ಈ ಅಪಾಯಕಾರಿ ರೋಗಗಳನ್ನು ಬುಡ ಸಮೇತ ಕಿತ್ತೆಸೆಯುತ್ತದೆ ಹಸಿರು ಕಡಲೆ ಕಾಳು

ಹಸಿರು ಕಡಲೆ ತಿನ್ನಲು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಸಿರು ಧಾನ್ಯ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ತೆಗೆದುಹಾಕುತ್ತದೆ. 

Written by - Ranjitha R K | Last Updated : Jan 23, 2023, 11:39 AM IST
  • ಹಸಿರು ಮತ್ತು ಹಸಿ ಕಾಳುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ.
  • ತರಕಾರಿ, ಸಲಾಡ್ ಗಳ ಜೊತೆಗೆ ಕೂಡಾ ಈ ಹಸಿ ಕಾಳುಗಳನ್ನು ಸೇರಿಸಲಾಗುತ್ತದೆ.
  • ಹಸಿ ಕಾಳಿನಲ್ಲಿರುವ ಪೋಷಕಾಂಶಗಳು ಯಾವುವು ?
ಈ ಅಪಾಯಕಾರಿ ರೋಗಗಳನ್ನು ಬುಡ ಸಮೇತ ಕಿತ್ತೆಸೆಯುತ್ತದೆ ಹಸಿರು ಕಡಲೆ ಕಾಳು  title=

ಬೆಂಗಳೂರು : ಹಸಿರು ಮತ್ತು ಹಸಿ ಕಾಳುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇತರ ತರಕಾರಿ ಮತ್ತು ಸಲಾಡ್ ಗಳ ಜೊತೆಗೆ ಕೂಡಾ ಈ ಹಸಿ ಕಾಳುಗಳನ್ನು ಸೇರಿಸಲಾಗುತ್ತದೆ. ಹಸಿರು ಕಡಲೆ ತಿನ್ನಲು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಸಿರು ಧಾನ್ಯ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ತೆಗೆದುಹಾಕುತ್ತದೆ. 

ಹಸಿ ಕಾಳಿನಲ್ಲಿರುವ ಪೋಷಕಾಂಶಗಳು :
ಹಸಿರು ಕಡಲೆ ಕಾಳಿನಲ್ಲಿ ಸಸ್ಯ ಆಧಾರಿತ ಪ್ರೋಟೀನ್ ಇದೆ. ಇದರಲ್ಲಿ  ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಫೈಬರ್, ಕಬ್ಬಿಣ, ಫೋಲೇಟ್, ರಂಜಕ, ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೆಲೆನಿಯಮ್, ಕ್ಯಾಲ್ಸಿಯಂ, ಕ್ಯಾಲೋರಿಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. 

ಇದನ್ನೂ ಓದಿ : Diabetes: ರಕ್ತದಲ್ಲಿನ ಸಕ್ಕರೆ ಮಟ್ಟ ಕಂಟ್ರೋಲ್‌ನಲ್ಲಿಡುತ್ತೆ ಈ ವಿಶೇಷ ಚಹಾ

ಸ್ನಾಯುಗಳನ್ನು ಬಲಗೊಳ್ಳುತ್ತವೆ : 
ಹಸಿರು ಕಡಲೆ ಕಾಳುಗಳಲ್ಲಿ ಸಸ್ಯ ಆಧಾರಿತ ಪ್ರೋಟೀನ್ ಇರುವುದರಿಂದ ಇದು  ಸ್ನಾಯುಗಳನ್ನು ಬಲಗೊಳಿಸುತ್ತವೆ. ಇದು ಪ್ರೋಟೀನ್‌ ನಿಂದ ಸಮೃದ್ಧವಾಗಿದೆ.  ಹಾಗಾಗಿ ಮೂಳೆಗಳನ್ನು ಬಲಪಡಿಸುವ ಕೆಲಸ ಕೂಡಾ ಮಾಡುತ್ತದೆ.

ಗರ್ಭಿಣಿಯರಿಗೆ ಪ್ರಯೋಜನಕಾರಿ :
ಗರ್ಭಿಣಿಯರಿಗೂ ಹಸಿರು ಕಾಳು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಬಿ9 ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಗರ್ಭಪಾತದ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ. 

ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ :
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಹಸಿರು ಕಡಲೆ ಕಾಳು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ. ಹೀಗಾಗಿ ಚಯಾಪಚಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಸಿರು  ಕಡಲೆ ಕಾಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ಬರುವ ಅಪಾಯವೂ ಕಡಿಮೆಯಾಗುತ್ತದೆ.

ಇದನ್ನೂ ಓದಿ : Egg Side Effects : ಮೊಟ್ಟೆ ಜೊತೆ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನು!

ಹೃದಯದ ಆರೋಗ್ಯಕ್ಕೆ : 
ಹಸಿರು ಕಡಲೆ ಕಾಳು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೂದಲ ಬೆಳವಣಿಗೆಗೆ :
ಹಸಿರು ಕಡಲೆ ಕಾಳಿನಲ್ಲಿ ಪ್ರೋಟೀನ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದು ಕೂದಲನ್ನು ಬೇರಿನಿಂದಲೇ ಬಲಪಡಿಸುವ ಕೆಲಸ ಮಾಡುತ್ತದೆ. ಒಣ ತ್ವಚೆಯ ಸಮಸ್ಯೆಯನ್ನೂ ದೂರ ಮಾಡುತ್ತದೆ. 

ಮಾನಸಿಕ ಆರೋಗ್ಯಕ್ಕೆ : 
ಹಸಿರು ಕಡಲೆ ಕಾಳಿನಲ್ಲಿ ಫೋಲೇಟ್ ಸಮೃದ್ಧವಾಗಿರುತ್ತದೆ. ಇದು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಸಿರು ಕಡಲೆ ಕಾಲು ತಿನ್ನುವುದರಿಂದ ಖಿನ್ನತೆಯಂತಹ ಸಮಸ್ಯೆಗಳು ದೂರವಾಗುತ್ತವೆ.  

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News