Heart Attack Risk: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ ಈ ಎಲೆಗಳು

Heart Attack Risk: ಬೇವಿನ ಎಲೆಯಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?  ಹೃದಯದ ಆರೋಗ್ಯಕ್ಕಾಗಿ ಬೇವಿನ ಎಲೆಗಳನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

Written by - Yashaswini V | Last Updated : Jun 21, 2022, 11:22 AM IST
  • ಬೇವಿನ ಬೀಜಗಳಿಂದ ಹೊರತೆಗೆಯಲಾದ ಬೇವಿನ ಎಣ್ಣೆಯು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ
  • ಇದು ಸೌಂದರ್ಯವರ್ಧಕಗಳು ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಉತ್ತಮ ಘಟಕಾಂಶವಾಗಿದೆ
  • ಇದನ್ನು ಅತ್ಯುತ್ತಮ ಸೊಳ್ಳೆ ನಿವಾರಕ ಎಂದೂ ಹೇಳಲಾಗುತ್ತದೆ
Heart Attack Risk: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ ಈ ಎಲೆಗಳು title=
Neem Health Benefits

ಹೃದಯಾಘಾತದ ಅಪಾಯ: ಆಯುರ್ವೇದದಲ್ಲಿ ಕೆಲವು ಎಲೆಗಳನ್ನು ಬಳಸಲಾಗುತ್ತದೆ. ಅವುಗಳನ್ನು ಔಷಧೀಯ ಎಲೆಗಳು ಎಂದೂ ಸಹ ಪರಿಗಣಿಸಲಾಗಿದೆ. ಅಂತಹ ಎಲೆಗಳಲ್ಲಿ ಒಂದು ಬೇವಿ ಎಲೆ. ಬೇವಿನ ಪ್ರಯೋಜನಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ.  ಸಾಂಪ್ರದಾಯಿಕ ಔಷಧದಲ್ಲಿ ಈ ಮರದ ವಿವಿಧ ಭಾಗಗಳನ್ನು ದೀರ್ಘಕಾಲ ಬಳಸಲಾಗಿದೆ. ಐತಿಹಾಸಿಕವಾಗಿ, ಇದನ್ನು ನೋವು, ಜ್ವರ ಮತ್ತು ಸೋಂಕಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ, ಹಲ್ಲುಗಳನ್ನು ಸ್ವಚ್ಛಗೊಳಿಸಲು ಅದರ ಕೊಂಬೆಗಳನ್ನು ಬಳಸಲಾಗುತ್ತದೆ. ಈ ಎಲೆಯನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬೇವಿನ ಎಲೆಗಳು ಹೃದಯವನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಕಾಯಿಲೆಗಳಿಂದಲೂ ಕೂಡ ನಿಮ್ಮನ್ನು ದೂರವಿಡುತ್ತದೆ. 

"ಗ್ರಾಮ ಔಷಧಾಲಯ" ಎಂದು ಕರೆಯಲ್ಪಡುವ ಬೇವು ಒಂದು ವಿಶಿಷ್ಟವಾದ ಔಷಧೀಯ ಸಸ್ಯವಾಗಿದ್ದು, ಅದರ ಎಲ್ಲಾ ಭಾಗಗಳನ್ನು ಅಂದರೆ ಅದರ ಎಲೆಗಳು, ಹೂವುಗಳು, ಬೀಜಗಳು, ಹಣ್ಣುಗಳು, ಬೇರುಗಳು ಮತ್ತು ತೊಗಟೆ ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ.  ಇದರ ಹೂವುಗಳನ್ನು ಪಿತ್ತರಸ ನಾಳದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು, ಅದರ ಎಲೆಗಳನ್ನು ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಮತ್ತು ತೊಗಟೆಯನ್ನು ಮೆದುಳಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. 
 
