Vastu Tips for Wind Chimes:ಅದೃಷ್ಟಕ್ಕಾಗಿ ಹಾಕುವ ವಿಂಡ್ ಚೈಮ್ ದುರಾದೃಷ್ಟವನ್ನೂ ತಂದೊಡ್ಡಬಹುದು .! ತಿಳಿದಿರಲಿ ಈ ನಿಯಮ

Vastu Tips for Wind Chimes: ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಬಹಳ ಮಂಗಳಕರವೆಂದು ವಿವರಿಸಲಾಗಿದೆ. ಈ ವಸ್ತುಗಳನ್ನು  ಮನೆಯಲ್ಲಿ ಹಾಕುವುದರಿಂದ ಅದೃಷ್ಟವನ್ನು ತರುತ್ತವೆ. ಆದರೆ ಅವುಗಳನ್ನು ತಪ್ಪಾದ ರೀತಿಯಲ್ಲಿ  ಬಳಸುವುದರಿಂದ ದುರದೃಷ್ಟವೂ ಬಂದೊದಗಬಹುದು. 

Written by - Ranjitha R K | Last Updated : May 5, 2022, 09:36 AM IST
  • ವಿಂಡ್ ಚೈಮ್ಸ್ ಅನ್ನು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ.
  • ವಾಸ್ತು ಶಾಸ್ತ್ರದಲ್ಲಿ ವಿಂಡ್ ಚೈಮ್ ಅನ್ನು ಬಹಳ ಮಂಗಳಕರವೆಂದು ಕರೆಯಲಾಗುತ್ತದೆ
  • ವಿಂಡ್ ಚೈಮ್ ಅನ್ನು ಅಳವಡಿಸುವ ಮುನ್ನ ಕೆಲವೊಂದು ಪ್ರಮುಖ ವಿಚಾರಗಳನ್ನು ತಿಳಿದುಕೊಂಡಿರಬೇಕು
Vastu Tips for Wind Chimes:ಅದೃಷ್ಟಕ್ಕಾಗಿ ಹಾಕುವ ವಿಂಡ್ ಚೈಮ್ ದುರಾದೃಷ್ಟವನ್ನೂ ತಂದೊಡ್ಡಬಹುದು .! ತಿಳಿದಿರಲಿ ಈ ನಿಯಮ  title=
Vastu Tips for Wind Chimes (file photo)

ಬೆಂಗಳೂರು : Vastu Tips for Wind Chimes: ವಿಂಡ್ ಚೈಮ್ಸ್ ಅನ್ನು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಂಡ್ ಚೈಮ್ ಅನ್ನು ಬಹಳ ಮಂಗಳಕರವೆಂದು ಪರಿಗಣಿಸಿ, ಅದನ್ನು ಮನೆಯ ಕೆಲವು ಭಾಗಗಳಲ್ಲಿ ನೇತುಹಾಕಲು ಸಲಹೆ ನೀಡಲಾಗುತ್ತದೆ. ವಿಂಡ್ ಚೈಮ್ ಅನ್ನು ಅಳವಡಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಗತಿ ಇರುತ್ತದೆ. ಆದರೆ ತಪ್ಪಾದ ಸ್ಥಳದಲ್ಲಿ ವಿಂಡ್ ಚೈಮ್ ಅನ್ನು ನೇತು ಹಾಕುವುದರಿಂದ ಮನೆಯಲ್ಲಿ ದುರಾ ದೃಷ್ಟ ವಕ್ಕಿರಿಸಬಹುದು ಎನ್ನಲಾಗುತ್ತದೆ. ಹಾಗಾಗಿ ವಿಂಡ್ ಚೈಮ್ ಅನ್ನು ಅಳವಡಿಸುವ ಮುನ್ನ ಕೆಲವೊಂದು ಪ್ರಮುಖ ವಿಚಾರಗಳನ್ನು ತಿಳಿದುಕೊಂಡಿರುವುದು ಉತ್ತಮ. 

ವಿಂಡ್ ಚೈಮ್ ಅನ್ನು ಈ ರೀತಿ ಹಾಕಿ : 
ವಿಂಡ್ ಚೈಮ್ ಅನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಇರಿಸಿ. ವಿಂಡ್ ಚೈಮ್ ಮರದ್ದಾಗಿದ್ದರೆ, ಅದನ್ನು ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ನೇತುಹಾಕಿ. ಇನ್ನು  ಲೋಹದ ವಿಂಡ್ ಚೈಮ್ ಅನ್ನು  ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಹಾಕಬೇಕು. ವಿಂಡ್ ಚೈಮ್ ಅನ್ನ್ಫ್ ತಪ್ಪು ದಿಕ್ಕಿನಲ್ಲಿ ಹಾಕಿದರೆ ಮನೆಯಲ್ಲಿ ಅನಾವಶ್ಯಕ ಗೊಂದಲಗಳು,  ಮನೆಯ ಸದಸ್ಯರ ನಡುವೆ ವೈಮನಸ್ಸು ಮತ್ತು ವೈಷಮ್ಯವನ್ನು ಉಂಟುಮಾಡುತ್ತದೆ. 

