆಟ್ಟ ಕೆಲಸಗಳಲ್ಲಿ ನಿರತರಾಗಿರುವವರು, ದೀನ-ದಲಿತರ ಮೇಲೆ ಅತ್ಯಾಚಾರ ಎಸಗುವವರರನ್ನು ಶನಿ ದಂಡಿಸುತ್ತಾನೆ. ಮೇ 30 ರಂದು ಶನಿ ಜಯಂತಿ ಆಚರಿಸಲಾಗುತ್ತಿದೆ. ಶನಿಯ ಪ್ರಕೊಪದಿಂದ ಪಾರಾಗಲು ಉಪಾಯಗಳನ್ನು ಅನುಸರಿಸಲು ಇದು ಉತ್ತಮ ದಿನವಾಗಿದೆ. ಈ ದಿನ ಮಾಡಲಾಗುವ ಉಪಾಯಗಳು ಬೇಗನೆ ಫಲ ನೀಡುತ್ತವೆ ಎನ್ನಲಾಗುತ್ತದೆ. ನಮ್ಮ ಮೇಲೂ ಕೂಡ ಒಂದು ವೇಳೆ ಶನಿ ದೆಸೆ ನಡೆಯುತ್ತಿದೆ ಎಂದರೆ ಈ ಕೆಳಗೆ ಸೂಚಿಸಲಾಗಿರುವ ಉಪಾಯಗಳನ್ನು ಒಮ್ಮೆ ಅನುಸರಿಸಿ ನೋಡಿ.

ಶನಿ ಪ್ರಕೋಪದ ಲಕ್ಷಣಗಳಿವು
ಶನಿ ಯಾರೊಬ್ಬರ ಮೇಲೆ ಒಮ್ಮೆ ಕೆಟ್ಟ ದೃಷ್ಟಿಯನ್ನು ಬೀರಿದರೆ ಅಥವಾ ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ಆತನ ಜೀವನದಲ್ಲಿ ಕೆಲ ಸಂಕೇತಗಳು ಸಿಗುತ್ತವೆ.ಈ ಸಂಕೇತಗಳು ಒಂದೊಮ್ಮೆ ಪ್ರಾಪ್ತಿಯಾದರೆ, ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು ಶನಿ ಸ್ಥಾನವನ್ನು ಭದ್ರಪಡಿಸಲು ಉಪಾಯಗಳನ್ನು ಅನುಸರಿಸಿ.

>> ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದರೆ, ವ್ಯಕ್ತಿಯ ಕೂದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ. ಇದರ ಹಿಂದೆ ಯಾವುದೇ ರೋಗವೂ ಕಾರಣವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರನ್ನು ಸಂಪರ್ಕಿಸಿ ಮತ್ತು ಶನಿಯನ್ನು ಮೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಿ.

>> ಶನಿಯ ಅಶುಭ ಪರಿಣಾಮ ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನ ಮತ್ತು ಕೆಲಸ ಎರಡಕ್ಕೂ ಹಾನಿ ತಲ್ಳುಪಿಸುತ್ತದೆ. ಶನಿಯು ಅಶುಭವಾಗಿದ್ದರೆ ವ್ಯಾಪಾರದಲ್ಲಿ ನಷ್ಟ, ಧನಹಾನಿ ಸಂಭವಿಸಬಹುದು. ವೈಯಕ್ತಿಕ ಜೀವನದಲ್ಲಿ ಜಗಳಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಅಶಾಂತಿ ನೆಲೆಸುತ್ತದೆ.

>> ಶನಿಯು ಮುನಿಸಿಕೊಂಡಿದ್ದರೆ, ಹಣೆಯ ಮೇಲೆ ಕಪ್ಪು ಬಣ್ಣ ಬರುತ್ತದೆ ಅಥವಾ ಹಣೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಈ ರೀತಿಯಾದರೆ ಜೀವನದಲ್ಲಿ ಘನತೆ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಲಿದೆ.

>> ನಿಯ ಪ್ರಕೊಪದಿಂದ, ವ್ಯಕ್ತಿಯು ಹೆಚ್ಚು ಮಾಂಸಾಹಾರ ಮತ್ತು ಪ್ರತೀಕಾರದ ಆಹಾರವನ್ನು ತಿನ್ನಲು ಪ್ರಾರಂಭಿಸುತ್ತಾನೆ. ಡ್ರಗ್ಸ್, ಜೂಜು, ಬೆಟ್ಟಿಂಗ್ ನಂತಹ ದಂಧೆಗೆ ಇಳಿಯುತ್ತಾನೆ ಮತ್ತು ಅನೈತಿಕ ಕೃತ್ಯಗಳನ್ನು ಮಾಡುತ್ತಾರೆ.

>> ಶನಿಯ ಅಶುಭ ಪರಿಣಾಮವು ವ್ಯಕ್ತಿಯ ಸ್ವಭಾವದಲ್ಲಿ ಕಿರಿಕಿರಿ ಮತ್ತು ಕೋಪವನ್ನು ತರುತ್ತದೆ. ಇದೇ ವೇಳೆ ವ್ಯಕ್ತಿಯು ಪ್ರತಿಯೊಂದು ವಿಷಯದಲ್ಲಿ ಸುಳ್ಳು ಹೇಳಲು ಪ್ರಾರಂಭಿಸುತ್ತಾನೆ.

ಇದನ್ನೂ ಓದಿ-Today Horoscope : ಇಂದಿನ ರಾಶಿ ಭವಿಷ್ಯ : ಇಂದು, ಶನಿದೇವ ಈ 5 ರಾಶಿಯವರಿಗೆ ವಿಶೇಷ ಅನುಗ್ರಹ ಇದೆ!

ಶನಿ ಜಯಂತಿಯ ದಿನ ಪರಿಹಾರ
ಮೇ 30 ರಂದು, ಶನಿ ಜಯಂತಿಯಂದು ಶನಿ ದೇವಸ್ಥಾನಕ್ಕೆ ಹೋಗಿ ಶನಿ ದೇವರನ್ನು ಪೂಜಿಸಿ. ಎಣ್ಣೆ, ಕಪ್ಪು ಎಳ್ಳು, ಉದ್ದಿನಬೇಳೆಯನ್ನು ಅರ್ಪಿಸಿ. ಎಣ್ಣೆಯ ದೀಪವನ್ನು ಬೆಳಗಿಸಿ. ಬಡ ನಿರ್ಗತಿಕರಿಗೆ ಎಣ್ಣೆ, ಕಪ್ಪು ಎಳ್ಳು, ಉದ್ದಿನಬೇಳೆ, ಕಪ್ಪು ಬಟ್ಟೆ, ಕಪ್ಪು ಛತ್ರಿ ಅಥವಾ ಪಾದರಕ್ಷೆಗಳನ್ನು ದಾನ ಮಾಡಿ. ಆದಷ್ಟು ಜನರಿಗೆ ಸಹಾಯ ಮಾಡಿ ನಿತ್ಯ ಶನಿ ಚಾಲಿಸಾ ಪಠಿಸಿ. 

ಇದನ್ನೂ ಓದಿ-May 28 ಈ ಮೂರು ರಾಶಿಗಳ ಜನರ ಪಾಲಿಗೆ ವರದಾನ ಸಾಬೀತಾಗಲಿದೆ, ದೇವಿ ಲಕ್ಷ್ಮಿಯ ಕೃಪಾವೃಷ್ಟಿಯಾಗಲಿದೆ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿನನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News