ನವದೆಹಲಿ: ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಗಳ ಜೀವನದ ಮೇಲೆ ಪ್ರತಿ ಗ್ರಹದ ಸಂಚಾರದ ಪರಿಣಾಮವು ಶುಭ ಮತ್ತು ಅಶುಭ ರೂಪದಲ್ಲಿರುತ್ತದೆ. ಕೊನೆಯ ದಿನವಾದ ಮಾರ್ಚ್ 31ರಂದು ಬುಧನು ಮೀನ ರಾಶಿಯನ್ನು ತೊರೆದು ಮೇಷ ರಾಶಿ ಪ್ರವೇಶಿಸಿದ್ದಾನೆ. ಈ ಬುಧ ಸಂಕ್ರಮಣದಿಂದ ಹಲವು ರಾಶಿಗಳ ದುಃಖದ ಸಮಯ ಕೊನೆಯಾಗಿದೆ. ಈ ಸಂಚಾರವು ಕೆಲವರ ಜೀವನದಲ್ಲಿ ಭೂಕಂಪವನ್ನೇ ಸೃಷ್ಟಿಸಲಿದೆ. ಮತ್ತೆ ಕೆಲವರಿಗೆ ಇದು ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಈ ಸಮಯದಲ್ಲಿ ಅವರು ಹಣ, ಬುದ್ಧಿವಂತಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭ ಪಡೆಯುತ್ತಾರೆ. ಈ ಅವಧಿಯಲ್ಲಿ ಈ ಜನರ ಅದೃಷ್ಟದ ಬಾಗಿಲು ತೆರೆಯಲಿವೆ.


COMMERCIAL BREAK
SCROLL TO CONTINUE READING

ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ಒಳ್ಳೆಯ ದಿನಗಳ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಯು ಸಂಭವಿಸಲಿದೆ ಎಂದು ತಿಳಿದು ವ್ಯಕ್ತಿಯು ಸಂತೋಷಪಡುತ್ತಾನೆ. ಈ ಜನರು ವ್ಯಾಪಾರದಲ್ಲಿ ಅಪಾರ ಲಾಭ ಕಾಣುತ್ತಾರೆ. ಕೆಲಸ ಮಾಡುವ ಜನರು ಕೆಲಸದ ಸ್ಥಳದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಸಂಪತ್ತು ಗಳಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.


ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಮೇಷ ರಾಶಿಯಲ್ಲಿ ತ್ರಿಗ್ರಹಿ ಯೋಗ, 5 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ!


ಕರ್ಕಾಟಕ ರಾಶಿ: ಮೇಷ ರಾಶಿಯಲ್ಲಿ ಬುಧನ ಸಂಚಾರವು ಕರ್ಕಾಟಕ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ನೀವು ಬಹಳ ಸಮಯದಿಂದ ವಿದೇಶಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರೆ, ನಿಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಹ ಪಡೆಯುತ್ತಾರೆ.


ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಸಂಕ್ರಮಣವು ಸಿಂಹ ರಾಶಿಯವರಿಗೆ ಶುಭ ಫಲಿತಾಂಶ ನೀಡುತ್ತದೆ. ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಪ್ರಗತಿ ಪಡೆಯಬಹುದು. ಈ ಸಮಯದಲ್ಲಿ ಸಂಬಳದಲ್ಲಿ ಹೆಚ್ಚಳವಾಗಬಹುದು. ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಈ ಜನರು ವ್ಯಾಪಾರ ಕ್ಷೇತ್ರದಲ್ಲಿಯೂ ಲಾಭ ಪಡೆಯಬಹುದು.


ಇದನ್ನೂ ಓದಿ: ವರ್ಷದ ಮೊದಲ ಸೂರ್ಯ ಗ್ರಹಣದ ಪರಿಣಾಮ: ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ


ಮಕರ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಬುಧ ಸಂಕ್ರಮಣವು ಮಕರ ರಾಶಿಯವರ ಜೀವನದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತದೆ. ಈ ರಾಶಿಯವರ ಜೀವನದಲ್ಲಿ ಸಂತೋಷದ ಮಳೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ. ಅಲ್ಲದೆ ಈ ಅವಧಿಯಲ್ಲಿ ಅವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಅದೇ ರೀತಿ ವ್ಯಾಪಾರ ಕ್ಷೇತ್ರದಲ್ಲಿ ಲಾಭವನ್ನು ನಿರೀಕ್ಷಿಸಲಾಗಿದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.