ತೂಕ ನಷ್ಟದ ಸಮಯದಲ್ಲಿ ಮಾಡುವ ತಪ್ಪುಗಳು: ಸಾಮಾನ್ಯವಾಗಿ ಜನರು ತೂಕವನ್ನು ಕಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆಹಾರ ಕ್ರಮದಿಂದ ವ್ಯಾಯಾಮದವರೆಗೆ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಆದಾಗ್ಯೂ, ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ತೂಕವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುವುದರ ಹಿಂದೆ ಹಲವು ಕಾರಣಗಳಿವೆ. ವಾಸ್ತವವಾಗಿ, ತೂಕ ಇಳಿಸುವ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ಈ ತಪ್ಪುಗಳಿಂದಾಗಿ ನಿಮ್ಮ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯೂ ಇದೆ. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ..


COMMERCIAL BREAK
SCROLL TO CONTINUE READING

ತೂಕ ಇಳಿಕೆ ಸಮಯದಲ್ಲಿ ಈ ತಪ್ಪುಗಳಾಗದಂತೆ ನಿಗಾವಹಿಸಿ:
ದಿನವು ಉತ್ತಮವಾಗಿ ಪ್ರಾರಂಭವಾದರೆ ಇಡೀ ದಿನವು ಉತ್ತಮವಾಗಿ ನಡೆಯುತ್ತದೆ ಎಂದು ನಂಬಲಾಗಿದೆ. ನಮ್ಮ ಆರೋಗ್ಯದ ವಿಷಯವು ಇದಕ್ಕೆ ಹೊರತಾಗಿಲ್ಲ. ದಿನದ ಮೊದಲ ಆಹಾರವು ಸರಿಯಾದ ಮತ್ತು ಪೌಷ್ಟಿಕವಾಗಿದ್ದರೆ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.  


ಇದನ್ನೂ ಓದಿ- Heart Attack Risk: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ ಈ ಎಲೆಗಳು


ಬೆಳಗಿನ ಉಪಹಾರವನ್ನು ಬಿಡಬೇಡಿ:
ತೂಕ ಕಳೆದುಕೊಳ್ಳಲು ಇಚ್ಚಿಸುವವರು ಸಾಮಾನ್ಯವಾಗಿ ಬೆಳಗಿನ ಉಪಹಾರವನ್ನು ಬಿಡುತ್ತಾರೆ. ಇದರಿಂದಾಗಿ ಅವರ ತೂಕ ಕಡಿಮೆಯಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ, ಇದರಿಂದಾಗಿ ನಿಮ್ಮ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗಲು ಪ್ರಾರಂಭಿಸುತ್ತದೆ. ದೇಹಕ್ಕೆ ಅಗತ್ಯ ಶಕ್ತಿಯ ಕೊರತೆಯಿಂದಾಗಿ ತೂಕ ಹೆಚ್ಚಾಗಬಹುದು. ನೀವು ದಣಿದ ಅನುಭವವನ್ನು ಅನುಭವಿಸಬಹುದು. ಹಾಗಾಗಿ ನಿತ್ಯ ಬೆಳಗಿನ ಉಪಾಹಾರದ ಬಗ್ಗೆ ಗಮನಹರಿಸಿ.


ಸಮಯಕ್ಕೆ ಸರಿಯಾಗಿ ಮಲಗಿ:
ಕೆಲವರಿಗೆ ತಡವಾಗಿ ಮಲಗುವ ಅಭ್ಯಾಸವಿರುತ್ತದೆ, ಇದರಿಂದ ಅವರು ಬೆಳಿಗ್ಗೆ ತಡವಾಗಿ ಏಳುತ್ತಾರೆ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಬೆಳಿಗ್ಗೆ ತಡವಾಗಿ ಏಳುವುದರಿಂದ ಬೆಳಗಿನ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಸರಿಯಾದ ಸಮಯಕ್ಕೆ ತಿಂಡಿಯನ್ನೂ ತಿನ್ನುವುದಿಲ್ಲ. ಇದು ತೂಕ ಹೆಚ್ಚಳದ ಮೇಲೂ ಪರಿಣಾಮ ಬೀರುತ್ತದೆ.


ಇದನ್ನೂ ಓದಿ- ಹಾರ್ಟ್ ಅಟ್ಯಾಕ್ ಅಪಾಯವನ್ನು ಕಡಿಮೆ ಮಾಡುತ್ತದೆ ಈ ಸೊಪ್ಪು ..!


ಆಹಾರಪದ್ಧತಿ:
ಪ್ರತಿಯೊಬ್ಬರ ಜೀವನದಲ್ಲಿ ಆಹಾರ ಕ್ರಮ ಅಥವಾ ಆಹಾರ ಪದ್ಧತಿಯು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ನಮ್ಮ ಆಹಾರ ಪದ್ಧತಿ ಕೂಡ ಆರೋಗ್ಯಕರವಾಗಿರಬೇಕು. ಅದೇ ಸಮಯದಲ್ಲಿ, ನಾವು ನಮ್ಮ ಆಹಾರದಲ್ಲಿ ಪೌಷ್ಠಿಕಾಂಶದ ಆಹಾರವನ್ನು ಸೇವಿಸಬೇಕು. ಹೆಚ್ಚಾಗಿ ಹೊರಗಿನ ಆಹಾರವನ್ನು ಸೇವಿಸಬಾರದು. ಇದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಮಾತ್ರವಲ್ಲ ತೂಕವನ್ನೂ ಹೆಚ್ಚಿಸುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.