ಈ 4 ರಾಶಿಯವರಿಗೆ ತೀವ್ರ ಹಾನಿ ಉಂಟು ಮಾಡಲಿದ್ದಾರೆ ಮಂಗಳ-ರಾಹು

ಪ್ರಸ್ತುತ ಮೇಷ ರಾಶಿಯಲ್ಲಿ ರಾಹು ಮತ್ತು ಮಂಗಳ ಗ್ರಹಗಳ ಸಂಯೋಗವು ಅಂಗಾರಕ ಯೋಗವನ್ನುಂಟು ಮಾಡುತ್ತಿದೆ. ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಅಪಾಯಕಾರಿ ಯೋಗವೆಂದು ಪರಿಗಣಿಸಲಾಗಿದೆ.  ಈ ಯೋಗವು ಮುಂಬರುವ ದಿನಗಳಲ್ಲಿ ಉತ್ತುಂಗಕ್ಕೇರಲಿದೆ. ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಕಂಡು ಬರುತ್ತದೆ. ಆದಾಗ್ಯೂ, ಈ ಯೋಗವು ಇನ್ನು ಒಂಬತ್ತು ದಿನಗಳ ನಂತರ ನಾಲ್ಕು ರಾಶಿಯವರಿಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Jul 22, 2022, 06:57 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳ ಗ್ರಹವನ್ನು ಬೆಂಕಿಯ ಅಂಶವೆಂದು ಪರಿಗಣಿಸಲಾಗುತ್ತದೆ.
  • ರಾಹು ಗ್ರಹವನ್ನು ಪಾಪ ಗ್ರಹ, ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ.
  • ಅಂಗಾರಕ ಯೋಗದ ಸಮಯದಲ್ಲಿ, ಇದರ ಕೆಟ್ಟ ಪರಿಣಾಮದಿಂದಾಗಿ ವ್ಯಕ್ತಿಯು ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಈ 4 ರಾಶಿಯವರಿಗೆ ತೀವ್ರ ಹಾನಿ ಉಂಟು ಮಾಡಲಿದ್ದಾರೆ ಮಂಗಳ-ರಾಹು  title=
Angarak Yoga Effect

ರಾಹು-ಮಂಗಳ ಯುತಿ- ಅಂಗಾರಕ ಯೋಗದ ಪರಿಣಾಮ: ಶನಿಯ ನಂತರ ಅತಿ ನಿಧಾನವಾಗಿ ಚಲಿಸುವ ಗ್ರಹಗಳು ಎಂದು ಪರಿಗಣಿಸಲ್ಪಟ್ಟಿರುವ ರಾಹು-ಕೇತು ಒಂದೂವರೆ ವರ್ಷದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಾರೆ. 2022ರ  ಏಪ್ರಿಲ್ 12ರಂದು ರಾಹು ಮೇಷ ರಾಶಿಯನ್ನು ಪ್ರವೇಶಿಸಿದ್ದನು. ಜೂನ್‌ನಲ್ಲಿ   ಮಂಗಳ ಗ್ರಹವೂ ಸಹ ಮೇಷ ರಾಶಿಯನ್ನು ಪ್ರವೇಶಿಸಿದೆ. ಇದರಿಂದಾಗಿ ಮೇಷ ರಾಶಿಯಲ್ಲಿ ರಾಹು-ಮಂಗಳ ಯುತಿಯು ಅಂಗಾರಕ ಯೋಗವನ್ನು ಸೃಷ್ಟಿಸಿದೆ. ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಅಪಾಯಕಾರಿ ಯೋಗವೆಂದು ಪರಿಗಣಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಯೋಗವು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದೂ ಸಹ ಹೇಳಲಾಗುತ್ತಿದೆ.

