Snake Amazing Facts in Kannada - ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯನ್ನು ದೇಶಾದ್ಯಂತ ನಾಗರ ಪಂಚಮಿ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ನಾಗ ದೇವರಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಗುತ್ತದೆ. ವರ್ಷ 2022ರ ನಾಗರ ಪಂಚಮಿ ಪರ್ವವನ್ನು ಆಗಸ್ಟ್ 2, 2022 ರಂದು ಅಂದರೆ, ಮಂಗಳವಾರ ಆಚರಿಸಲಾಗುತ್ತಿದೆ. ನಾಗರ ಹಾವಿಗೆ ಸಂಬಂಧಿಸಿದಂತೆ ದೇಶ-ವಿದೇಶಗಳಲ್ಲಿ ಹಲವು ಸಂಗತಿಗಳು ಪ್ರಚಲಿತದಲ್ಲಿವೆ. ಅಷ್ಟೇ ಯಾಕೆ ತೆವಳಿಕೊಂಡು ಹೋಗುವ ಈ ಜೀವದ ಕುರಿತು ಆದಷ್ಟು ಹೆಚ್ಚಿಗೆ ತಿಳಿದುಕೊಳ್ಳುವ ಜಿಜ್ನಾಸೆ ಹಲವರ ಮನಸ್ಸಿನಲ್ಲಿರುತ್ತದೆ. ಹಾಗಾದರೆ ಬನ್ನಿ ಈ ಸಂದರ್ಭದಲ್ಲಿ ಹಾವುಗಳಿಗೆ ಸಂಬಂಧಿಸಿದ ಮತ್ತು ಬಹುತೇಕರಿಗೆ ತಿಳಿಯದ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.

COMMERCIAL BREAK
SCROLL TO CONTINUE READING

ಹಾವುಗಳಿಗೆ ಸಂಬಂಧಿಸಿದ ಕೆಲ ರೋಚಕ ವಿಷಯಗಳು
>> ಹಾವುಗಳ ಮೊಟ್ಟೆ- ಹಾವುಗಳ ಮೊಟ್ಟೆಗಳನ್ನು ನೋಡಿ ಅವು ಗಂಡು ಹಾವನ್ನು ಹೊಂದಿರುವ ಮೊಟ್ಟೆಗಳು ಇವೆಯಾ ಅಥವಾ ಹೆಣ್ಣು ಹಾವನ್ನು ಮೊಟ್ಟೆಗಳು ಇವೆಯಾ ಎಂಬುದನ್ನು ತಿಳಿದುಕೊಳ್ಳಬಹುದು. ಮೊಟ್ಟೆಗಳು ಒಂದು ವೇಳೆ ಹೊಳೆಯುತ್ತಿದ್ದರೆ ಅವು ಗಂಡು ಹಾವನ್ನು ಹೊಂದಿರುವ ಮೊಟ್ಟೆಗಳಾಗಿವೆ. ಹೊಳೆಯುತ್ತಿಲ್ಲ ಎಂದಾದರೆ ಅವು ಹೆಣ್ಣು ಹಾವಿನ್ನು ಹೊಂದಿರುವ ಮೊಟ್ಟೆಗಳಾಗಿವೆ ಎಂದರ್ಥ.

>> ನಾಗಿಣಿ ಸತತ ಆರು ತಿಂಗಳುಗಳ ಕಾಲ ತನ್ನ ಮೊಟ್ಟೆಗಳಿಗೆ ಕಾವು ಕೊಡುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಅವುಗಳಿಂದ ಮರಿ ಹಾವುಗಳು ಹೊರಬರಲು ಪ್ರಾರಂಭಿಸಿದಾಗ ಅವುಗಳಲ್ಲಿನ ಕೆಲವು ಹಾವುಗಳನ್ನು ತಾನೇ ತಿಂದು ಹಾಕುತ್ತದೆ ಎನ್ನಲಾಗುತ್ತದೆ. ತಾಯಿ ಹಾವಿನ ಕಣ್ಣುಗಳಿಂದ ಬಚಾವಾದ ಮತ್ತು ಅತ್ತಿತ್ತ ಹೊರಳಿದ ಮೊಟ್ಟೆಗಳಿಂದ ಹೊರಬಂದ ಮರಿಗಳು ಮಾತ್ರ ಜೀವದಿಂದ ಉಳಿಯುತ್ತವೆ ಎನ್ನಲಾಗುತ್ತದೆ. 

