Budh Gochar 2023: ನಾಳೆಯಿಂದ ಚಿನ್ನದಂತೆ ಹೊಳೆಯಲಿದೆ 3 ರಾಶಿಗಳ ಜನರ ಅದೃಷ್ಟ, ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ಬುಧ!

Budh Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಭಾವಿಸಲಾಗುವ ಬುಧ, ಮಂಗಳ ಅಧಿಪತ್ಯದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಅಪಾರ ಬಡ್ತಿ ಹಾಗೂ ಆಕಸ್ಮಿಕ ಧನಾಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ.  

Written by - Nitin Tabib | Last Updated : Mar 30, 2023, 05:16 PM IST
  • ಮಾರ್ಚ್ 31 ರಂದು ಬುಧ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ.
  • ಆದರೆ ಮೂರು ರಾಶಿಗಳ ಜಾತಕದವರ ಪಾಲಿಗೆ ಬುಧನ ಈ ಗೋಚರ ಸಾಕಷ್ಟು ಸಕಾರಾತ್ಮಕ ಸಾಬೀತಾಗಲಿದೆ.
Budh Gochar 2023: ನಾಳೆಯಿಂದ ಚಿನ್ನದಂತೆ ಹೊಳೆಯಲಿದೆ 3 ರಾಶಿಗಳ ಜನರ ಅದೃಷ್ಟ, ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ಬುಧ! title=
ಮೇಷ ರಾಶಿಯಲ್ಲಿ ಬುಧ ಗೋಚರ

Mercury Transit 2023 In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧನನ್ನು ತರ್ಕ, ಗಣಿತ, ಬುದ್ಧಿ, ವ್ಯಾಪಾರ ಹಾಗೂ ಅರ್ಥವ್ಯವಸ್ಥೆಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬುಧ ಗೋಚರ ಸಂಭವಿಸಿದಾಗಲೆಲ್ಲಾ ಅದರ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರ ಹಾಗೂ ಇಡೀ ವಿಶ್ವದ ಮೇಲೆ ಗೋಚರಿಸುತ್ತದೆ. ಮಾರ್ಚ್ 31 ರಂದು ಬುಧ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ ಮೂರು ರಾಶಿಗಳ ಜಾತಕದವರ ಪಾಲಿಗೆ ಬುಧನ ಈ ಗೋಚರ ಸಾಕಷ್ಟು ಸಕಾರಾತ್ಮಕ ಸಾಬೀತಾಗಲಿದ್ದು, ಈ ಜಾತಕದವರ ಜೀವನದಲ್ಲಿ ಬುಧನ ಕೃಪೆಯಿಂದ ಅಪಾರ ಧನವೃಷ್ಟಿಯಾಗಲಿದೆ. ಏಕೆಂದರೆ ಇವರ ಜಾತಕದಲ್ಲಿ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯದ ಯೋಗಗಳು ನಿರ್ಮಾಣಗೊಳ್ಳುತ್ತಿವೆ. 

