Neem Leaves Benefits : ಬೇವಿನ ಸಸ್ಯವು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಮರದ ಪ್ರತಿಯೊಂದು ಭಾಗವೂ ಮನುಷ್ಯನ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದರ ಎಲೆಗಳು, ಮರ, ತೊಗಟೆ, ಹಣ್ಣು ಮತ್ತು ಹೂವುಗಳು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿವೆ. ಆದ್ದರಿಂದ ಇದನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ತೂಕವನ್ನು ಕಳೆದುಕೊಳ್ಳಲು ಬಯಸುವವರು ಕೂಡಾ ಬೇವನ್ನು ಬಳಸಬಹುದು.


COMMERCIAL BREAK
SCROLL TO CONTINUE READING

ಪ್ರತಿದಿನ ಬೇವಿನ ಎಲೆಗಳನ್ನು ಅಗಿಯಿರಿ : 
ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ 3 ರಿಂದ 4 ಬೇವಿನ ಎಲೆಗಳನ್ನು ಸೇವಿಸಿದರೆ, ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು, ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.


ಬೇವಿನ ಎಲೆಗಳ ಪ್ರಯೋಜನಗಳು :
1 ಬೇವಿನ ಎಲೆಗಳನ್ನು ತಿನ್ನುವ ಮೂಲಕ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಬೇವಿನ ಎಲೆಗಳಿಂದ ರಸವನ್ನು ತಯಾರಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಕುಡಿಯಬೇಕು. ಇದು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸುತ್ತದೆ.


ಇದನ್ನೂ ಓದಿ : ಮಳೆಗೆ ಬಟ್ಟೆ ಒಣಗುತ್ತಿಲ್ಲವೇ ? ಈ ಮೂರು ವಿಧಾನ ಅನುಸರಿಸಿದರೆ ಒದ್ದೆ ಬಟ್ಟೆಯ ಚಿಂತೆ ಇರುವುದಿಲ್ಲ


2. ಬೇವಿನ ಎಲೆಗಳನ್ನು ಜಗಿಯುವುದರಿಂದ ರೋಗನಿರೋಧಕ ಶಕ್ತಿ  ಹೆಚ್ಚಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಕರೋನಾ ಅವಧಿಯಿಂದಲೂ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ  ಸಲುವಾಗಿ ಈ ಎಲೆಯನ್ನು ಬಳಸುವಂತೆ ಸೂಚಿಸಲಾಗಿತ್ತು. 


3. ಬೇವು ದೇಹದಲ್ಲಿ ಇರುವ ವಿಷವನ್ನು ತೆಗೆದುಹಾಕುತ್ತದೆ. ಅದಕ್ಕಾಗಿಯೇ ಬೇವಿನ ಎಲೆಗಳಿಂದ ತಯಾರಿಸಿದ ರಸವನ್ನು ಡಿಟಾಕ್ಸ್ ಡ್ರಿಂಕ್ಸ್ ಎಂದೂ ಕರೆಯಲಾಗುತ್ತದೆ. 


4. ಬೇವಿನ ಎಲೆಗಳಲ್ಲಿ ಬಹಳಷ್ಟು ಫೈಬರ್ ಕಂಡುಬರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಚಯಾಪಚಯ ಕೂಡಾ  ಬಲಗೊಳ್ಳುತ್ತದೆ.


5. ಈ ಎಲೆಯಲ್ಲಿ ಅನೇಕ ರೀತಿಯ ಆ್ಯಂಟಿ ಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು ಕೆಲಸ ಮಾಡುತ್ತದೆ.


ಇದನ್ನೂ ಓದಿ :  Weight Loss Tips: ಈ ಡಾರ್ಕ್‌ ಫುಡ್‌ಗಳಿಂದ 7 ದಿನದಲ್ಲಿ 3 ಕೆಜಿ ತೂಕ ಇಳಿಸಬಹುದು!


6. ಹಲ್ಲುಗಳಲ್ಲಿ ಹುಳುಕಾಗಿದ್ದರೆ ಬೇವಿನ ಎಲೆಗಳನ್ನು ಪುಡಿಮಾಡಿ ಪೇಸ್ಟ್ ತಯಾರಿಸಿ ಅದರಿಂದ ಹಲ್ಲುಗಳನ್ನು ಉಜ್ಜಿದರೆ, ಅದು ಬಾಯಿಯೊಳಗಿನ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.


7. ಬೆಂಕಿಯಿಂದ ದೇಹದ ಯಾವುದೇ ಭಾಗ ಸುಟ್ಟರೆ ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ಅರೆದು ಈ ಪೇಸ್ಟ್ ಅನ್ನು ಬಾಧಿತ ಜಾಗಕ್ಕೆ ಹಚ್ಚಬೇಕು. ಇದರ ನಂಜುನಿರೋಧಕ ಗುಣಲಕ್ಷಣಗಳು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.