Mercury Planet And Skin Problems: ಬುಧ ಅಶುಭನಾದರೆ ತ್ವಚೆಗೆ ಸಂಬಂಧಿಸಿದ ವ್ಯಾಧಿಗಳು ಬರುತ್ತವೆ
Skin Problem - ನಮ್ಮ ತ್ವಚೆಯ ಜೊತೆಗೆ ಬುಧಗ್ರಹದ ನೇರ ಸಂಬಂಧವಿದೆ. ಬುಧ ಅಶುಭನಾದರೆ, ತ್ವಚೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ
ನವದೆಹಲಿ: Mercury Planet And Skin Problems - ಬುಧ ಗ್ರಹ ನಮ್ಮ ಬುದ್ಧಿಶಕ್ತಿ ಮತ್ತು ತ್ವಚೆಯ ಜೊತೆಗೆ ನೇರ ಸಂಬಂಧ ಹೊಂದಿದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾದಾಗ, ಎಲ್ಲೋ ಬುಧ ಗ್ರಹಗಳು ಅಶುಭ ಫಲಿತಾಂಶಗಳನ್ನು ನೀಡುತ್ತಿವೆ ಎಂದು ತಿಳಿಯಬೇಕು. ಇದರೊಂದಿಗೆ, ಜನ್ಮ ಜಾತಕದಲ್ಲಿ ಬುಧ ದುರ್ಬಲವಾಗಿದ್ದಾಗ ಮತ್ತು ಬುಧ ಗ್ರಹದ ಮೇಲೆ ಯಾವುದೇ ಅಶುಭ ಗ್ರಹದ ದೃಷ್ಟಿ ಬಿದ್ದರೆ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಾಗುವ ಸಾಧ್ಯತೆ ಇರುತ್ತದೆ. ಬುಧ ದುರ್ಬಲವಾದಾಗ, ವಯಸ್ಸು ಕಡಿಮೆಯಾಗಲು ಆರಂಭಿಸುತ್ತವೆ. ಅಷ್ಟೇ ಅಲ್ಲ, ವ್ಯಕ್ತಿಯ ಸೌಂದರ್ಯ ಮತ್ತು ಪ್ರತಿಷ್ಠೆಯಲ್ಲಿಯೂ ಕೂಡ ಇಳಿಕೆ ಕಂಡುಬರುತ್ತದೆ.
ಬುಧ ಗ್ರಹ ಅಲರ್ಜಿ ಸಮಸ್ಯೆಗೆ ಕಾರಣ
ಬುಧಗ್ರಹದ ಸ್ಥಿತಿ ಒಂದು ವೇಳೆ ಹಾಳಾಗಿದ್ದರೆ ಅಲರ್ಜಿ(Skin Problems) ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಮೂಗು ಹಾಗೂ ಗಂಟಲು ಸಮಸ್ಯೆ ಕೂಡ ಎದುರಾಗುತ್ತದೆ. ಸ್ಮರಣ ಶಕ್ತಿಯ ಜೊತೆಗೂ ಕೂಡ ಬುಧಗ್ರಹ ನೇರ ಸಂಬಂಧ ಹೊಂದಿದೆ. ಜಾತಕದಲ್ಲಿ ಬುಧ ಗ್ರಹ( Budh Grah) ಶಕ್ತಿಹೀನವಾಗಿದ್ದರೆ, ಮನುಷ್ಯನಿಗೆ ಮರುಗುಳಿಕೆ ಜಾಸ್ತಿಯಾಗುತ್ತದೆ. ಬುಧಗ್ರಹದ ಮೇಲೆ ಪಾಪ ಗ್ರಹದ ದೃಷ್ಟಿ ಬಿದ್ದರೆ ವ್ಯಕ್ತಿಗಳಿಗೆ ಮಾತನಾಡಲು ಕಷ್ಟವಾಗುತ್ತದೆ. ಇಂತಹ ಜನರ ಮಾತು ಎದುರಿನ ವ್ಯಕ್ತಿಗಳಿಗೆ ತಿಳಿಯಲು ಕಷ್ಟವಾಗುತ್ತದೆ.
