Hair Care Tips: ಪ್ರಸ್ತುತ ಜೀವನ ಜೀವನಶೈಲಿಯಿಂದಾಗಿ ಅಕಾಲಿಕ ಬಿಳಿ ಕೂದಲು, ಡ್ರೈ ಹೇರ್, ಕೂದಲುದುರುವಿಕೆ, ಡ್ಯಾಂಡ್ರಫ್ ನಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಆದರೆ, ಈ ಎಲ್ಲಾ ಸಮಸ್ಯೆಗಳಿಗೂ ಕೂಡ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಒಂದೇ ಒಂದು ಪದಾರ್ಥ ಪರಿಹಾರವನ್ನು ನೀಡಲಿದೆ. ಕೂದಲಿನ ನಾನಾ ಸಮಸ್ಯೆಗಳಿಗೆ ಚಹಾ ಎಲೆಗಳು ಎಂದರೆ ಟೀ ಸೊಪ್ಪು ಅತ್ಯುತ್ತಮ ಮನೆಮದ್ದು ಎಂದು ನಿಮಗೆ ತಿಳಿದಿದೆಯೇ?
ವಾಸ್ತವವಾಗಿ, ಚಹಾ ಎಲೆಗಳಲ್ಲಿ ಆಂಟಿಸೆಪ್ಟಿಕ್, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಸಮೃದ್ಧವಾಗಿವೆ. ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಚಹಾ ಎಲೆಯ ನೀರು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಚಹಾ ಎಲೆಗಳ ಸಹಾಯದಿಂದ ಬಿಳಿ ಕೂದಲ ಸಮಸ್ಯೆ, ಕೂದಲು ಉದುರುವಿಕೆ, ಒಡೆಯುವಿಕೆ ಮತ್ತು ಉದುರುವಿಕೆಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆರೋಗ್ಯಕರ ಹೊಳೆಯುವ ಕೂದಲನ್ನು ಪಡೆಯಲು ಚಹಾ ಎಲೆಗಳನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ....
ಬಿಳಿ ಕೂದಲ ಚಿಕಿತ್ಸೆಗೆ ಚಹಾ ಎಲೆಗಳನ್ನು ಈ ರೀತಿ ಬಳಸಿ:
ಅಕಾಲಿಕ ಬಿಳಿ ಕೂದಲಿನ ಚಿಕಿತ್ಸೆಗೆ ಹಾಗೂ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಚಹಾ ಎಲೆಗಳು ತುಂಬಾ ಪ್ರಯೋಜನಕಾರಿ ಆಗಿವೆ. ಟೀ ಸೊಪ್ಪಿನ ನೀರನ್ನು ಬಳಸುವುದರಿಂದ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
ಕೂದಲ ಆರೈಕೆಗಾಗಿ ಟೀ ಸೊಪ್ಪನ್ನು ಈ ರೀತಿ ಬಳಸಿ:
ಇದಕ್ಕಾಗಿ, ಮೊದಲು ಒಂದು ಲೋಟ ನೀರಿನಲ್ಲಿ ಒಂದೆರಡು ಚಮಚ ಟೀ ಸೊಪ್ಪನ್ನು ಹಾಕಿ ಅದು ಬಣ್ಣ ಬಿಡುವವರೆಗೂ ಚೆನ್ನಾಗಿ ಕುದಿಸಿ. ಬಳಿಕ ಆ ನೀರನ್ನು ಸೋಸಿ ಅದಕ್ಕೆ ಕಾಫಿ ಪುಡಿಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ.