ಮೀನ ರಾಶಿ: ಮೀನ ರಾಶಿಯ ಜಾತಕದವರಿಗೆ ಬುಧನ ಈ ಮೇಷ ಗೋಚರ ಒಂದು ವರದಾನ ಎಂಬಂತೆ ಸಾಬೀತಾಗಲಿದೆ. ಏಕೆಂದರೆ ಈ ಗೋಚರ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಸಂಭವಿಸುತ್ತಿದೆ. ಇದನ್ನು ಧನ ಹಾಗೂ ಮಾತಿನ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಆದಾಯದಲ್ಲಿ ವೃದ್ಧಿಯ ಲಕ್ಷಣಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ. ಇದರ ಜೊತೆಗೆ ಈ ಅವಧಿಯಲ್ಲಿ ನೀವು ನಿಮ್ಮ ಮಾತಿನ ಮೂಲಕ ನಿಮ್ಮ ಎದುರು ಇರುವ ವ್ಯಕ್ತಿಯ ಮೇಲೆ ಪ್ರಭಾವ ಬೀರುವಿರಿ. ಮಾಧ್ಯಮ, ವಕಾಲತ್ತು, ಶೈಕ್ಷಣಿಕ ಹಾಗೂ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ  ಕೆಲಸ ಮಾಡುವವರಿಗೆ ಈ ಸಮಯ ಅತ್ಯಂತ ಲಕ್ಕಿ ಸಾಬೀತಾಗಲಿದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿ ಮಹಾರಾಜನ ಸಾಡೇಸಾತಿ ನಡೆಯುತ್ತಿರುವ ಕಾರಣ ಆರೋಗ್ಯ ಹಾಗೂ ನಿರ್ಧಾರಗಳ ವಿಷಯದಲ್ಲಿ ಸಚೇತರಾಗಿರುವುದು ಎಂದಿಗೂ ಉತ್ತಮ.  

ಮಿಥುನ ರಾಶಿ: ಬುಧನ ಮೇಷ ರಾಶಿ ಗೋಚರ ಮಿಥುನ ಜಾತಕದವರ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಬುಧ ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭದ ಸ್ಥಾನದಲ್ಲಿ ಗೋಚರಿಸಲಿದ್ದಾನೆ. ಇದರಿಂದ ನೀವು ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ಗಮನಿಸಬಹುದು. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಹೊಸ ಆಸ್ತಿ, ವಾಹನ ಹಾಗೂ ನಿವೇಶನ ಖರೀದಿಸುವ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ನೌಕರವರ್ಗದ ಜನರಿಗೆ ಪ್ರಮೋಷನ್, ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆ, ಲಾಟರಿಗಳಲ್ಲಿ ಹೂಡಿಕೆ ಮಾಡಲು ಸಮಯ ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ರಾಶಿಗೆ ಸ್ವತಃ ಬುಧನೇ  ಅಧಿಪತಿಯಾಗಿದ್ದಾನೆ. 

ಇದನ್ನೂ ಓದಿ-ನಾಳೆ ಮಂಗಳನ ಮನೆಯಲ್ಲಿ ಮಾಯಾವಿ ರಾಹು-ಬುಧನ ಮೈತ್ರಿ, 3 ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

ಕರ್ಕ ರಾಶಿ: ಬುಧ ಗೋಚರ ಕರ್ಕ ರಾಶಿಯ ಜಾತಕದವರ ಪಾಲಿಗೆ ವೃತ್ತಿ ಜೀವನ ಹಾಗೂ ವ್ಯಾಪಾರದಲ್ಲಿ ಸಾಕಷ್ಟು ಲಾಭಗಳನ್ನು ನೀಡಲಿದೆ. ಏಕೆಂದರೆ ಬುಧ ನಿಮ್ಮ ಜಾತಕದ ನೌಕರಿ ಹಾಗೂ ವ್ಯಾಪಾರ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ-ವ್ಯಾಪಾರದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ವೃತ್ತಿ ಜೀವನದಲ್ಲಿ ಈ ಅವಧಿಯಲ್ಲಿ ನಿಮಗೆ ಹೊಸ ಅವಕಾಶಗಳು ಒದಗಿಬರಲಿವೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ ಮತ್ತು ನೌಕರಿಯಲ್ಲಿ ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಸಾಕಷ್ಟು ಬೆಂಬಲ ಸಿಗಲಿದೆ.

ಇದನ್ನೂ ಓದಿ-Lakshmi Narayan Rajyog: ಲಕ್ಷ್ಮಿ ನಾರಾಯಣ ರಾಜಯೋಗ ನಿರ್ಮಾಣಕ್ಕೆ ಕೌಂಟ್ ಡೌನ್ ಆರಂಭ, ತಾಯಿ ಲಕ್ಷ್ಮಿಯ ಕೃಪೆಯಿಂದ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News