Success Mantra: ದೇವಿ ಲಕ್ಷ್ಮಿಯ ಆಶಿರ್ವಾದದಿಂದ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಎಂದು ಚಾಣಕ್ಯನ ಚಾಣಕ್ಯ ನೀತಿ (Chanakya Niti) ಸಾರುತ್ತದೆ. ಭೌತಿಕ ಜೀವನವನ್ನು ಸರಳವಾಗಿಡಲು ನೀವು ಬಯಸುತ್ತಿದ್ದರೆ, ದೇವಿ ಲಕ್ಷ್ಮಿಯ (Godess Lakshmi) ಆಶೀರ್ವಾದ ಪಡೆಯಲು ನೀವು ಬಯಸಿ. ದೇವಿ ಲಕ್ಷ್ಮಿ ಹಣದ ದೇವತೆಯಾಗಿದ್ದಾಳೆ. ಹಣ ಜೀವನದ ದಾರಿಯಲ್ಲಿ ಬರುವ ಕಠಿಣ ಪರಿಸ್ಥಿತಿಯನ್ನು ನಿವಾರಿಸುತ್ತದೆ. 


COMMERCIAL BREAK
SCROLL TO CONTINUE READING

ವಿದ್ವಾಂಸರು ಹೇಳುವ ಪ್ರಕಾರ, ಹಣಕಾಸಿನ ವಿಷಯದಲ್ಲಿ ಜಾಗ್ರತರಾಗಿರುವುದು ತುಂಬಾ ಅವಶ್ಯಕ. ಹಣದ ಉಪಯೋಗ ಎಚ್ಚರಿಕೆಯಿಂದ ಮಾಡದೆ ಹೋದಲ್ಲಿ ಅದು ನಷ್ಟವಾಗುತ್ತದೆ. ದೇವಿ ಲಕ್ಷ್ಮಿ ತುಂಬಾ ಚಂಚಲೆಯಾಗಿದ್ದಾಳೆ ಎಂದು ಚಾಣಕ್ಯರು ಕೂಡ ನಂಬಿದ್ದರು. ಹೀಗಾಗಿ ಲಕ್ಷ್ಮಮ್ಮನ ಆಶೀರ್ವಾದ ಪಡೆದ ವ್ಯಕ್ತಿ ಅಹಂಕಾರದಿಂದ ದೂರ ಇರಬೇಕು. ಏಕೆಂದರೆ ಕೆಟ್ಟ ಗಳಿಗೆ ಎಂದಿಗೂ ಹೇಳಿ ಬರುವುದಿಲ್ಲ. ಇದು ಯಾರ ಜೀವನದಲ್ಲಿಯೂ ಕೂಡ ಎಂಟ್ರಿ ನೀಡಬಹುದು. ಹೀಗಾಗಿ ಜೀವನದಲ್ಲಿ ಹಣ ಬಂದರೆ ವ್ಯಕ್ತಿ ಕರುಣೆ ಹಾಗೂ ವಿನಮ್ರತೆಯನ್ನು ತ್ಯಜಿಸಬಾರದು.


ದೇವಿ ಲಕುಮಿಯನ್ನು ಪ್ರಸನ್ನಗೊಳಿಸಲು ಕೆಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಆವಶ್ಯಕ. ವಿದ್ವಾಂಸರು ಹೇಳುವ ಪ್ರಕಾರ ದೇವಿ ಲಕುಮಿಗೆ ಪರಿಶ್ರಮ ತುಂಬಾ ಇಷ್ಟ. ಅಂದರೆ, ದೇವಿ ಲಕುಮಿಯನ್ನು ಪ್ರಸನ್ನಗೊಳಿಸಲು ಪರಿಶ್ರಮದಿಂದ ಹಿಂಜರಿಯಬಾರದು. ಇದರ ಜೊತೆಗೆ ಕೆಲ ಸಂಗತಿಗಳನ್ನು ಗಮನದಲ್ಲಿಡುವುದು ಅವಶ್ಯಕ.


ಇದನ್ನೂ ಓದಿ-Good day for Haircut : ನೀವು ಯಾವ ದಿನ ಹೇರ್ ಕಟ್ ಮಾಡಿಸುತ್ತೀರಾ..?


ಆಮೀಷ
ಲೋಭ ಎಲ್ಲ ಪ್ರಕಾರದ ದುಃಖಗಳಿಗೆ ಕಾರಣ. ವ್ಯಕ್ತಿಗಳು ಲೋಭದಿಂದ ದೂರವಿರಲು ಪ್ರಯತ್ನಿಸಬೇಕು. ಲೋಭದ ಪಾಷಾಣಕ್ಕೆ ಸಿಲುಕಿರುವ ವ್ಯಕ್ತಿ ಸ್ವಾರ್ಥಿಯಾಗುತ್ತಾನೆ. ಸ್ವಾರ್ಥದ ಹಿನ್ನೆಲೆ ವ್ಯಕ್ತಿಗಳು ತಪ್ಪು ಕೆಲಸಕ್ಕೆ ಕೈ ಹಾಕುತ್ತಾರೆ. ಈ ಸ್ಥಿತಿಯಿಂದ ದೂರ ಉಳಿಯಲು ಪ್ರಯತ್ನಿಸಿ. ಲೋಭ ರಹಿತ ವ್ಯಕ್ತಿಗೆ ದೇವಿ ಲಕುಮಿ ತನ್ನ ಆಶೀರ್ವಾದ ನೀಡುತ್ತಾಳೆ.


ಇದನ್ನೂ ಓದಿ-Lucky Colour Dress: ನಿಮ್ಮ ಕೆಲಸ ಆಗಬೇಕೆ? ಹಾಗಿದ್ರೆ ಈ ರಾಶಿಯವರು ಈ ಕಲರ್ ಬಟ್ಟೆ ಧರಿಸಿ!


ಹಣದ ತಪ್ಪು ಉಪಯೋಗ ಮಾಡಬೇಡಿ
ಹಣವನ್ನು ತಪ್ಪು ಕಾರ್ಯಗಳಿಗೆ ಉಪಯೋಗಿಸಬೇಡಿ. ವಿದ್ವಾಂಸರು ಹೇಳುವ ಪ್ರಕಾರ, ಇತರರಿಗೆ ಕೇಡು ಬಯಸಿ ಹಣವನ್ನು ವೆಚ್ಚ ಮಾಡಿದರೆ ಅದು ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ. ಬಳಿಕ ಕಷ್ಟಗಳು ಎದುರಾಗುತ್ತವೆ. ಹೀಗಾಗಿ ಹಣವನ್ನು ತಪ್ಪು ಕಾರ್ಯಕ್ಕೆ ಬಳಸುವುದನ್ನು ತಪ್ಪಿಸಬೇಕು.


ಇದನ್ನೂ ಓದಿ-Monday Fasting: ಸೋಮವಾರ 'ಉಪವಾಸ ವ್ರತ' ಮಾಡುವುದರಿಂದ ಸಂಪತ್ತು ಪ್ರಾಪ್ತಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