Rose Day 2023 : ಇಂದಿನಿಂದ ಅಂದರೆ ಫೆಬ್ರವರಿ 7 ರಿಂದ, ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ಇಂದು ರೋಸ್ ಡೇಯನ್ನು ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದು ವ್ಯಾಲೆಂಟೈನ್ಸ್ ವೀಕ್ ಆಗಿರಲಿ ಅಥವಾ ಪ್ರೀತಿಯಾಗಿರಲಿ, ಗುಲಾಬಿಗೆ ತನ್ನದೇ ಆದ ಮಹತ್ವವಿದೆ. ಈ ಹೂವು ಜನರನ್ನು ಆಕರ್ಷಿಸಿ ಬಿಡುತ್ತದೆ. ಇದೇ ಕಾರಣಕ್ಕೆ ಗುಲಾಬಿಯನ್ನು ಪ್ರೀತಿ ಮತ್ತು ಪ್ರಣಯದ ಸಂಕೇತ ಎಂದು ಹೇಳಲಾಗುತ್ತದೆ.  ಈ ವಾರ ಪೂರ್ತಿ ಗುಲಾಬಿ ಹೂವುಗಳಿಗೆ ಸಾಕಷ್ಟು ಬೇಡಿಕೆಯಿರುತ್ತದೆ. ಅದರಲ್ಲೂ ಇವತ್ತು ರೋಸ್ ಡೇ ಆಗಿರುವ ಕಾರಣ ಈ ಬೇಡಿಕೆ ದುಪ್ಪಟ್ಟಾಗಿದೆ. ಅಗ್ಗದ ಗುಲಾಬಿ ಕೂಡಾ ಇಂದಿನ ದಿನ ತುಸು ದುಬಾರಿ. ಆದರೆ ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂವು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ. 


COMMERCIAL BREAK
SCROLL TO CONTINUE READING

ಪ್ರಪಂಚದಾದ್ಯಂತ 16 ವಿವಿಧ ಬಣ್ಣಗಳ ಗುಲಾಬಿಗಳಿವೆ. ಪ್ರತಿಯೊಂದು ಹೂವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಇವುಗಳಲ್ಲಿ ಕೆಲವು ಸುಗಂಧಕ್ಕೆ ಹೆಸರಾಗಿದ್ದರೆ, ಇನ್ನು ಕೆಲವು ಸೌಂದರ್ಯಕ್ಕೆ ಪ್ರಸಿದ್ಧವಾಗಿವೆ. ಅವರ ಜನಪ್ರಿಯತೆ ಎಷ್ಟರ ಮಟ್ಟಿಗಿದೆಯೆಂದರೆ ಅವುಗಳನ್ನು ವಿಶ್ವದ ಅತ್ಯಂತ ದುಬಾರಿ ಗುಲಾಬಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಜೂಲಿಯೆಟ್ ಗುಲಾಬಿ ವಿಶ್ವದ ಅತ್ಯಂತ ದುಬಾರಿ ಗುಲಾಬಿಯಾಗಿದೆ. 


ಇದನ್ನೂ ಓದಿ : ಈ ನ್ಯಾಚ್ಯುರಲ್ ಬಣ್ಣ ಬಳಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ


ಜೂಲಿಯೆಟ್ ಗುಲಾಬಿ ಅತ್ಯಂತ ದುಬಾರಿ ಗುಲಾಬಿ  ಎಂದು ಹೇಳುವಾಗ ಸಾಮಾನ್ಯವಾಗಿ ದುಬಾರಿ ಎಂದರೆ ಅಂದಾಜು ಎಷ್ಟಿರಬಹುದು ಎನ್ನುವ ಪ್ರಶ್ನೆ ಮೂಡುತ್ತದೆ. ಒಂದು ಗುಲಾಬಿ ಅಬ್ಬಬ್ಬಾ ಅಂದರೆ 100 ರೂಪಾಯಿಯವರೆಗೆ  ನಮ್ಮ ಊಹೆ ಹೋಗಬಹುದು. ಆದರೆ ಇದರ ಬೆಲೆ ನಮ್ಮ ಊಹೆಗೂ ನಿಲುಕದ್ದು.  ಜೂಲಿಯೆಟ್ ರೋಸ್‌ನ ಬೆಲೆ ಎಷ್ಟು ದುಬಾರಿ ಎಂದರೆ ಅತ್ಯಂತ  ಶ್ರೀಮಂತ ವ್ಯಕ್ತಿ ಮಾತ್ರ ಈ ಗುಲಾಬಿಯನ್ನು ಖರೀದಿಸುವುದು ಸಾಧ್ಯ.  ಜೂಲಿಯೆಟ್ ಹೂವು ಅರಳಲು 15 ವರ್ಷಗಳನ್ನು ತೆಗೆದುಕೊಂಡಿದೆ. ಇನ್ನು ಈ ಗುಲಾಬಿಯ ಬೆಳೆಗ ಬರುವುದಾದರೆ ಈ ಗುಲಾಬಿ ಖರೀದಿಸಬೇಕೆಂದರೆ  112 ಕೋಟಿ ರೂ.  ವ್ಯಯಿಸಬೇಕಾಗುತ್ತದೆ. 


15 ವರ್ಷಗಳೇ ಬೇಕಾಯಿತು ಜೂಲಿಯೆಟ್ ರೋಸ್ ಅರಳಲು :
ಆಸ್ಟಿನ್ ಎಂಬ ವ್ಯಕ್ತಿ ಮೊದಲ ಬಾರಿಗೆ ಜೂಲಿಯೆಟ್ ರೋಸ್ ಕೃಷಿಯನ್ನು ಪ್ರಾರಂಭಿಸಿದ್ದರು. ಅವರು ಈ ಗುಲಾಬಿಯನ್ನು ವಿಭಿನ್ನ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸಿದರು. ಹಲವು ಬಗೆಯ ಗುಲಾಬಿಗಳನ್ನು ಬೆರೆಸಿ ಹೊಸ ಬಗೆಯ ಗುಲಾಬಿಯನ್ನು ತಯಾರಿಸಿ ಅದಕ್ಕೆ ಜೂಲಿಯೆಟ್ ಎಂದು ಹೆಸರಿಟ್ಟರು. ಗಅಚ್ಚರಿಯ ವಿಷಯವೆಂದರೆ ಆಸ್ಟಿನ್ ಈ ಗುಲಾಬಿಯನ್ನು ಬೆಳೆಯಲು 15 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಈ ಹೂವು ಮೊಟ್ಟ ಮೊದಲ ಬಾರಿಗೆ  2006 ರಲ್ಲಿ ಪ್ರಪಂಚದ ಮುಂದೆ  ಬಂತು. 


ಇದನ್ನೂ ಓದಿ :  ಒಂದೇ ತಿಂಗಳಿಗೆ ಖಾಲಿಯಾಗುವ ಗ್ಯಾಸ್‌ ಎರಡು ತಿಂಗಳು ಬರಬೇಕೇ? ಜಸ್ಟ್ ಹೀಗೆ ಮಾಡಿ ಸಾಕು!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.