ನವದೆಹಲಿ: ವೃಷಭ ರಾಶಿಯ ಜನರು ಡಿಸೆಂಬರ್ ತಿಂಗಳಲ್ಲಿ ವೃತ್ತಿ ಕ್ಷೇತ್ರದಲ್ಲಿ ಕೆಲವು ಹೊಸ ಬದಲಾವಣೆ ಕಾಣಬಹುದು. ನಿಮ್ಮ ನಡವಳಿಕೆಯ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು, ಕೆಲಸದ ಸ್ಥಳದಲ್ಲಿ ಕೋಪಗೊಳ್ಳುವುದು ಸರಿಯಲ್ಲ. ಇದನ್ನು ನಿಯಂತ್ರಿಸುವ ಮೂಲಕ ನೀವು ಉತ್ತಮ ಸಮಯದ ಆಹ್ಲಾದಕರ ಭಾವನೆ ಹೊಂದುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯವು ಹೆಚ್ಚಾಗುತ್ತದೆ. ವರ್ಗಾವಣೆಯ ಸಾಧ್ಯತೆಗಳು ಮತ್ತು ಉದ್ಯೋಗ ಬದಲಾಯಿಸುವ ವೈಯಕ್ತಿಕ ಪ್ರಯತ್ನಗಳು ಯಶಸ್ವಿಯಾಗಬಹುದು. ನೀವು ಹಿರಿಯ ಅಧಿಕಾರಿಗಳ ಆಶೀರ್ವಾದಕ್ಕೆ ಅರ್ಹರಾಗುತ್ತೀರಿ, ಇದರಿಂದಾಗಿ ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಡಿಸೆಂಬರ್ ತಿಂಗಳ ಆರಂಭವು ವ್ಯಾಪಾರಸ್ಥರಿಗೆ ತುಂಬಾ ಒಳ್ಳೆಯದು. ನೀವು ವ್ಯವಹಾರದಲ್ಲಿನ ಕಠಿಣ ಪರಿಶ್ರಮದ ಫಲ ಪಡೆಯುತ್ತೀರಿ. ವ್ಯಾಪಾರ ಪಾಲುದಾರರ ಅಹಂಕಾರವು ಸಮಸ್ಯೆಯನ್ನುಂಟು ಮಾಡಬಹುದು. ಆದ್ದರಿಂದ ಅವರೊಂದಿಗೆ ಎಚ್ಚರಿಕೆಯಿಂದ ಮಾತನಾಡಬೇಕು. ಯಾವುದೇ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಬೇಕು. ಇಲ್ಲದಿದ್ದರೆ ನಿಮ್ಮ ವ್ಯಾಪಾರದಲ್ಲಿ ನಷ್ಟವಾಗಬಹುದು. ಕೋಪ ನಿಯಂತ್ರಿಸುವ ಮೂಲಕ ನೀವು ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ವ್ಯಾಪಾರವು ಉತ್ತಮವಾಗಿ ಬೆಳೆಯುತ್ತದೆ. ಉತ್ತಮ ಮಾತುಗಳಿಂದ  ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Thursday Remedies: ಶ್ರೀಮಂತರಾಗಲು ಗುರುವಾರದಂದು ಪೊರಕೆಗೆ ಸಂಬಂಧಿಸಿದ ಈ ತಂತ್ರವನ್ನು ಅನುಸರಿಸಿ


ಮನೆಯಲ್ಲಿ ಮಂಗಳವಾದ್ಯ ಮೊಳಗಬಹುದು


ಪ್ರೇಮ ಸಂಬಂಧಗಳು ಕ್ರಮೇಣ ಪ್ರೇಮ ವಿವಾಹದತ್ತ ಸಾಗಬಹುದು. ಇನ್ನೂ ಅವಿವಾಹಿತರಾಗಿರುವವರಿಗೆ ವಿವಾಹವಾಗುವ ಅವಕಾಶವಿರುತ್ತದೆ. ಮನೆಯಲ್ಲಿ ಮಂಗಳವಾದ್ಯ ಮೊಳಗಬಹುದು. ಯುವಕರ ಪ್ರೇಮ ಪ್ರಕರಣಗಳಲ್ಲಿ ಪ್ರೀತಿ, ಆಕರ್ಷಣೆಯ ಜೊತೆಗೆ ಪ್ರಣಯದ ಛಾಯೆಯೂ ಮೂಡಲಿದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸುತ್ತಾಡಲು ಅವಕಾಶ ಸಿಗುತ್ತದೆ ಮತ್ತು ಭವಿಷ್ಯದ ಕನಸುಗಳು ನನಸಾಗುತ್ತವೆ. ನಿಮ್ಮ ಪ್ರೇಮ ವಿಚಾರವನ್ನು ಕುಟುಂಬ ಸದಸ್ಯರ ಮುಂದೆ ಬಹಿರಂಗಪಡಿಸುವುದು ಉತ್ತಮ. ಈ ತಿಂಗಳು ಆರೋಗ್ಯ ಸಂಬಂಧಿ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಣ್ಣ ಸಮಸ್ಯೆಯಾದರೂ ನಿರ್ಲಕ್ಷಿಸಬೇಡಿ ಮತ್ತು ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಹೆಚ್ಚು ದ್ರವ ಆಹಾರ ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಲಿದೆ.


ದೊಡ್ಡ ಹೂಡಿಕೆ ತಪ್ಪಿಸಿ


ಕೌಟುಂಬಿಕ ಜೀವನದಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಟುಂಬ ಸದಸ್ಯರ ನಡುವೆ ಪ್ರೀತಿ, ಸೌಹಾರ್ದತೆ ಇರುತ್ತದೆ. ಡಿಸೆಂಬರ್ 16ರ ನಂತರ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಬಹುದು. ಕುಟುಂಬದ ಹಿರಿಯ ಸದಸ್ಯರ ಆರೋಗ್ಯ ಹದಗೆಡಬಹುದು, ಪೋಷಕರ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಸಂಗಾತಿಯೊಂದಿಗೆ ನೀವು ಉತ್ತಮ ಸಾಮರಸ್ಯವನ್ನು ಕಾಣಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಬರಲಿದೆ. ಸಂತಾನ ಹೊಂದಲು ಇಚ್ಛಿಸುವವರ ಆಸೆ ಈಡೇರುವ ಸಾಧ್ಯತೆ ಇರುತ್ತದೆ. ಈ ತಿಂಗಳು ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ. ಹೀಗಾಗಿ ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು. ಈ ತಿಂಗಳು ದೊಡ್ಡ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಹೂಡಿದ ಹಣ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಸರಿಪಡಿಸಲು ನೀವು ಆದಷ್ಟು ಪ್ರಯತ್ನಿಸಬೇಕು.


ಇದನ್ನೂ ಓದಿ: Astro Tips: ಜನರು ಧರಿಸುವ ಕಪ್ಪು ದಾರದ ಶಕ್ತಿ ಏನು? ಅದು ಹೇಗೆ ರಕ್ಷಿಸುತ್ತದೆ ಗೊತ್ತೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.