ಇದನ್ನೂ ಓದಿ : ಹುಣ್ಣಿಮೆ ದಿನದಂದು ಚಂದ್ರ ಗ್ರಹಣ: ಈ ವಿಷಯಗಳನ್ನು ತಪ್ಪದೇ ತಿಳಿಯಿರಿ

ಅಡುಗೆ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ವಿಂಡ್ ಚೈಮ್ ಅನ್ನು ಎಂದಿಗೂ ಹಾಕಬೇಡಿ. ಈ ಸ್ಥಳಗಳು ಶಕ್ತಿಯ ಮೂಲಗಳಾಗಿವೆ. ಈ ಸ್ಥಳಗಳಲ್ಲಿ ವಿಂಡ್ ಚೈಮ್ ಅನ್ನು ಹಾಕುವುದರಿಂದ ಶಕ್ತಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು. ಇದು ವಿಶೇಷವಾಗಿ ಮನೆಯ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಮುಖ್ಯ ದ್ವಾರ, ಬಾಲ್ಕನಿ ಅಥವಾ ಕಿಟಕಿಯ ಮೇಲೆ ವಿಂಡ್ ಚೈಮ್ ಅನ್ನು ಇಡುವುದು ಉತ್ತಮ.

ಇನ್ನು ಮಲಗುವ ಕೋಣೆಯಲ್ಲಿ ಕೂಡಾ ವಿಂಡ್ ಚೈಮ್‌ಗಳನ್ನು ಹಾಕುವುದನ್ನು ತಪ್ಪಿಸಬೇಕು. ಒಂದು ವೇಳೆ, ಮಲಗುವ ಕೋಣೆಗೆ  ಹೊಂದಿಕೊಂಡಿರುವ  ಬಾಲ್ಕನಿಯಲ್ಲಿ ಅಥವಾ ಕಿಟಕಿಯಲ್ಲಿ ವಿಂಡ್ ಚೈಮ್‌ಗಳನ್ನು ನೇತುಹಾಕುವುದಾದರೆ, 9 ರಾಡ್‌ಗಳಿರುವ ವಿಂಡ್ ಚೈಮ್ ಅನ್ನು ಮಾತ್ರ ಬಳಸಿ. ಇಲ್ಲದಿದ್ದರೆ, ಮನೆಯವರ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ : Planet Transits in May: ಈ ರಾಶಿಯವರಿಗೆ ಇನ್ನು 5 ದಿನಗಳಲ್ಲಿ ಸುವರ್ಣ ದಿನಗಳು ಆರಂಭ

ಮನೆಯ ಮುಖ್ಯ ದ್ವಾರದಲ್ಲಿ ಸಣ್ಣ ವಿಂಡ್ ಚೈಮ್ ಅನ್ನು ಎಂದಿಗೂ ಹಾಕಬೇಡಿ. ಏಕೆಂದರೆ ಇದು ನಕಾರಾತ್ಮಕ ಶಕ್ತಿ ಹೊರಬರಲು ಅನುಮತಿಸುವುದಿಲ್ಲ. ವಿಂಡ್ ಚೈಮ್ ಅನ್ನು ಅಳವಡಿಸುವ  ಸ್ಥಳಕ್ಕೆ ಅನುಗುಣವಾಗಿ ಅದರ ಗಾತ್ರವನ್ನು ಆಯ್ಕೆ ಮಾಡಬೇಕು. 

ಜನರು ಕುಳಿತುಕೊಳ್ಳುವ ಸ್ಥಳದಲ್ಲಿ ವಿಂಡ್ ಚೈಮ್ ಅನ್ನು ಹಾಕಬಾರದು.  ಹಾಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಇನ್ನು ಗಾಜಿನ ಅಥವಾ ಪ್ಲಾಸ್ಟಿಕ್ ವಿಂಡ್ ಚೈಮ್ ಅನ್ನು ಎಂದಿಗೂ ಬಳಸಬೇಡಿ. ವಿಂಡ್ ಚೈಮ್ ಯಾವತ್ತೂ  ಮರ ಅಥವಾ ಲೋಹದಿಂದ ಮಾತ್ರ ಮಾಡಿರಬೇಕು.  

 

(ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News