Moles Astrology: ಯಾವ ಭಾಗದ ಮಚ್ಚೆ ಯಾವ ರಾಶಿಗೆ ಶುಭದಾಯಕ?
Moles Astrology: ಜಾತಕದಲ್ಲಿ ಕುಜ ಮತ್ತು ಗುರುಗಳ ಸಂಯೋಜನೆ ಇದ್ದಲ್ಲಿ ಮಚ್ಚೆಯು ಹಳದಿಯುಕ್ತ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿರುತ್ತದೆ. ಕುಜ ಮತ್ತು ಶನಿಯ ಯುತಿ ಇದ್ದು, ರಾಹು ಅಥವಾ ಕೇತು ಕೇತುವಿನ ದೃಷ್ಟಿಯಿದ್ದಲ್ಲಿ ಮಚ್ಚೆಯು ನೀಲಿ ಬಣ್ಣದಿಂದ ಕೂಡಿರುತ್ತದೆ.
ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ದೇಹದ ಮೇಲಿರುವ ಮಚ್ಚೆಗಳು ನಮ್ಮ ಗುಣಗಳ ಜೊತೆಗೆ ಭವಿಷ್ಯವನ್ನು ಸೂಚಿಸುತ್ತವಂತೆ. ಪ್ರತಿಯೊಂದು ರಾಶಿಯು ದೇಹದ ವಿವಿಧ ಭಾಗಗಳಲ್ಲಿ ಕಂಡುಬರುವ ಮಚ್ಚೆಗಳು ವಿವಿಧ ರೀತಿಯ ವಿಚಾರಗಳನ್ನು ತಿಳಿಸುತ್ತವೆ ಎನ್ನಲಾಗಿದೆ.
ರಾಶಿಗಳಲ್ಲಿರುವ ಗ್ರಹಗಳು ಕೂಡ ಮಚ್ಚೆಯ ಬಣ್ಣಕ್ಕೆ ಕಾರಣವಾಗುತ್ತದೆ. ಕೆಲವರಿಗೆ ಮಚ್ಚೆಗಳು ಕಡುಕಪ್ಪು, ಕೆಲವರಿಗೆ ಬೂದು ಬಣ್ಣ, ಕೆಲವರಿಗೆ ತುಸು ಕೆಂಪು ಬಣ್ಣದ್ದಾಗಿರುತ್ತದೆ. ಕೆಲವರಿಗೆ ಮಚ್ಚೆಗಳು ಶುಭ-ಅಶುಭ ಫಲಗಳನ್ನು ನೀಡುತ್ತವೆ.ಮಚ್ಚೆಗಳ ಫಲಗಳನ್ನು ನಿರ್ಧರಿಸುವ ಮುನ್ನ ಕುಂಡಲಿಯಲ್ಲಿ ಇರುವ ಗ್ರಹಗಳನ್ನು ಪರಿಶೀಲಿಸಲೇಬೇಕು.
ಇದನ್ನೂ ಓದಿ: ಸಂಗಾತಿ ಜೊತೆ ಜಗಳವಾಡದೇ ಇರಲು ಈ ʼ5ʼ ಮಾರ್ಗಗಳನ್ನು ಅನುಸರಿಸಿ ಸಾಕು..!
ಯಾವ ಭಾಗದ ಮಚ್ಚೆ ಯಾವ ರಾಶಿಗೆ ಶುಭ?
