ಕುಂಭ ರಾಶಿಯಲ್ಲಿ ಶನಿಯ ಗೋಚರ, ಈ ರಾಶಿಯ ಜನರ ಸಾಡೆಸಾತಿ ಆರಂಭ

Shani Gochar 2023: ಶನಿಯ ಈ ಗೋಚರದಿಂದ ಮೀನ ಜಾತಕದವರು ತಮ್ಮ ಆರ್ಥಿಕ ವ್ಯವಹಾರಗಳನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕಾದ ಕಾಲ ಬಂದಿದೆ. ಅದರಲ್ಲಿಯೂ ವಿಶೇಷವಾಗಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು, ಗಂಭೀರ ಗಾಯ ಉಂಟಾಗುವ ಸಾಧ್ಯತೆ ಇದೆ.  

Written by - Nitin Tabib | Last Updated : Jan 21, 2023, 04:25 PM IST
  • ಸಾಡೆಸಾತಿ ಸಮಯದಲ್ಲಿ ನೀವು ನಿಮ್ಮ 100 ಪರ್ಸೆಂಟ್ ನೀಡಿದರೂ ಕೂಡ
  • ನಿಮಗೆ ಮುಂಬಡ್ತಿ ಸಿಗುವುದು ಕಷ್ಟಸಾಧ್ಯವಾಗಿದೆ.
  • ಕೆಲವು ಕಾರಣಗಳಿಂದಾಗಿ, ನೀವು ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ನೀವು ವಿಫಲರಾಗಬಹುದು,
ಕುಂಭ ರಾಶಿಯಲ್ಲಿ ಶನಿಯ ಗೋಚರ, ಈ ರಾಶಿಯ ಜನರ ಸಾಡೆಸಾತಿ ಆರಂಭ title=
ಮೀನ ರಾಶಿಗೆ ಶನಿಯ ಸಾಡೆಸಾತಿ ಆರಂಭ

Shani Sadesati 2023: ಶನಿ ಮಹಾರಾಜ ತನ್ನ ಮೊದಲ ರಾಶಿಯಾದ ಮಕರ ರಾಶಿಯನ್ನು ತೊರೆದು ತನ್ನ ಎರಡನೇ ರಾಶಿಯಾಗಿರುವ ಕುಂಭಕ್ಕೆ ಪ್ರವೇಶಿಸಿದ್ದಾನೆ. ಶನಿಯ ಈ ರಾಶಿ ಪರಿವರ್ತನೆಯಿಂದ ಮೀನ ರಾಶಿಯವರಿಗೆ ಸಾಡೇಸಾತಿ ಪ್ರಾರಂಭವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ದಿನಚರ್ಯೆಯನ್ನು ಮತ್ತು ಕೆಲಸವನ್ನು ಶನಿಯ ಸ್ವಭಾವಕ್ಕೆ ತಕ್ಕಂತೆ ನಡೆಸುವುದು ಉತ್ತಮ. ಶನಿಯು ನಿಮ್ಮ ಜಾತಕದ 12ನೇ ಭಾವದಲ್ಲಿ ವಿರಾಜಮಾನನಾಗಿದ್ದಾನೆ.  ಶನಿಯ ರಾಶಿ ಬದಲಾವಣೆ ಮೀನ ರಾಶಿಯವರ ಮೇಲೆ ಏನು ಮತ್ತು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಜವಾಬ್ದಾರಿಯಿಂದ ಕೆಲಸ ಪೂರ್ಣಗೊಳಿಸಿ
ಮೀನ ರಾಶಿಯವರಿಗೆ ಈಗಾಗಲೇ ಕೆಲವು ಜವಾಬ್ದಾರಿಗಳ ಹೊರೆ ಹೆಚ್ಚಾಗಿದೆ, ಆದರೆ ಶನಿಯ ರಾಶಿ ಪರಿವರ್ತನೆಯಿಂದ ನಿಮ್ಮ ತಿಳುವಳಿಕೆಯೂ ಹೆಚ್ಚಾಗುತ್ತದೆ ಮತ್ತು ನೀವು ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುವಿರಿ. ಮನಸ್ಸಿನಲ್ಲಿ ಹೆಚ್ಚು ದಿಗ್ಭ್ರಮೆ ಉಂಟಾಗುತ್ತದೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಆರ್ಥಿಕ ವ್ಯವಹಾರಗಳು
ಹಣಕಾಸಿನ ವಿಷಯಗಳಲ್ಲಿ, ಸಾಕಷ್ಟು ವಿಚಾರ ಮಾಡಿ ಹೆಜ್ಜೆ ಇಡುವ ಅವಶ್ಯಕತೆ ಇದೆ, ಅನಗತ್ಯ ವೆಚ್ಚಗಳನ್ನು ತಪ್ಪಿಸುವುದು ಮತ್ತು ಹೂಡಿಕೆಯತ್ತ ಗಮನ ಹರಿಸುವುದು ಸೂಕ್ತ. ಬಡ್ತಿಗಾಗಿ ಕಾಯುತ್ತಿರುವವರು ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗಲಿದೆ.

