Valentines day Special : ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ಪಾಲಿಗೆ ಇದೊಂದು ಸುದಿನ. ಈ ದಿನ ಅದೆಷ್ಟೋ ಹೊಸ ಜೋಡಿಗಳು ಹುಟ್ಟಿಕೊಳ್ಳುತ್ತವೆ. ತಮ್ಮ ಮನಸಿನ ಭಾವನೆಯನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡವರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ತಮ್ಮ ನೆಚ್ಚಿನ ಹುಡುಗನಿಗೋ ಹುಡುಗಿಗೋ ಮನದ ಭಾವನೆ ವ್ಯಕ್ತಪಡಿಸಿ ಮುಂದಿನ ಜೀವನ ಪಯಣದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವ ಎಂದು ಪ್ರಪೋಸ್ ಮಾಡುತ್ತಾರೆ. ಈ ದಿನ ಮಾಡಿದ ಎಲ್ಲಾ ಪ್ರೋಸೋಸ್ ಯಶಸ್ವಿ ಕಾಣುತ್ತದೆ ಎಂದಲ್ಲ, ಆದರೆ ಮನದ ಭಾವನೆ ಹೊರ ಹಾಕಲು ಇದೊಂದು ದಿನ ಯವಕ ಯುವತಿಯರ ಬಳಿ ಇದೆ.
ಇನ್ನು ಮೊದಲೇ ಪ್ರೇಮಿಗಳಾದರೆ ಈ ದಿನದಂದು ತಮ್ಮ ಪ್ರೀತಿಯನ್ನು ಸಾಬೀತು ಪಡಿಸುವ ಕಸರತ್ತು ಕೂಡಾ ನಡೆಯುತ್ತದೆ. ಶುಭಾಶಯ ಪತ್ರಗಳ ವಿನಿಮಯ, ಬೇರೆ ಬೇರೆ ರೀತಿಯ ಗಿಫ್ಟ್ ಗಳು, ಹೂ ಗುಚ್ಛ, ನೆಚ್ಚಿನ ತಾಣದಲ್ಲಿ ಊಟ, ಸಮಯ ಕಳೆಯುವುದು ಹೀಗೆ ಪ್ರೇಮಿಗಳ ದಿನ ಬಂತೆಂದರೆ ಪ್ರೇಮಿಗಳ ಪಾಲಿಗೆ ಅದೊಂದು ಹಬ್ಬವೇ ಸರಿ.
ಇದನ್ನೂ ಓದಿ : ವ್ಯಾಲೆಂಟೈನ್ಸ್ ಡೇ- ರೋಸ್ ಡೇಯಂದು ರಾಶಿಗನುಗುಣವಾಗಿ ನಿಮ್ಮ ಪ್ರೇಮಿಗೆ ಯಾವ ಬಣ್ಣದ ರೋಸ್ ನೀಡಬೇಕು
ಪ್ರೇಮಿಗಳ ದಿನ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ ನಿಜ. ಆದರೆ ಕಳೆದುಹೋದ ಪ್ರೀತಿ ಮತ್ತು ಒಡೆದ ಹೃದಯಗಳ ದುಃಖವನ್ನು ಇಮ್ಮಡಿಗೊಳಿಸುತ್ತದೆ ಎನ್ನುವುದು ಕೂಡಾ ಅಷ್ಟೇ ಸತ್ಯ.
ಎದುರಿಗಿರುವವರ ನಡೆ, ನೋಟ, ಸ್ಟೈಲ್, ಬಟ್ಟೆ, ಇತ್ಯಾದಿಗಳನ್ನು ನೋಡಿದಾಗ ಮನದಲ್ಲಿ ಒಂದಿಷ್ಟು ಆಕರ್ಷಣೆ ಮೂಡುವುದು ಸಹಜ. ಇದನ್ನೇ ಪ್ರೀತಿ ಎಂದು ಭಾವಿಸಿ ಬೀಚ್, ಪಾರ್ಕ್, ಹೋಟೆಲ್ ಗಳಿಗೆ ಸುತ್ತಾಡುವುದನ್ನೇ ಪ್ರೀತಿ ಎಂದುಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಅಂತಹ ಆಕರ್ಷಣೆಗೆ ಒಳಗಾದ ಜೋಡಿಗಳು ಆಕರ್ಷಣೆಗೆ ಒಳಗಾದಷ್ಟೇ ಬೇಗ ವಿರುದ್ದ ದಿಕ್ಕಿನಲ್ಲಿ ಹೆಜ್ಜೆ ಹಾಕಲು ಆರಂಭಿಸುತ್ತಾರೆ.
ಇದನ್ನೂ ಓದಿ : ಬೆಳಗೆ ಎದ್ದಕ್ಷಣ ತಿಳಿದು ಅಥವಾ ತಿಳಿಯದೆ ನೀವೂ ಈ ತಪ್ಪು ಮಾಡುತ್ತೀರಾ? ನಾಳೆಯಿಂದಲೇ ಬಿಟ್ಟುಬಿಡಿ
ಪ್ರೀತಿ ಒಂದು ಭಾವನೆ, ಅದನ್ನು ಅನುಭವಿಸಿದಾಗ, ಅದರೊಳಗಿನ ಸಂತೋಷ, ದುಃಖ ಎಲ್ಲವೂ ತಿಳಿಯುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಾಗ ಮಾತ್ರ ಆ ಸಂಬಂಧ ಗಟ್ಟಿಯಾಗಿರಲು ಸಾಧ್ಯ.
ಅವಕಾಶವಾದಿ ಮತ್ತು ಸ್ವಾರ್ಥ ಪ್ರೀತಿ ಎಂದಿಗೂ ಗೆಲ್ಲಲ್ಲು ಸಾಧ್ಯವಿಲ್ಲ.
ಈ ಪ್ರೇಮಿಗಳ ದಿನವನ್ನು ಮರೆಯಲಾಗದಂತೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ:
- ನಿಮ್ಮ ಗೆಳತಿಯನ್ನು ಹೊರಗೆ ಕರೆದುಕೊಂಡು ಹೋಗಿ. ಜೀವನದಲ್ಲಿ ಎಂಥ ಪರಿಸ್ಥಿತಿಯೇ ಬಂದರೂ ಜೊತೆಯಾಗಿರುತ್ತೇನೆ ಎನ್ನುವುದನ್ನು ಮನದಟ್ಟು ಮಾಡಿ.
- ನೀವು ಪ್ರೀತಿಸುವ ಪ್ರೇಮಿಸುವ ಜೀವಕ್ಕಾಗಿ ಹೃದಯದಿಂದ ಎರಡು ಸಾಲುಗಳನ್ನು ಬರೆಯಿರಿ.
- ನಿಮ್ಮ ಸಂಗಾತಿಯನ್ನು ಅವರ ನೆಚ್ಚಿನ ಸ್ಥಳಕ್ಕೆ ಕರೆದುಕೊಂಡು ಹೋಗಿ.
- ನಿಮ್ಮ ಮುಂದಿನ ದಿನಗಳು ಅದ್ಬುತವಾಗಿರಲು ಏನು ಮಾಡಬಹುದು ಎನ್ನುವುದನ್ನು ಚರ್ಚಿಸಿ.
- ನಿಮ ಸಂಗಾತಿಯ ಜೊತೆ ಒಂದಷ್ಟು ದೂರ ಹೆಜ್ಜೆ ಹಾಕಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.