ಬೆಂಗಳೂರು : ನಮ್ಮ ಆರೋಗ್ಯವು ನಾವು ಯಾವ ಆಹಾರ ಸೇವಿಸುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಬದಲಾಗುತ್ತಿರುವ ಜೀವಶೈಲಿಯಿಂದಾಗಿ ಎಲ್ಲರೂ ಸಮಯದ ಅಭಾವವನ್ನೇ ಎದುರಿಸುತ್ತಿರುತ್ತಾರೆ. ಇಂಥಹ ಪರಿಸ್ಥಿತಿಯಲ್ಲಿ ಎಲ್ಲಾ ಕೆಲಸಗಳಲ್ಲಿಯೂ ಶಾರ್ಟ್ ಕಟ್ ಹುಡುಕುತ್ತಾರೆ. ಆಹಾರದ ವಿಷಯಕ್ಕೆ ಬಂದಾಗಲೂ ಇದು ಅನ್ವಯಿಸುತ್ತದೆ. ಬದಲಾದ ಜೀವನಶೈಲಿ, ಸಮಯ ಅಭಾವದ ಕಾರಣ ಜನರು ಜಂಕ್ ಫುಡ್ ನತ್ತ ಮುಖ ಮಾಡುತ್ತಿದ್ದಾರೆ. ಇದರ ಪರಿಣಾಮ ಆರೋಗ್ಯದ ಮೇಲೆ ಕಾಣಿಸುತ್ತದೆ.  ನಾವು ಅನುಸರಿಸುವ ಕೆಟ್ಟ ಆಹಾರ ಪದ್ದತಿಯಿಂದಾಗಿಯೇ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾಂಪೂ, ಕಂಡಿಷನರ್, ಎಣ್ಣೆ, ಹೇರ್ ಕಲರ್ ಮೊರೆ ಹೋಗುತ್ತವೆ. ಇವುಗಳಲ್ಲಿ ಕೆಲವು ತಕ್ಷಣಕ್ಕೆ ಸಮಸ್ಯೆಗೆ ಪರಿಹಾರ ನೀಡಬಹುದು. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ. ಅಲ್ಲದೆ, ಇವುಗಳಲ್ಲಿ ಅಪಾರ ಪ್ರಮಾಣದ ರಾಸಾಯನಿಕಗಳನ್ನು ಬಳಸಿರುತ್ತಾರೆ. ಹಾಗಾಗಿ ಇದು ಕೂದಲಿನ ಮೇಲೆ ಅಡ್ಡ ಪರಿಣಾಮವನ್ನು ಕೂಡಾ ಬೀರುತ್ತದೆ.   ಆದರೆ ಈಗ  ನಾವು ಹೇಳುವ ಮನೆಮದ್ದನ್ನು ಬಳಸಿದರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಕೂದಲಿಗೆ ಹಚ್ಚಿ ಕರಿ ಬೇವು : 
ಮೆಲನಿನ್ ಕೊರತೆಯಿಂದಾಗಿ, ಕೂದಲು ಬಿಳಿಯಾಗುತ್ತವೆ. ಕರಿಬೇವಿನ ಎಲೆಗಳು ಕೂದಲಿನಲ್ಲಿರುವ ಮೆಲನಿನ್ ಕೊರತೆಯನ್ನು ಹೋಗಲಾಡಿಸುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಮಾತ್ರವಲ್ಲ ಕಳೆದು ಹೋದ ಕಪ್ಪು ಬಣ್ಣವನ್ನು ಮತ್ತೆ ಮರಳಿಸುತ್ತದೆ. 


 Preserving Vegetables Without Fridge: ಫ್ರಿಡ್ಜ್ ಇಲ್ಲದೆಯೇ ಒಂದು ವಾರಗಳ ತನಕ ಹಣ್ಣು-ತರಕಾರಿ ಫ್ರೆಶ್ ಆಗಿಇದನ್ನೂ ಓದಿ :ಡಲು ಈ ಟ್ರಿಕ್ಸ್ ಅನುಸರಿಸಿ


ಕರಿಬೇವಿನ ಎಲೆಗಳನ್ನು ಬಳಸಿ ತಯಾರಿಸಿ ಹೇರ್ ಮಾಸ್ಕ್ : 
ಹೇರ್ ಮಾಸ್ಕ್ ಮಾಡಲು ಬೇಕಾಗುವ ಸಾಮಗ್ರಿಗಳು : 
1.ಕರಿಬೇವಿನ ಎಲೆಗಳು
2. ತೆಂಗಿನ ಎಣ್ಣೆ
3. ಬೇವಿನ ಎಲೆಗಳು 
4. ವಿಟಮಿನ್ ಇ ಕ್ಯಾಪ್ಸುಲ್ ಗಳು 
5.  ಮೊಸರು 


ಹೇರ್ ಮಾಸ್ಕ್ ಮಾಡುವ ವಿಧಾನ : 
ಹೇರ್ ಮಾಸ್ಕ್ ಮಾಡಲು ಕರಿಬೇವು ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಸರಿಯಾಗಿ ಬೀಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ಅದು ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ಇಷ್ಟು ಮಾಡಿಕೊಂಡ ನಂತರ ಹೇರ್ ಮಾಸ್ಕ್ ರೆಡಿಯಾಗುತ್ತದೆ. 


ಇದನ್ನೂ ಓದಿ : ಈ ಅಪಾಯಕಾರಿ ರೋಗಗಳನ್ನು ಬುಡ ಸಮೇತ ಕಿತ್ತೆಸೆಯುತ್ತದೆ ಹಸಿರು ಕಡಲೆ ಕಾಳು


ತಯಾರಿಸಿದ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚುವುದು ಹೇಗೆ ? : 
ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿಕೊಳ್ಳಿ. ನಂತರ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಅನ್ನು  ಹಚ್ಚಿ. ಒಂದು ಗಂಟೆ ಹಾಗೆಯೇ ಬಿಟ್ಟು, ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ  ರೀತಿ ಮಾಡುತ್ತಾ ಬಂದರೆ ಶೀಘ್ರದಲ್ಲಿಯೇ ಪರಿಣಾಮ ಗೋಚರಿಸುತ್ತದೆ. ಬಿಳಿ ಕೂದಲು ಕಪ್ಪಾಗುತ್ತದೆ. ಬಿಳಿ ಕೂದಲಿನ ಬೆಳವಣಿಗೆ ಕೂಡಾ ನಿಲ್ಲುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.