Lakshmi Narayan Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು ಒಂದಲ್ಲ ಒಂದು ಗ್ರಹ ತನ್ನ ತನ್ನ ರಾಶಿ ಅಥವಾ ನಡೆಯನ್ನು ಬದಲಾಯಿಸುತ್ತಲೇ ಇರುತ್ತದೆ. ಗ್ರಹಗಳ ಈ ಬದಲಾವಣೆಯು ಜಗತ್ತು ಮತ್ತು ಮಾನವ ಜೀವನದ ಮೇಲೆ ವ್ಯಾಪಕ ಪ್ರಭಾವವನ್ನು ಬೀರುತ್ತವೆ, ಏಕೆಂದರೆ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ರಾಶಿ ಒಂದು ಅಥವಾ ಕೆಲ ಗ್ರಹಗಳಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 2023 ರಲ್ಲಿ ಅನೇಕ ಗ್ರಹಗಳು ತಮ್ಮ ನಡೆಯನ್ನು ಬದಲಾಯಿಸಲಿವೆ. ಈ ಇದರಿಂದ ಕುಂಭ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗದಿಂದ ಲಕ್ಷ್ಮೀ ನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಜ್ಯೋತಿಷ್ಯದಲ್ಲಿ, ಈ ರಾಜಯೋಗವನ್ನು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ಪರಿಣಾಮದಿಂದಾಗಿ, 3 ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಅವರು ಇದರಿಂದ ಪ್ರಚಂಡ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಚತುರ್ಥ ಭಾವದಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗವು ರೂಪುಗೊಳ್ಳಲಿದೆ. ಈ ಸ್ಥಳವು ದೈಹಿಕ ಸಂತೋಷ ಮತ್ತು ತಾಯಿಗೆ ಹೆಸರುವಾಸಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯವರಿಗೆ ಈ ಯೋಗವು ತುಂಬಾ ವಿಶೇಷ ಫಲಗಳನ್ನು ನೀಡಲಿದೆ, ಈ ಅವಧಿಯಲ್ಲಿ ನಿಮಗೆ ತಾಯಿಯ ಬೆಂಬಲ ಸಿಗಲಿದೆ. ವಿತ್ತೀಯ ಲಾಭದ ಸಾಧ್ಯತೆಗಳಿವೆ, ಇದರಿಂದಾಗಿ ದೈಹಿಕ ಸಂತೋಷವನ್ನು ಸಾಧಿಸುವಿರಿ. ನೀವು ಆಸ್ತಿ ಮತ್ತು ವಾಹನಗಳನ್ನು ಸಹ ಖರೀದಿಸಬಹುದು.


ಇದನ್ನೂ ಓದಿ-ಗುರು ಗೋಚರದಿಂದ ಮಂಗಳನ ಈ ರಾಶಿಯಲ್ಲಿ ಗಜಲಕ್ಷ್ಮಿ ಯೋಗ, ಅಪಾರ ಧನಾಗಮನ!


ಸಿಂಹ ರಾಶಿ
ಬುಧ ಮತ್ತು ಶುಕ್ರರ ಸಂಯೋಗದಿಂದ ರೂಪಗೊಳ್ಳುವ ಲಕ್ಷ್ಮೀ ನಾರಾಯಣ ರಾಜಯೋಗವು ಸಿಂಹ ರಾಶಿಯವರಿಗೆ ಅತ್ಯಂತ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ರಾಶಿಯ ಸಪ್ತಮ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಸ್ಥಳವನ್ನು ವೈವಾಹಿಕ ಜೀವನ ಮತ್ತು ಪಾರ್ಟನರ್ಷಿಪ್ ಭಾವ ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಉದ್ಯೋಗಿಗಳಿಗೆ ಇದು ಪ್ರಗತಿಯ ಅವಕಾಶಗಳನ್ನು ಸೃಷ್ಟಿಸಲಿದೆ. ಅವಿವಾಹಿತರು ಶೀಘ್ರದಲ್ಲೇ ಕಂಕಣಭಾಗ್ಯ ಕೂಡಿ ಬರಲಿದೆ. ಪಾರ್ಟ್ನರ್ಶಿಪ್ ನಲ್ಲಿ ಮಾಡಿದ ಯಾವುದೇ ಕೆಲಸವು ದೊಡ್ಡ ಲಾಭವನ್ನು ತರಲಿದೆ.


ಇದನ್ನೂ ಓದಿ-ಕುಂಭ ರಾಶಿಯಲ್ಲಿ ಶನಿಯ ಗೋಚರ, ಈ ರಾಶಿಯ ಜನರ ಸಾಡೆಸಾತಿ ಆರಂಭ


ಮಿಥುನ ರಾಶಿ
ಮಿಥುನ ರಾಶಿಯವರ ಜಾತಕದಲ್ಲಿ ನವಮ ಭಾವದಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಸ್ಥಳವನ್ನು ಅದೃಷ್ಟ ಮತ್ತು ವಿದೇಶಿ ಸ್ಥಳ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಉದ್ಯೋಗಸ್ಥರಿಗೆ  ಹೊಸ ಉದ್ಯೋಗ ಪ್ರಸ್ತಾಪ ಬರುವ ಸಾಧ್ಯತೆ ಇದೆ. ನೀವು ಯಾವ ಕೆಲಸದಲ್ಲಿ ಕೈ ಹಾಕಿದರೂ ಅದರಲ್ಲಿ ಯಶಸ್ಸನ್ನು ಪಡೆಯುವಿರಿ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ.


ಇದನ್ನೂ ಓದಿ-ಸಂಗಾತಿ ಜೋತೆಗಿನ ನಿಮ್ಮ ಸಂಬಂಧ ಸುಮಧುರಗೊಳಿಸಬೇಕೆ? ಇಲ್ಲಿವೆ ಟಿಪ್ಸ್

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.