ಬೆಂಗಳೂರು : ಹಸ್ತ ರೇಖೆಗಳು ಹಣ, ಆಸ್ತಿ, ವೃತ್ತಿ, ಮದುವೆ, ಮಕ್ಕಳು, ಆರೋಗ್ಯ ಇತ್ಯಾದಿಗಳ ಬಗೆಗಿನ ಪ್ರಮುಖ ಮಾಹಿತಿಯನ್ನು ನೀಡುತ್ತವೆ. ವ್ಯಕ್ತಿಯ ಬಳಿ ಎಷ್ಟು ಹಣ ಇದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ನಾವು ಶ್ರೀಮಂತರಾಗುತ್ತೇವೆಯೋ ಇಲ್ಲವೋ? ಎನ್ನುವುದನ್ನು ಅಂಗೈಯಲ್ಲಿರುವ ಹಣದ ರೇಖೆಯಾ ಮೂಲಕ ತಿಳಿದುಕೊಳ್ಳಬಹುದು.  


COMMERCIAL BREAK
SCROLL TO CONTINUE READING

ಶ್ರೀಮಂತರಾಗುತ್ತೀರೋ ಇಲ್ಲವೋ  ಈ ಮೂಲಕ ತಿಳಿಯಿರಿ : 
ಹಣದ ರೇಖೆ ಕೈಯ ಕಿರುಬೆರಳಿನಿಂದ ಪ್ರಾರಂಭವಾಗಿ ಕೆಳಗೆ ಹೋಗುತ್ತದೆ. ವ್ಯಕ್ತಿಯು ಎಷ್ಟು ಹಣವನ್ನು ಹೊಂದಿರುತ್ತಾನೆ ಎಂಬುದನ್ನು ಈ ರೇಖೆ ಹೇಳುತ್ತದೆ. ಕಿರುಬೆರಳಿನ ಕೆಳಗೆ ಬುಧದ ಪರ್ವತವಿದ್ದು, ಸಾಮಾನ್ಯವಾಗಿ ಹಣದ ರೇಖೆಯು ಇಲ್ಲಿಂದ ಹುಟ್ಟಿಕೊಳ್ಳುತ್ತದೆ. 


ಇದನ್ನೂ ಓದಿ : ಪತಿ ಪತ್ನಿ ಈ ನಿಯಮಗಳನ್ನು ಅನುಸರಿಸಿದರೆ ದಾಂಪತ್ಯದಲ್ಲಿ ಬಿರುಕು ಮೂಡುವುದೇ ಇಲ್ಲ ..!


ಎಲ್ಲರ ಕೈಯ್ಯಲ್ಲಿ ಹಣದ ರೇಖೆ ಇರಬೇಕೆಂದಿಲ್ಲ. ಕೈಯಲ್ಲಿ ಹಣದ ರೇಖೆ ಇರುವವರು ಅದೃಷ್ಟವಂತರು. ಹಣದ ರೇಖೆ ಸ್ಪಷ್ಟ ಮತ್ತು ನೇರವಾಗಿದ್ದರೆ, ವ್ಯಕ್ತಿಯು ತುಂಬಾ ಶ್ರೀಮಂತನಾಗಿರುತ್ತಾನೆ ಎಂದರ್ಥ. 


ಹಣದ ರೇಖೆಯ ವಕ್ರವಾಗಿದ್ದರೆ ಅಥವಾ ಮಧ್ಯದಲ್ಲಿ ತುಂಡಾಗಿದ್ದರೆ ಆ ವ್ಯಕ್ತಿಯಲ್ಲಿ ಹಣವೇನೋ ಇರುತ್ತದೆ. ಆದರೆ ಹಣ ಹೇಗೆ ಬರುತ್ತದೆ ಹಾಗೆಯೇ ಖರ್ಚಾಗಿಯೂ ಹೋಗುತ್ತದೆ ಎಂದರ್ಥ. ಇಂಥವರ ಕೈಯ್ಯಲ್ಲಿ ಜೀವನದುದ್ದಕ್ಕೂ ಹಣ ಉಳಿಯುವುದಿಲ್ಲ.  ಅವರ ಆರ್ಥಿಕ ಸ್ಥಿತಿ ಬದಲಾಗುತ್ತಲೇ ಇರುತ್ತದೆ. 


ಇದನ್ನೂ ಓದಿ : ಶನಿ ಸಂಕ್ರಮಣದಿಂದ ಬದಲಾಗುತ್ತೆ ಈ ಮೂರು ರಾಶಿಗಳ ಭವಿಷ್ಯ!


ಹಸ್ತದಲ್ಲಿ ಹಣದ ರೇಖೆಯಿದ್ದರೂ ಅದು ಅಸ್ಪಷ್ಟವಾಗಿದ್ದರೆ, ಅಂತಹ ವ್ಯಕ್ತಿಯು ಹಣವನ್ನು ಗಳಿಸುವಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಾನೆ. ಇವರು ಸುಲಭವಾಗಿ ಹಣವನ್ನು ಪಡೆಯುವುದಿಲ್ಲ. 


ಒಂದು ವೇಳೆ ಹಸ್ತದಲ್ಲಿ ಹಣದ ರೇಖೆ ಇಲ್ಲದಿದ್ದರೆ, ವ್ಯಕ್ತಿಯ ಬಳಿ ಹಣವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅದೃಷ್ಟದ ರೇಖೆಯಿಂದ ನಿರ್ಣಯಿಸಲಾಗುತ್ತದೆ. ಅದೃಷ್ಟ ರೇಖೆಯು ಉತ್ತಮವಾಗಿದ್ದರೂ, ವ್ಯಕ್ತಿಯು ತುಂಬಾ ಶ್ರೀಮಂತನಾಗುತ್ತಾನೆ. 


ಇದನ್ನೂ ಓದಿ : 30 ವರ್ಷಗಳ ನಂತರ ಈ ರಾಶಿಯವರನ್ನು ಹರಸಲಿದ್ದಾನೆ ಶನಿ ದೇವ


ಜೀವನ ರೇಖೆ, ಮಸ್ತಿಷ್ಕ ರೇಖೆ ಮತ್ತು ಭಾಗ್ಯ ರೇಖೆ ಸೇರಿದಾಗ ಅವರ ಕೈಯ್ಯಲ್ಲಿ M' ಆಕಾರ ಕಾಣಿಸಿಕೊಂಡರೆ, ಅಂತಹ ಜನರು ತುಂಬಾ ಅದೃಷ್ಟವಂತರು. ಈ ಜನರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.