ಧನಸ್ಸು- ತೊಡೆಗಳು
ಮಕರ - ಮಂಡಿಗಳು ಮತ್ತು ಮೊಣ ಕೈಗಳು
ಕುಂಭ - ತೊಡೆಗಳ ಪಾಶ್ವಗಳು ಮತ್ತು ಹಿಂಭಾಗ
ಮೇಷ -ತಲೆ, ಹಣೆ
ವೃಷಭ - ಮುಖದ ಭಾಗ, ಕಣ್ಣು, ಕಿವಿ, ತುಟಿ, ಕುತ್ತಿಗೆ, ನಾಲಿಗೆ
ಮಿಥುನ - ಭುಜಗಳು, ಮಣಿಬಂಧ, ಎದೆಯ ಭಾಗ
ಕಟಕ- ಕುತ್ತಿಗೆಯಿಂದ ಹೊಕ್ಕಳಿನವರೆಗೂ, ಎದೆಯ ಮಧ್ಯಭಾಗ
ಸಿಂಹ - ಹೊಟ್ಟೆ, ಗುದದ್ವಾರ, ಹೊಕ್ಕಳು
ಕನ್ಯಾ - ಸೊಂಟ ಮತ್ತು ಹೊಟ್ಟೆಯ ಕೆಳಭಾಗ
ತುಲಾ - ಅಂಗೈಗಳು, ಕೈಗಳ ಹಿಂಭಾಗ, ಬಸ್ತಿ
ವೃಶ್ಚಿಕ - ಜನನೇಂದ್ರಿಯಗಳು
ಮೀನಾ- ಪಾದಗಳು
ಪ್ರತಿ ಗ್ರಹಕ್ಕೂ ಇದೆ ವಿವಿಧ ಬಣ್ಣ
ರವಿ- ಕೆಂಪು ಬಣ್ಣ
ಚಂದ್ರ - ಕೇಸರಿ ಮತ್ತು ಹಾಲಿನ ಬಣ್ಣ
ಕುಜ - ಕೆಂಪು ಬಣ್ಣ
ಬುಧ - ಹಸಿರು ಬಣ್ಣ
ಗುರು - ಕೇಸರಿ ಮತ್ತು ಹಳದಿ ಬಣ್ಣ
ಶುಕ್ರ- ನೀಲಿ ಮತ್ತು ಬಿಳಿಯ ಬಣ್ಣ
ಶನಿ - ಕಡುನೀಲಿ ಮತ್ತು ನೇರಳೆ ಬಣ್ಣ
ಗ್ರಹಗಳ ಸಂಯೋಜನೆ ಸಹ ಮಚ್ಚೆಗಳ ಬಣ್ಣವನ್ನು ಸೂಚಿಸುತ್ತದೆ. ರಾಹುವಿನ ಜೊತೆ ಯಾವುದೇ ಗ್ರಹಗಳು ಮಿಳಿತವಾಗಿದ್ದರೆ ಉಂಟಾಗುವ ಮಚ್ಚೆಯು ಗಾಢವಾಗಿರುತ್ತದೆ. ಜಾತಕದಲ್ಲಿ ಕುಜ ಮತ್ತು ಗುರುಗಳ ಸಂಯೋಜನೆ ಇದ್ದಲ್ಲಿ ಮಚ್ಚೆಯು ಹಳದಿಯುಕ್ತ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿರುತ್ತದೆ. ಕುಜ ಮತ್ತು ಶನಿಯ ಯುತಿ ಇದ್ದು, ರಾಹು ಅಥವಾ ಕೇತು ಕೇತುವಿನ ದೃಷ್ಟಿಯಿದ್ದಲ್ಲಿ ಮಚ್ಚೆಯು ನೀಲಿ ಬಣ್ಣದಿಂದ ಕೂಡಿರುತ್ತದೆ. ಶನಿಯ ಜೊತೆಗೆ ರಾಹು ಅಥವಾ ಕೇತು ಇದ್ದಲ್ಲಿ ಹಾವಿನ ಮಚ್ಚೆ ಅಥವಾ ಗರುಡನ ಮಚ್ಚೆ ಇರುತ್ತದೆ. ಗುರುವಿನ ಜೊತೆ ರಾಹು ಅಥವಾ ಕೇತುವಿದ್ದಲ್ಲಿ ಅಂಗೈಯಲ್ಲಿರುವ ಆಯುರ್ ರೇಖೆಯ ಮೇಲೆ ನೀಲಿ ಅಥವಾ ಕೆಂಪು ಬಣ್ಣದ ಮಚ್ಚೆ ಇರುತ್ತದೆ.
ಇದನ್ನೂ ಓದಿ: ಸಂಗಾತಿ ಜೊತೆ ಜಗಳವಾಡದೇ ಇರಲು ಈ ʼ5ʼ ಮಾರ್ಗಗಳನ್ನು ಅನುಸರಿಸಿ ಸಾಕು..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.