ದುಷ್ಟ ಗ್ರಹಗಳು ಎಂದು ಪರಿಗಣಿಸಲಾಗಿರುವ ರಾಹು ಮತ್ತು ಮಂಗಳ ಸಂಯೋಗದಲ್ಲಿ ಅಂಗಾರಕ ಯೋಗವು ರೂಪುಗೊಳ್ಳುತ್ತದೆ. ಮೇಷ ರಾಶಿಯಲ್ಲಿ ರಾಹು ಮತ್ತು ಮಂಗಳ ಹತ್ತಿರವಾಗುತ್ತಿರುವುದರಿಂದ ಅಂಗಾರಕ ಯೋಗದ ಬಲ ಹೆಚ್ಚುತ್ತಿದೆ. ಆಗಸ್ಟ್ 1 ರಿಂದ ಆಗಸ್ಟ್ 4 ರವರೆಗೆ, ರಾಹುವು ಮೇಷ ರಾಶಿಯಲ್ಲಿ 24.7 ಡಿಗ್ರಿಗಳಲ್ಲಿ ಮತ್ತು ಮಂಗಳ 24 ಡಿಗ್ರಿಗಳಲ್ಲಿ ಸಾಗುತ್ತದೆ, ಆಗ ರಾಹು-ಮಂಗಳ ಸಂಯೋಗಕ್ಕೆ ಅತ್ಯಂತ ಕಷ್ಟಕರ ಸಮಯವಾಗಿರುತ್ತದೆ. ಇದರ ನಂತರ, ಮಂಗಳವು ಆಗಸ್ಟ್ 11, 2022 ರಂದು ಮೇಷ ರಾಶಿಯಿಂದ ಹೊರಡಲಿದೆ. ಆದರೆ ಈ 4 ದಿನಗಳ ಸಮಯ ಕೆಲವರಿಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ಜನರು ತಮ್ಮ ಶಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅವಶ್ಯಕ. ಏಕೆಂದರೆ ರಾಹು-ಮಂಗಳ ಸಂಯೋಜನೆಯು ಬೆಂಕಿ, ಸ್ಫೋಟವನ್ನು ತರುತ್ತದೆ. ಈ ರಾಶಿಚಕ್ರದ ಚಿಹ್ನೆಗಳು ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Mangal Grah Transit: ಆಗಸ್ಟ್ 10 ರವರೆಗೆ ಈ ರಾಶಿಯವರಿಗೆ ಅದೃಷ್ಟ ತರಲಿದ್ದಾನೆ ಮಂಗಳ

ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳ ಗ್ರಹವನ್ನು ಬೆಂಕಿಯ ಅಂಶವೆಂದು ಪರಿಗಣಿಸಲಾಗುತ್ತದೆ. ರಾಹು ಗ್ರಹವನ್ನು ಪಾಪ ಗ್ರಹ, ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಅಂಗಾರಕ ಯೋಗದ ಸಮಯದಲ್ಲಿ, ಇದರ ಕೆಟ್ಟ ಪರಿಣಾಮದಿಂದಾಗಿ ವ್ಯಕ್ತಿಯು ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ಅಂಗಾರಕ ಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...

ಮೇಷ ರಾಶಿ: ಈ ಸಮಯದಲ್ಲಿ ಮೇಷ ರಾಶಿಯ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕು. ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ. ಇಲ್ಲದಿದ್ದರೆ, ವಿನಾಕಾರಣ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ.

ವೃಷಭ ರಾಶಿ: ವೃಷಭ ರಾಶಿಯ ಜನರು 10 ಆಗಸ್ಟ್ 2022 ರವರೆಗೆ ತಾಳ್ಮೆಯನ್ನು ಹೊಂದಿರಬೇಕು. ಉದ್ಯೋಗದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ, ಎದೆಗುಂದಬೇಡಿ. ತಾಳ್ಮೆಯಿಂದ ಕೆಲಸ ಮಾಡಿ.

ಇದನ್ನೂ ಓದಿ- ವಾಸ್ತು ನಿಯಮಗಳು: ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ

ಮಿಥುನ ರಾಶಿ: ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ದಾಯಾದಿಗಳೊಂದಿಗೆ ಕಲಹ ಉಂಟಾಗಬಹುದು. ಕೋಪದ ಕೈಗೆ ಬುದ್ದಿ ನೀಡಬೇಡಿ, ಮುಂದಿನ ದಿನಗಳಲ್ಲಿ ಇದರ ನಷ್ಟ ಭರಿಸಬೇಕಾಗುತ್ತದೆ.

ಕರ್ಕಾಟಕ ರಾಶಿ: ಈ ಅಂಗಾರಕ ಯೋಗದ ಸಮಯದಲ್ಲಿ ಕರ್ಕಾಟಕ ರಾಶಿಯವರು ಹಣ ಮತ್ತು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಆಗಸ್ಟ್ 10ರವರೆಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News