ಇದಲ್ಲದೆ, ಮೇಲೆ ಉಲ್ಲೇಖಿಸಿದಂತೆ ಟೀ ಡಿಕಾಕ್ಷನ್ ತಯಾರಿಸಿ ಅದಕ್ಕೆ ಮೆಹಂದಿಪುಡಿಯನ್ನು ಬೆರೆಸಿ ಹಚ್ಚುವುದರಿಂದಲೂ ಬಿಳಿಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಇದನ್ನೂ ಓದಿ- ಬೋಳು ತಲೆಯಲ್ಲಿಯೂ ಕೂದಲು ಮೂಡುವಂತೆ ಮಾಡುತ್ತದೆ ಈ ಮನೆ ಮನೆ ಮದ್ದು
ಕೂದಲುದುರುವಿಕೆ ಸಮಸ್ಯೆ: ಕೂದಲು ಉದುರುವಿಕೆ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಕೂದಲಿಗೆ ಸರಿಯಾದ ಆರೈಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ, ಚಹಾ ಎಲೆಗಳು ನಿಮ್ಮ ಈ ಸಮಸ್ಯೆಗೂ ಕೂಡ ಸುಲಭ ಪರಿಹಾರ ನೀಡಬಲ್ಲದು. ಇದಕ್ಕಾಗಿ, 2-3 ಚಮಚದಷ್ಟು ಚಹಾ ಎಲೆಗಳನ್ನು ತೆಗೆದುಕೊಳ್ಳಿ. ನಂತರ ಅದನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿ ಇಡಿ. ಬಳಿಕ ಅನ್ನ ಮಾಡುವಾಗ ಅದರ ಗಂಜಿಯನ್ನು ಬಸಿಯಿರಿ. ಬಳಿಕ ಎರಡನ್ನೂ ಬೆರೆಸಿಡಿ. ನೀವು ಕೂದಲಿಗೆ ಶಾಂಪೂ ಮಾಡಿದ ಬಳಿಕ ನೀವು ತಯಾರಿಸಿಟ್ಟಿರುವ ಟೀ ಡಿಕಾಕ್ಷನ್ ಹಾಗೂ ಗಂಜಿಯ ಮಿಶ್ರಣವನ್ನು ಕೂದಲಿಗೆ ಕಂಡಿಷನರ್ನಂತೆ ಬಳಸಿ. ಇದರಿಂದ ಕೂದಲುದುರುವ ಸಮಸ್ಯೆ ಬಗೆಹರಿಯುವುದು ಮಾತ್ರವಲ್ಲ, ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ, ಹೊಳೆಯುವಂತೆ ಮಾಡುತ್ತದೆ.
ಒಣ ಕೂದಲಿನ ಸಮಸ್ಯೆ:
ವಾತಾವರಣ ಬದಲಾದಂತೆ ಕೂದಲು ಹೆಚ್ಚು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಚಹಾ ಎಲೆಗಳಿಂದ ತಯಾರಿಸಿದ ಡಿಕಾಕ್ಷನ್ ನೊಂದಿಗೆ ಅಲೋವೆರಾ ಜೆಲ್ ಅನ್ನು ಬೆರೆಸಿ ಹಚ್ಚಿ. ಸುಮಾರು ಅರ್ಧ ಗಂಟೆಗಳವರೆಗೆ ಹಾಗೆ ಬಿಟ್ಟು ಬಳಿಕ ಹೇರ್ ವಾಶ್ ಮಾಡಿ. ಇದರಿಂದ ಒಣ ಕೂದಲಿನ ಸಮಸ್ಯೆ ಬಗೆಹರಿಯುವುದರ ಜೊತೆಗೆ ಕೂದಲು ಕಾಂತಿಯುತವಾಗುತ್ತದೆ.
ಇದನ್ನೂ ಓದಿ- ಈ ಪೋಷಕಾಂಶದ ಕೊರತೆಯಿಂದಾಗಿ ಕೂದಲು ಉದುರುತ್ತದೆ.! ದಟ್ಟ ಕೂದಲು ಬೇಕಾದರೆ ಏನು ಮಾಡಬೇಕು ?
ಕೂದಲ ಬೆಳವಣಿಗೆಗೆ ಚಹಾ ಎಲೆಗಳು:
ಕೂದಲಿನ ಬೆಳವಣಿಗೆಯನ್ನು ವೇಗವಾಗಿ ಹೆಚ್ಚಿಸಲು ನೀವು 3-4 ಬ್ಲಾಕ್ ಟೀ ಬ್ಯಾಗ್ ಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಅದು ಬಣ್ಣ ಬಿಟ್ಟ ಮೇಲೆ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಹೇರ್ ಸ್ಪ್ರೇ ಮಾಡಿ. ಬಳಿಕ 30-60 ನಿಮಿಷಗಳ ಕಾಲ ಬಿಟ್ಟು ಹೇರ್ ವಾಶ್ ಮಾಡಿ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.