ಬೆಂಗಳೂರು : ಜ್ಯೋತಿಷ್ಯದಲ್ಲಿ (Astrology)ರಾಶಿಚಕ್ರದ ಸ್ವರೂಪವನ್ನು ವಿವರವಾಗಿ ವಿವರಿಸಲಾಗಿದೆ. ಗ್ರಹಗಳ ಚಲನೆ ಮತ್ತು ಸ್ಥಾನವು ರಾಶಿಚಕ್ರದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಂದು ರಾಶಿಯವರು (Zodiac sign)ಕೂಡಾ ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ.  


COMMERCIAL BREAK
SCROLL TO CONTINUE READING

ಕೆಲವು ರಾಶಿಯವರು ಹೆಚ್ಚು ಖರ್ಚು ಮಾಡುತ್ತಾರೆ ಇನ್ನು ಕೆಲವರು ಜಿಪುಣರಾಗುತ್ತಾರೆ. ಕೆಲವರು ತಮ್ಮ ಹಣವನ್ನು ತಮಗಾಗಿ  ಮಾತ್ರ ಖರ್ಚು ಮಾಡಿದರೆ ಮತ್ತೆ ಕೆಲವರು ಇತರರಿಗಾಗಿ ಖರ್ಚು ಮಾಡುವಲ್ಲಿಯೂ ಹಿಂದೆ ಮುಂದೆ ಯೋಚಿಸುವುದಿಲ್ಲ. 


ಇದನ್ನೂ ಓದಿ : Hindu New Year: 1500 ವರ್ಷಗಳ ಬಳಿಕ ಈ ಶುಭಯೋಗ ಸೃಷ್ಟಿ, ಯಾರಿಗೆ ಲಾಭ?


ಇಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡುವ ರಾಶಿ ಚಕ್ರಗಳ (Zodiac sign) ಬಗ್ಗೆ ಹೇಳಲಾಗಿದೆ. ಈ ರಾಶಿಯವರಿಗೆ ಹಣವನ್ನು ಹೇಗೆ ಉಳಿಸಬೇಕೆಂಬುದೇ ಗೊತ್ತಿಲ್ಲ.  ಈ ರಾಶಿಯವರು ಎಷ್ಟೇ ದುಡಿದರೂ, ಎಷ್ಟೇ ಹಣ ಉಳಿಸಬೇಕು ಅಂದು ಕೊಂಡರೂ ಅವರ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಅವರ ಜೀವನದಲ್ಲಿ ಖರ್ಚು ಕಡಿಮೆಯಾಗುವುದೇ ಇಲ್ಲ. 


ಮೇಷ:
ಮೇಷ ರಾಶಿಯವರು (Aries)ತಮಗಿಂತ ಸ್ನೇಹಿತರಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಅವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರಿತ್ತಾರೆ. ಅನೇಕ ಜನರು ಮೇಷ ರಾಶಿಯವರ ಈ ಅಭ್ಯಾಸದ ಲಾಭವನ್ನು ಪಡೆಯುತ್ತಾರೆ. ಅವರ ಹೃದಯ ಕೋಮಲವಾಗರುತ್ತದೆ. ಎಲ್ಲರ ಬಗ್ಗೆಯೂ ಕರುಣೆ ತೋರುತ್ತಾರೆ. ಅವರು ಭಾವನಾತ್ಮಕವಾಗಿದ್ದು, ಸುಲಭವಾಗಿ ಅವರನ್ನು ಮೋಸಗೊಳಿಸಬಹುದು. 


ಕಟಕ:
ಕಟಕ ರಾಶಿಚಕ್ರ (Cancer) ಜನರು ಸ್ವಾಭಾವಿಕವಾಗಿ ಹೆಚ್ಚು ಖರ್ಚು ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಸಮುದಾಯದಲ್ಲಿ ತಮ್ಮ ಸ್ಥಾನಮಾನವನ್ನು ಹೆಚ್ಚಿಸಲು ಹೆಚ್ಚು ಖರ್ಚು ಮಾಡುತ್ತಾರೆ. ತಮ್ಮ ಜೀವನದಲ್ಲಿ ಯಾವುದೇ ವಿಷಯಗಳ ಕೊರತೆಯನ್ನು ಅವರು ಇಷ್ಟಪಡುವುದಿಲ್ಲ. ತಮ್ಮ ಸ್ನೇಹಿತರಿಗಾಗಿಯೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಕಈ ರಾಶಿಯವರ ಈ ಗುಣವನ್ನು ಬಳಸಿಕೊಂಡು ಕೆಲವರು ಇವರನ್ನು ವಂಚಿಸುತ್ತಾರೆ.  


ಇದನ್ನೂ ಓದಿ : ಏಪ್ರಿಲ್ 12 ರವರೆಗೆ ಈ ರಾಶಿಯವರು ಅತಿ ಜಾಗರೂಕತೆಯಿಂದ ಇರಬೇಕು..! ಅಸ್ತನಾಗಿರುವ ಬುಧ ನೀಡಲಿದ್ದಾನೆ ಸಂಕಷ್ಟ


ಧನು ರಾಶಿ :
ಧನು ರಾಶಿಯವರು (Sagitarius) ಹಣ ಸಂಪಾದಿಸಲು ಶ್ರಮಿಸುತ್ತಾರೆ.  ಆದರೆ ಹಣವನ್ನು ಉಳಿಸುವುದು ಇವರಿಂದ ಸಾಧ್ಯವಾಗುವುದಿಲ್ಲ. ಪ್ರತಿ ಬಾರಿಯೂ  ಧನು ರಾಶಿಯವರು ಹಣವನ್ನು ಉಳಿಸಲು ಬಯಸುತ್ತಾರೆ. ಆದರೆ ಅವರು ಇದರಲ್ಲಿ ವಿಫಲರಾಗುತ್ತಾರೆ. ಆದರೂ ಅವರ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. 


ಮೀನ:
ಈ ರಾಶಿಯವರಿಗೂ ಹೆಚ್ಚು ಖರ್ಚು ಮಾಡುವ ಅಭ್ಯಾಸಗಳಿರುತ್ತವೆ. ಅವರ ವೆಚ್ಚಗಳು ಯಾವಾಗಲೂ ಅವರ ಬಜೆಟ್‌ಗಿಂತ ಹೆಚ್ಚಾಗಿರುತ್ತದೆ. ಅವರು ಗಳಿಸಿದ್ದನ್ನು ತಮ್ಮ ಮತ್ತು ತಮ್ಮ ಸ್ನೇಹಿತರಿಗಾಗಿ ಖರ್ಚು ಮಾಡುತ್ತಾರೆ. ಮೀನ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಹೆಚ್ಚು ಹಣ ಖರ್ಚು ಮಾಡುವುದರಿಂದ ಅವರು ಹೆಚ್ಚು ಶ್ರೀಮಂತರಾಗಲು ಸಾಧ್ಯವಾಗುತವುದಿಲ್ಲ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.