ವಾದ-ವಿವಾದಗಳಿಂದ ದೂರವಿರಿ
ಸಾಡೆಸಾತಿ ಸಮಯದಲ್ಲಿ ನೀವು ನಿಮ್ಮ 100 ಪರ್ಸೆಂಟ್ ನೀಡಿದರೂ ಕೂಡ ನಿಮಗೆ ಮುಂಬಡ್ತಿ ಸಿಗುವುದು ಕಷ್ಟಸಾಧ್ಯವಾಗಿದೆ. ಕೆಲವು ಕಾರಣಗಳಿಂದಾಗಿ, ನೀವು ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ನೀವು ವಿಫಲರಾಗಬಹುದು, ಇಂತಹ ಪರಿಸ್ಥಿತಿಯಲ್ಲಿ, ಸುಲಭವಾಗಿ ಪೂರೈಸುವ ಜವಾಬ್ದಾರಿಯನ್ನು ಮಾತ್ರ ತೆಗೆದುಕೊಳ್ಳಿ. ಉದ್ಯೋಗವನ್ನು ಬದಲಾಯಿಸುವ ಆಲೋಚನೆ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಬಾರಿ ಬರಲಿದೆ, ಅದು ತುಂಬಾ ಅಗತ್ಯವಿದ್ದರೆ ಮಾತ್ರ ಬದಲಾವಣೆಗಳನ್ನು ಮಾಡಿ, ಇಲ್ಲದಿದ್ದರೆ, ಈಗಾಗಲೇ ಮಾಡುತ್ತಿರುವ ಕೆಲಸದಲ್ಲಿಯೇ ಮುಂದುವರೆಯುವುದು ಯಾವಾಗಲು ಉತ್ತಮ.

ವ್ಯಾಪಾರಸ್ಥರು ಸರ್ಕಾರಿ ಕೆಲಸಗಳನ್ನು ಅಪ್ ಡೇಟ್ ಆಗಿ ಇರಿಸಬೇಕಾಗುವ ಕಾಲ ಇದು. ಇಲ್ಲದಿದ್ದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಳೆಯ ಒಪ್ಪಂದವನ್ನು ದೃಢೀಕರಿಸಲಾಗುವುದು, ಆದರೆ ಅದನ್ನು ಪಡೆಯಲು, ನೀವು ಹೆಚ್ಚು ಶ್ರಮಿಸಬೇಕು. ವಿವಾದಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬೇಡಿ, ವಿವಾದವಿದ್ದರೆ, ಅದನ್ನು ನ್ಯಾಯಾಲಯದ ಹೊರಗೆ ಪರಿಹರಿಸಲು ಪ್ರಯತ್ನಿಸಿ.

ಇದನ್ನೂ ಓದಿ-ಕೇವಲ ಒಂದೇ ದಿನ ಬಾಕಿ, ಕುಂಭ ರಾಶಿಯಲ್ಲಿ ಶುಕ್ರನ ಗೋಚರ, ಚಿನ್ನದಂತೆ ಹೊಳೆಯಲಿದೆ ಈ ಜನರ ಅದೃಷ್ಟ

ಮದುವೆ
ಅವಿವಾಹಿತ ಜನರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆ ಇದೆ, ಹೌದು ಸೂಕ್ತವಾದ ಹೊಂದಾಣಿಕೆ ಪಡೆದ ಮೇಲೆ ವಿವಾಹಕ್ಕೆ ಮುಂದಾಗಿ. ಮದುವೆಗೆ ಈ ಸಮಯ ಸೂಕ್ತವಾಗಿದೆ.

ಇದನ್ನೂ ಓದಿ-ನೀವೂ ನಿಮ್ಮ ಜೀವನವನ್ನು ಸುಖಮಯವಾಗಿಸಬೇಕೆ? ಗರುಡ ಪುರಾಣದ ಈ ಸಲಹೆಗಳನ್ನು ಅನುಸರಿಸಿ

ಆರೋಗ್ಯ
ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ವ್ಯಾಯಾಮವನ್ನು ಸೇರಿಸಿ, ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಹೊರಾಂಗಣ ಆಟಗಳನ್ನು ಆಡಿ ಇದರಿಂದ ದೇಹವು ಚುರುಕಾಗಿರುತ್ತದೆ. ಎತ್ತರದಲ್ಲಿ ಕೆಲಸ ಮಾಡುವಾಗ ಎಚ್ಚರದಿಂದಿರಿ, ಬಿದ್ದ ನಂತರ ಕಾಲಿಗೆ ಗಾಯ ಮತ್ತು ಮುರಿತದ ಸಾಧ್ಯತೆಯಿದೆ. ದೇಹದ ಎಡಭಾಗದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಎಚ್ಚರದಿಂದಿರಿ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-
 

Trending News