ಇದನ್ನೂ ಓದಿ- Surya Rashi Parivartan 2021 : ನಾಳೆ ಕುಂಭ ರಾಶಿಗೆ ಸೂರ್ಯನ ಪ್ರವೇಶ, ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ
ಬುಧ ಗ್ರಹ ಶುಭನಾದರೆ ಅದರ ಲಕ್ಷಣಗಳು ಕಾಣಿಸುತ್ತವೆ
ಬುಧ ಶುಭನಾಡಾಗ ವ್ಯಕ್ತಿ ಲೆಕ್ಕಾಚಾರದಲ್ಲಿ ನಿಪುಣನಾಗುತ್ತಾನೆ. ಇಂತಹ ಜನರು ದೊಡ್ಡ ತಾರ್ಕಿಕರಾಗಿರುತ್ತಾರೆ. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳು ಸುಲಭವಾಗಿ ನೆನಪಿನಲ್ಲಿಡಬಹುದು. ಬುಧನ ಪ್ರಭಾವಕ್ಕೆ ಒಳಗಾದ ವ್ಯಕ್ತಿಯು ಊರ್ಜೆಯಿಂದ ತುಂಬಿರುತ್ತಾನೆ. ವ್ಯಕ್ತಿ ತನ್ನ ಭಾಷೆ ಹಾಗೂ ಸುಂದರತೆಯ ಬಗ್ಗೆ ಜಾಗರೂಕರಾಗಿರುತ್ತಾನೆ. ಇವರು ಸಿದ್ಧ ಉತ್ತರಿಗಳಾಗಿರುತ್ತಾರೆ. ತಮ್ಮ ವಾಣಿಯಿಂದ ಇತರರನ್ನು ಇವರು ಪ್ರಭಾವಿತಗೊಳಿಸುತ್ತಾರೆ.
ಇದನ್ನೂ ಓದಿ- Shani Vakri 2021: ಶನಿಯ ವಕ್ರ ನಡೆ, ಯಾವ ರಾಶಿಯ ಜನರ ಮೇಲೆ ಏನು ಪ್ರಭಾವ? ನಿಮ್ಮ ರಾಶಿ ಯಾವುದು?
ಬುಧ ಗ್ರಹವನ್ನು ಈ ರೀತಿ ಬಲಪಡಿಸಿ (Budh Grah Upay)
ಬುಧನನ್ನು ಶುಭ ಹಾಗೂ ಬಲಶಾಲಿಯಾಗಿಸಲು ಶ್ರೀ ಕೃಷ್ಣ ಹಾಗೂ ಶ್ರೀ ರಾಮನಿಗೆ ಪೂಜೆ ಸಲ್ಲಿಸಬೇಕು. ಇದಲ್ಲದೆ ಪ್ರತಿ ಬುಧವಾರ ಶ್ರೀ ಗಣೇಶನಿಗೆ ಕರಿಕೆ ಅರ್ಪಿಸುವುದರಿಂದ ಲಾಭವಾಗುತ್ತದೆ. ಪ್ರತಿ ಬುಧವಾರ ಹಸುವಿಗೆ ಹಸಿರು ಮೇವು ತಿನ್ನಿಸುವುದರಿಂದ ಕೂಡ ಬುಧನ (Skin Problem Remedies) ಅಶುಭತೆ ಕಮ್ಮಿಯಾಗುತ್ತದೆ. ಬುಧನನ್ನು ಸಂತೋಷಪಡಿಸಲು 'ಓಂ ಬ್ರಾಂ ಬ್ರಿಂ ಬ್ರೌಂ ಸಃ ಬುಧಾಯನಮಃ' ಮಂತ್ರವನ್ನು (Budh Grah Mantra) ಪಠಿಸಿ.
ಇದನ್ನೂ ಓದಿ- Dearness Allowance Hike: ಶೇ.13ರಷ್ಟು ಹೆಚ್ಚಳದ ಜೊತೆಗೆ 5 ವರ್ಷದ ಅರಿಯರ್ ಸಿಗುವ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.