Hindu New Year: 1500 ವರ್ಷಗಳ ಬಳಿಕ ಈ ಶುಭಯೋಗ ಸೃಷ್ಟಿ, ಯಾರಿಗೆ ಲಾಭ?

Hindu New Year 2022 - ಹಿಂದೂ ಹೊಸವರ್ಷ 2079 ಆರಂಭದ ಸಂದರ್ಭದಲ್ಲಿ ಗ್ರಹಗಳ ವಿಶೇಷ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಈ ಗ್ರಹಗಳ ಸ್ಥಿತಿ ಸುದೀರ್ಘ 1500 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದ್ದು, ಈ ಸ್ಥಿತಿ ಸಾಮಾನ್ಯ ಜನರಿಂದ ಹಿಡಿದು ದೇಶದ ಒಟ್ಟಾರೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರಲಿದೆ.  

Written by - Nitin Tabib | Last Updated : Mar 29, 2022, 01:59 PM IST
  • ಏಪ್ರಿಲ್ 2ರಂದು ಗ್ರಹಗಳ ಈ ವಿಶಿಷ್ಠ ಯೋಗ ನಿರ್ಮಾಣಗೊಳ್ಳುತ್ತಿದೆ.
  • ಇದೇ ದಿನದಿಂದ ಹಿಂದೂ ಹೊಸವರ್ಷ ಆರಂಭಗೊಳ್ಳುತ್ತಿದೆ.
  • ಇದರಿಂದ ಮೂರು ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ ಸಿಗಲಿದೆ.
Hindu New Year: 1500 ವರ್ಷಗಳ ಬಳಿಕ ಈ ಶುಭಯೋಗ ಸೃಷ್ಟಿ, ಯಾರಿಗೆ ಲಾಭ? title=
Hindu New Year 2022

ನವದೆಹಲಿ: Hindu Calendar 2022 - ಹಿಂದೂ ಹೊಸ ವರ್ಷವು ಚೈತ್ರ ಮಾಸದ ಶುಕ್ಲ ಪಕ್ಷದ ಪತಿಪದೆಯಿಂದ ಆರಂಭಗೊಳ್ಳುತ್ತದೆ. ಈ ಬಾರಿ ಏಪ್ರಿಲ್ 2, 2022 (Vikram Samvat 2079 Start Date) ರಿಂದ ಅಂದರೆ ಶನಿವಾರದಿಂದ ಹಿಂದೂ ನವವರ್ಷ (Hindu Nav Varsh 2022) ಆರಂಭಗೊಳ್ಳುತ್ತಿದೆ, ಈ ದಿನದಿಂದ ಚೈತ್ರ ನವರಾತ್ರಿ ಕೂಡ ಆರಂಭವಾಗುತ್ತಿದೆ. ಪ್ರತಿ ಹಿಂದೂ ಹೊಸ ವರ್ಷವು ತನ್ನದೇ ಆದ ರಾಜ, ಮಂತ್ರಿ ಮತ್ತು ಮಂತ್ರಿಮಂಡಲವನ್ನು ಹೊಂದಿರುತ್ತದೆ. ಈ ಬಾರಿ ಹಿಂದೂ ಹೊಸವರ್ಷ 2079 ವಿಕ್ರಂ ಸಂವತ್ಸರದ (Vikram Samva t2079) ಆರಂಭದಲ್ಲಿ ಸೃಷ್ಟಿಯಾಗುತ್ತಿರುವ ಯೋಗ ಸುದೀರ್ಘ 1500 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ
ನೂತನ ವರ್ಷದ ರಾಜ ಶನಿದೇವ

ಹಿಂದೂ ಪಂಚಾಗದ ಪ್ರಕಾರ ಶನಿ ನೂತನವರ್ಷಕ್ಕೆ ರಾಜನಾಗಿರಲಿದ್ದರೆ, ಗುರು ಮಂತ್ರಿಯಾಗಲಿದ್ದಾನೆ. ಗುರು ಮಂತ್ರಿಯಾದ ಸಂದರ್ಭಗಳಲ್ಲಿ ದೇಶದಲ್ಲಿ ಅಶಾಂತಿ ಹಾಗೂ ಅವ್ಯವಸ್ಥೆಗಳು ಹೆಚ್ಚಾಗುತ್ತವೆ. ಧಾರ್ಮಿಕ ಕಾರ್ಯಗಳು ಹೆಚ್ಚಾಗಿ, ಶಿಕ್ಷಣದ ಮಟ್ಟ ಎತ್ತರಕ್ಕೆ ಹೋಗುತ್ತದೆ.