ಇದನ್ನೂ ಓದಿ- 
Cholesterol Lowering Diet: ಈ ಡ್ರೈ ಫ್ರೂಟ್ ತಿಂದರೆ ಹೆಚ್ಚಾಗುವುದಿಲ್ಲ ಕೊಲೆಸ್ಟ್ರಾಲ್

ಬೇವಿನ ಎಲೆಗಳ ಪ್ರಯೋಜನಗಳು:-
* ಬೇವಿನ ಎಲೆಗಳನ್ನು ಕುಷ್ಠರೋಗಕ್ಕೂ ಬಳಸಲಾಗುತ್ತದೆ. 
* ಇದರ ಬಳಕೆಯಿಂದ ದೃಷ್ಟಿಯೂ ಚುರುಕಾಗುತ್ತದೆ. 
* ಇದಲ್ಲದೇ ಕರುಳು ಹುಳುಗಳು, ಹೊಟ್ಟೆನೋವು, ಹಸಿವಾಗದಿರುವುದು, ಚರ್ಮದ ಹುಣ್ಣುಗಳಂತಹ ರೋಗಗಳಿಗೂ ಬೇವಿನ ಎಲೆಗಳು ಪರಿಹಾರ ನೀಡುತ್ತವೆ ಎಂದು ಹೇಳಲಾಗುತ್ತದೆ.
* ವಾಸ್ತವವಾಗಿ, ಅಧ್ಯಯನಗಳು ಬೇವಿನ ಎಣ್ಣೆಯ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆಗಳ ವಿರುದ್ಧ ಹೋರಾಡುತ್ತವೆ ಎಂದು ಸೂಚಿಸುತ್ತವೆ. 
* ಬೇವು ಕೂದಲು, ಚರ್ಮ, ಹಲ್ಲು, ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಪ್ರಯೋಜನಗಳನ್ನು ನೀಡುತ್ತದೆ.
* ಮೌಖಿಕ ನೈರ್ಮಲ್ಯವನ್ನು ಉತ್ತೇಜಿಸಲು ಬೇವಿನ ತೊಗಟೆಯನ್ನು ಜಗಿಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
* ಬೇವಿನ ಬೀಜಗಳಿಂದ ಹೊರತೆಗೆಯಲಾದ ಬೇವಿನ ಎಣ್ಣೆಯು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.
* ಇದು ಸೌಂದರ್ಯವರ್ಧಕಗಳು ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಉತ್ತಮ ಘಟಕಾಂಶವಾಗಿದೆ

ಇದನ್ನೂ ಓದಿ- Diabetes: ಸಕ್ಕರೆ ಕಾಯಿಲೆಯಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗಬಹುದು

ಬೇವಿನ ಎಲೆಗಳನ್ನು ಹೇಗೆ ಬಳಸುವುದು?
ಬೇವಿನ ಎಲೆಗಳು ತುಂಬಾ ಕಹಿ ಆಗಿರುತ್ತವೆ. ಹಾಗಾಗಿ ಬಹುತೇಕ ಜನರು ಬೇವಿನ ಎಲೆಗಳನ್ನು ಸೇವಿಸಲು ಇಷ್ಟಪಡುವುದಿಲ್ಲ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ನೀವು ಬೇವಿನ ಎಲೆಗಳನ್ನು ಕುದಿಸಿ ಅದರ ನೀರನ್ನು ಸೇವಿಸಬಹುದು. ಇದಲ್ಲದೆ, ನೀವು ಬೇವಿನ ಎಲೆಗಳಿಂದ ಮಾಡಿದ ಚಹಾವನ್ನು ಸಹ ಕುಡಿಯಬಹುದು.  

ಇದಲ್ಲದೇ ಚರ್ಮ ಸಂಬಂಧಿ ಸಮಸ್ಯೆ ಇರುವವರು ಬೇವಿನ ಸೊಪ್ಪನ್ನು ಬಳಸಬಹುದು. ಇದಕ್ಕಾಗಿ ನೀರಿಗೆ ಬೇವಿನ ಸೊಪ್ಪನ್ನು ಹಾಕಿ ಸ್ನಾನ ಮಾಡಬಹುದು. ಇದರೊಂದಿಗೆ, ಚರ್ಮದ ಮೇಲಿನ ಯಾವುದೇ ರೀತಿಯ ಅಲರ್ಜಿಯನ್ನು ತೆಗೆದುಹಾಕಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News