ಬೆಂಗಳೂರು : Name Astrology : ವ್ಯಕ್ತಿಗೆ ಹೆಸರು ಬಹಳ ಮುಖ್ಯ. ಇದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದಲ್ಲದೆ, ಹೆಸರಿನ ಮೊದಲ ಅಕ್ಷರವು ಅವನ ಭವಿಷ್ಯದ ಬಗ್ಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳುತ್ತದೆ. ಜ್ಯೋತಿಷ್ಯದಲ್ಲಿಯೂ ವ್ಯಕ್ತಿಯ ಹೆಸರಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹೆಸರು ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಇಡೀ ಶಾಖೆ ಇದೆ. ಇದನ್ನು ನಾಮ ಜ್ಯೋತಿಷ್ಯ  ಎಂದು ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

A ಅಕ್ಷರದಿಂದ ಆರಂಭವಾಗುವ ಹೆಸರು :  
ಹೆಸರಿನ ಜ್ಯೋತಿಷ್ಯದ ಪ್ರಕಾರ, A ಅಕ್ಷರದಿಂದ  ಹೆಸರು ಆರಂಭವಾಗುವ ಜನರು ಕ್ರಿಯಾ ಶೀಲರು ಮತ್ತು ಶ್ರಮಜೀವಿಗಳು. ಮಾತ್ರವಲ್ಲ ಬುದ್ಧಿವಂತರು ಕೂಡಾ. ಈ ಹೆಸರಿನವರು ಯಾವಾಗಲೂ ಐಷಾರಾಮಿ ಜೀವನವನ್ನು ಬಯಸುತ್ತಾರೆ. ಇದಕ್ಕಾಗಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೂ, ಇವರ ದಾಂಪತ್ಯ ಜೀವನ ಸಂಪೂರ್ಣ ಯಶಸ್ಸು ಆಗದಿರುವ ಕಾರಣ , ಜೀವನದ ಸಂತೋಷವನ್ನು ಅನುಭವಿಸುವುದು ಇವರಿಗೆ ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Vastu Tips for Wind Chimes:ಅದೃಷ್ಟಕ್ಕಾಗಿ ಹಾಕುವ ವಿಂಡ್ ಚೈಮ್ ದುರಾದೃಷ್ಟವನ್ನೂ ತಂದೊಡ್ಡಬಹುದು .! ತಿಳಿದಿರಲಿ ಈ ನಿಯಮ


S ಅಕ್ಷರದಿಂದ ಆರಂಭವಾಗುವ ಹೆಸರು :  
S ಅಕ್ಷರದಿಂದ  ಹೆಸರು ಆರಂಭವಾಗುವ ಜನರು ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ಬಹಳ ಮಹತ್ವಾಕಾಂಕ್ಷೆಯುಳ್ಳವರು. ಸಾಮಾನ್ಯವಾಗಿ ಎಲ್ಲೆಗಳನ್ನು ಮೀರಿ ಮುಂದೆ ಸಾಗಿ ತಮ್ಮದೇ ಆದ ಗುರುತನ್ನು ಮಾಡಿಕೊಳ್ಳುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸುತ್ತಾರೆ. ಸಾಕಷ್ಟು ಖ್ಯಾತಿ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. 


V ಅಕ್ಷರದಿಂದ ಆರಂಭವಾಗುವ ಹೆಸರು :   
V ಅಕ್ಷರದಿಂದ  ಹೆಸರು ಆರಂಭವಾಗುವ  ಜನರು ಹರ್ಷಚಿತ್ತದಿಂದ ಇರುತ್ತಾರೆ  ಮತ್ತು ಸ್ನೇಹಪರರಾಗಿರುತ್ತಾರೆ. ಹಣವನ್ನು ಬುದ್ಧಿವಂತಿಕೆಯಿಂದ ಬಳಸುತ್ತಾರೆ. ಕೆಲಸದಲ್ಲಿಯೂ  ಪ್ರಾಮಾಣಿಕರಾಗಿದ್ದು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಅವರು ಹಣದ ವಿಷಯದಲ್ಲಿ ಅದೃಷ್ಟವಂತರು ಮತ್ತು ಸಾಮಾನ್ಯವಾಗಿ ಬಹಳ ಜನಪ್ರಿಯರಾಗಿರುತ್ತಾರೆ.  


ಇದನ್ನೂ ಓದಿ : ಹುಣ್ಣಿಮೆ ದಿನದಂದು ಚಂದ್ರ ಗ್ರಹಣ: ಈ ವಿಷಯಗಳನ್ನು ತಪ್ಪದೇ ತಿಳಿಯಿರಿ


R ಅಕ್ಷರದಿಂದ ಆರಂಭವಾಗುವ ಹೆಸರು :   
R ಅಕ್ಷರದಿಂದ  ಹೆಸರು ಆರಂಭವಾಗುವ  ಜನರು ದುಬಾರಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಅವರು ಫ್ಯಾಶನ್ ಪ್ರಿಯರು ಕೂಡಾ. ಅವರು ತಮ್ಮ ಸೌಕರ್ಯಗಳಿಗೆ ಮುಕ್ತವಾಗಿ ಖರ್ಚು ಮಾಡುತ್ತಾರೆ ಮತ್ತು ಅದಕ್ಕಾಗಿ ಹಣವನ್ನು ಗಳಿಸಲು ಶ್ರಮಿಸುತ್ತಾರೆ. ಈ ಜನರು ಜೀವನವನ್ನು ಪೂರ್ಣವಾಗಿ ಆನಂದಿಸುತ್ತಾರೆ.  


M ಅಕ್ಷರದಿಂದ ಆರಂಭವಾಗುವ ಹೆಸರು :    
M  ಅಕ್ಷರದಿಂದ  ಹೆಸರು ಆರಂಭವಾಗುವ  ಜನರು ತಮ್ಮ ಹವ್ಯಾಸಗಳನ್ನು ಪೂರೈಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅವರು ಒಳ್ಳೆಯ ಬಟ್ಟೆಗಳನ್ನು ಧರಿಸಲು, ತಿನ್ನಲು, ಪ್ರಯಾಣಿಸಲು ಇಷ್ಟಪಡುತ್ತಾರೆ. ಈ ಜನರು ತುಂಬಾ ಬುದ್ಧಿವಂತರು ಮತ್ತು ಯಶಸ್ಸನ್ನು ಹೇಗೆ ಪಡೆಯುವುದು ಎನ್ನುವುದನ್ನು ತಿಳಿದಿರುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.