1500 ವರ್ಷಗಳ ಬಳಿಕ ಈ ವಿಶಿಷ್ಟ ಕಾಕತಾಳೀಯ
ಈ ಬಾರಿಯ ಹೊಸ ವರ್ಷದಂದು  (Hindu New Year 2022)ನಿರ್ಮಾಣಗೊಳ್ಳುತ್ತಿರುವ ಗ್ರಹ-ನಕ್ಷತ್ರಗಳ ಸ್ಥಿತಿ ಕೇವಲ ರೋಚಕವಾಗಿರದೇ, ಅತ್ಯಂತ ದುರ್ಲಭ ಕೂಡ ಆಗಿದೆ. ಈ ಕಾಕತಾಳೀಯ 1500 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ. ಅಂದರೆ, ಹೊಸ ವರ್ಷದ ಆರಂಭದಲ್ಲಿ ರೇವತಿ ನಕ್ಷತ್ರ ಹಾಗೂ ಮೂರು ರಾಜಯೋಗಗಳು ಸೃಷ್ಟಿಯಾಗುತ್ತಿವೆ. ಇದಲ್ಲದೆ, ಹೊಸ ವರ್ಷದ ಆರಂಭದಲ್ಲಿ, ಮಂಗಳ ತನ್ನ ಉಚ್ಛ ರಾಶಿಯಲ್ಲಿ ಅಂದರೆ ಮಕರ, ರಾಹು-ಕೇತುಗಳು ಸಹ ತಮ್ಮ ತಮ್ಮ ಉಚ್ಛ ರಾಶಿಗಳಲ್ಲಿ (ವೃಷಭ ಮತ್ತು ವೃಶ್ಚಿಕ) ಇರಲಿವೆ. ಮತ್ತೊಂದೆಡೆ, ಶನಿಯು ತನ್ನದೇ ಆದ ಮಕರ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಈ ಕಾರಣಕ್ಕಾಗಿ, ಹಿಂದೂ ಹೊಸ ವರ್ಷದ ಜಾತಕದಲ್ಲಿ ಶನಿ-ಮಂಗಳದ ಮಂಗಳಕರ ಸಂಯೋಜನೆಯು ರೂಪುಗೊಳ್ಳುತ್ತಿದೆ. ಜ್ಯೋತಿಷಿಗಳ ಪ್ರಕಾರ, ಹಿಂದೂ ಹೊಸ ವರ್ಷದ ಆರಂಭದಲ್ಲಿ 1500 ವರ್ಷಗಳ ಬಳಿಕ ಇಂತಹ ಮಂಗಳಕರ ಗ್ರಹಗಳ ಸಂಯೋಜನೆ ನಿರ್ಮಾಣಗೊಳ್ಳುತ್ತಿದೆ. ಇಂತಹ ಅಪರೂಪದ ಸಂಯೋಜನೆ ಈ ಮೊದಲು 22 ಮಾರ್ಚ್ 459 ರಂದು ರೂಪುಗೊಂಡಿತ್ತು.

ಇದನ್ನೂ ಓದಿ-Chaitra Navaratri 2022: ದೇವಿ ದುರ್ಗೆಯ ಆಗಮನ-ನಿರ್ಗಮನದ ಸವಾರಿ ವಿನಾಶ ಸೂಚಿಸುತ್ತಿದೆ

ಈ ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ
ಹಿಂದೂ ನೂತನ ವರ್ಷದಂದು ಸೃಷ್ಟಿಯಾಗುತ್ತಿರುವ ಈ ವಿಶೇಷ ಕಾಕತಾಳೀಯ, ಮಿಥುನ, ತುಲಾ ಹಾಗೂ ಧನು ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ ನೀಡಲಿದೆ. ಈ ರಾಶಿಗಳ ಜನರಿಗೆ ಧನಲಾಭದ ಜೊತೆಗೆ ಪ್ರಗತಿ ಪ್ರಾಪ್ತಿಯಾಗಲಿದೆ. ಒಳ್ಳೆಯ ಸುದ್ದಿ ಬರಲಿದೆ, ಹೂಡಿಕೆಯಿಂದ ಲಾಭ ಸಿಗಲಿದೆ. ಇನ್ನೊಂದೆಡೆ ದೇಶದಲ್ಲಿನ ಸ್ಥಿತಿಗತಿಯ ಕುರಿತು ಹೇಳುವುದಾದರೆ, ಈ ವರ್ಷ ಜನರ ಕಲ್ಯಾಣಕ್ಕಾಗಿ ಯೋಜನೆಗಳು ನಿರ್ಮಾಣಗೊಳ್ಳಲಿವೆ. ಹಲವು ಜನರ ಪಾಲಿಗೆ ಈ ವರ್ಷ ದೊಡ್ಡ ಬದಲಾವಣೆಯನ್ನು ತರುವ ವರ್ಷ ಸಾಬೇತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-Chanakya Niti: ಇಂತಹ ಜನರ ಮಧ್ಯೆ ಎಂದಿಗೂ ಇರಬೇಡಿ, ಇಲ್ದಿದ್ರೆ ಲೈಫ್ ಲಾಂಗ್ ದುಃಖದಲ್ಲಿರಬೇಕಾಗುತ್ತದೆ

(Declaimer : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News