>> ಹಾವುಗಳು ಕೇವಲ ವರ್ಷಾ ಋತುವಿನಲ್ಲಿ ಮಾತ್ರ ಗರ್ಭಧರಿಸುತ್ತವೆ ಮತ್ತು ಕಾರ್ತಿಕ ಮಾಸದಲ್ಲಿ ಎಲ್ಲಕ್ಕಿಂತ ಹೆಚ್ಚು ಮರಿಗಳು ಮೊಟ್ಟೆಯಿಂದ ಹೊರಬರುತ್ತವೆ. 

>> ಮೊಟ್ಟೆಯಿಂದ ಹೊರಬಂದ ಕೇವಲ ಏಳೇ ದಿನಗಳಲ್ಲಿ ಮರಿಗಳಿಗೆ ಹಲ್ಲು ಬರುತ್ತವೆ ಮತ್ತು 21 ದಿನಗಳ ಬಳಿಕ ಅವುಗಳಲ್ಲಿ ವಿಷ ಕೂಡ ನಿರ್ಮಾಣವಾಗುತ್ತದೆ. ಒಂದು ವೇಳೆ ಹಾವು ಅತ್ಯಂತ ವಿಷಕಾರಿಯಾಗಿದ್ದಾರೆ, ಹುಟ್ಟಿದ ಕೇವಲ 25 ದಿನಗಳ ಬಳಿಕ ಯಾರೊಬ್ಬರ ಪ್ರಾಣ ಹೀರಲು ಅದು ಸಮರ್ಥವಾಗುತ್ತದೆ ಎನ್ನಲಾಗುತ್ತದೆ.

>> ವೈಜ್ಞಾನಿಕ ಮಾಹಿತಿಗಳ ಪ್ರಕಾರ ಹಾವುಗಳು 100 ವರ್ಷಕ್ಕೂ ಅಧಿಕ ಕಾಲ ಬದುಕಬಲ್ಲವು. ಅವುಗಳ ಗರಿಷ್ಠ ವಯಸ್ಸು 120 ವರ್ಷಗಳು ಎನ್ನಲಾಗುತ್ತದೆ. ಆದರೆ, ಹಾವಿನ ಕೆಲವೇ ಕಲ ಪ್ರಜಾತಿಗಳು ಇಷ್ಟೊಂದು ಕಾಲ ಬದುಕುತ್ತವೆ ಎನ್ನಲಾಗಿದೆ.

>> ಕಣ್ಣಿಗೆ ಗೋಚರಿಸದಿದ್ದರೂ ಕೂಡ ಹಾವಿಗೆ ಕಾಲುಗಳಿರುತ್ತವೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಹೌದು, ಅವು ಚಿಕ್ಕದಾಗಿರುವ ಕಾರಣ ಕಣ್ಣಿಗೆ ಕಾಣಿಸುವುದಿಲ್ಲ. ಇದಲ್ಲದೆ ಕೇವಲ ತೆವಳುವಾಗ ಮಾತ್ರ ಅವು ತಮ್ಮ ಕಾಲುಗಳನ್ನು ಹೊರಕ್ಕೆ ತೆಗೆಯುತ್ತವೆ ಮತ್ತು ಉಳಿದ ಎಲ್ಲಾ ಸಮಯಗಳಲ್ಲಿ ಅವುಗಳನ್ನು ದೇಹದೊಳಗೆಯೇ ಇರಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. 


ಇದನ್ನೂ ಓದಿ-VP Election 2022: ಕನ್ನಡತಿ ಮಾರ್ಗಾರೆಟ್ ಆಳ್ವಾ ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ

>> ಹಾವುಗಳ ವಿಷಕಾರಿ ಅಂಶ ಹಾಗೂ ವಯಸ್ಸು ಅವುಗಳ ಜನನ ಸ್ಥಿತಿಯನ್ನು ಆಧರಿಸಿದೆ. ಅವಧಿಗೂ ಮುನ್ನವೇ ಮೊಟ್ಟೆಯಿಂದ ಹೊರಬರುವ ಹಾವಿನ ಗರಿಷ್ಠ ವಯಸ್ಸು 40 ರಿಂದ 45 ಆಗಿರುತ್ತದೆ. ಇದಲ್ಲದೆ ಅದರ ವಿಷವೂ ಕೂಡ ಅಷ್ಟೊಂದು ವಿಷಕಾರಿಯಾಗಿರುವುದಿಲ್ಲ ಮತ್ತು ಅದು ತುಂಬಾ ಪುಕ್ಕಲು ಹಾವಾಗಿರುತ್ತದೆ ಎನ್ನಲಾಗುತ್ತದೆ. 


ಇದನ್ನೂ ಓದಿ-ICSE 10ನೇ ತರಗತಿಯ ಫಲಿತಾಂಶ ಪ್ರಕಟ.. ರಿಸಲ್ಟ್‌ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